FacebookTwitter

ದಿಲ್ಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಗ್ಯಾಂಗ್'ರೇಪ್; ಭಾರತದ ಮಾನ ಮೂರಾಬಟ್ಟೆ ಹರಾಜು!

    User Rating:  / 0
    PoorBest 

ನವದೆಹಲಿ(ಜ.15): ವಿದೇಶೀ ಮಹಿಳೆಯರೆಂದರೆ ನಮಗೆ ಭೋಗದ ವಸ್ತುಗಳೇ...? ಇತ್ತೀಚಿನ ಘಟನೆಗಳನ್ನ ನೋಡಿದಾಗ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆ. ದಿನೇ ದಿನೇ ದೇಶದಲ್ಲಿ ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಲೇ ಇವೆ. ಮಥುರಾದಲ್ಲಿ ಪೋಲೆಂಡ್ ದೇಶದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂತಹದೇ ಮತ್ತೊಂದು ಪೈಶಾಚಿಕ ಘಟನೆ ನಡೆದಿದೆ. ಡೆನ್ಮಾರ್ಕ್ ದೇಶದ 51 ವರ್ಷದ ಮಹಿಳೆ ಮೇಲೆ ಕಳೆದ ರಾತ್ರಿ ಆರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಶಂಕಿತರನ್ನ ಬಂಧಿಸಿ ವಿಚಾರಣಿ ನಡೆಸುತ್ತಿದ್ದಾರೆ...

ದಾರಿ ತಪ್ಪಿ ಸಿಕ್ಕಿಬಿದ್ದ ಮಹಿಳೆ...!
ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಡ್ಯಾನಿಶ್ ಮಹಿಳೆ ನಿನ್ನೆ, ಮಂಗಳವಾರ ರಾತ್ರಿ ದಾರಿ ತಪ್ಪಿದ್ದಾರೆ. ಪಹಾರ್'ಗಂಜ್'ನಲ್ಲಿರುವ ತನ್ನ ಹೋಟೆಲ್'ಗೆ ಹೋಗಬೇಕಿದ್ದ 51 ವರ್ಷದ ಆಕೆ, ನ್ಯೂಡೆಲ್ಲಿ ರೈಲ್ವೆ ಸ್ಟೇಷನ್ ಬಳಿ ದಿಕ್ಕುತೋಚದೇ ನಿಂತಿದ್ದಾರೆ. ಈ ವೇಳೆ, ಅಲ್ಲಿದ್ದ ಆರಕ್ಕೂ ಹೆಚ್ಚು ಜನರಿದ್ದ ಗುಂಪಿನ ಸಹಾಯ ಯಾಚಿಸಿದ್ದಾರೆ. ಆದರೆ, ಸಹಾಯ ಮಾಡುವ ನೆಪದಲ್ಲಿ ಆ ಯುವಕರ ಗುಂಪು ಈ ಮಹಿಳೆಯ ಬಳಿ ಇದ್ದ ವಸ್ತುಗಳನ್ನ ದೋಚಿದ್ದೂ ಅಲ್ಲದೇ ಸಾಮೂಹಿಕ ಅತ್ಯಾಚಾರವನ್ನೂ ಎಸಗಿದ್ದಾರೆ....

ಒಂದು ವಾರದಿಂದ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದ ಈ ಡ್ಯಾನಿಷ್ ಮಹಿಳೆಯ ಹೆಸರನ್ನ ಕಾರಣಾಂತರದಿಂದ ಪ್ರಕಟಿಸಲಾಗಿಲ್ಲ. ಸದ್ಯ ಈ ಮಹಿಳೆಯನ್ನ ಡೆನ್ಮಾರ್ಕ್ ರಾಯಭಾರ ಕಚೇರಿಗೆ ಕರೆದೊಯ್ಯಲಾಗಿದ್ದು ಅಲ್ಲಿಯೇ ಆಕೆ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ.

ಪಹಾರ್'ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ, ಅತ್ಯಾಚಾರಕ್ಕೊಳಗಾದ ಮಹಿಳೆಯು ವೈದ್ಯಕೀಯ ಪರೀಕ್ಷೆಗೊಳಪಡಲು ನಿರಾಕರಿಸಿರುವುದು ತಿಳಿದುಬಂದಿದೆ. ಆದರೆ, ತನಿಖೆ ಮುಂದುವರಿಸಿರುವ ಪೊಲೀಸರು ಕೆಲ ಶಂಕಿತರನ್ನ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ...

ಪೋಲೆಂಡ್.. ಜರ್ಮನ್ ಮಹಿಳೆಯರ ಮೇಲೂ...!!
ನಿನ್ನೆಯಷ್ಟೇ ಚೆನ್ನೈ-ಮಂಗಳೂರು ಎಕ್ಸ್'ಪ್ರೆಸ್ ರೈಲಿನಲ್ಲಿ ಜರ್ಮನ್ ಮೂಲದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ವಾರಗಳ ಹಿಂದಷ್ಟೇ ನವದೆಹಲಿಯಲ್ಲಿ ಎರಡು ವರ್ಷದ ಮಗುವಿನೊಂದಿಗೆ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದ ಪೊಲ್ಯಾಂಡ್ ದೇಶದ ಮಹಿಳೆಯ ಮೇಲೆ ಟ್ಯಾಕ್ಸಿ ಡ್ರೈವರ್ ಅತ್ಯಾಚಾರ ಎಸಗಿದ್ದ ಪ್ರಕರಣ ಇನ್ನೂ ಮಾಸಿಯೇ ಇಲ್ಲ...

 

 

 

Add comment
 

More items in this section