FacebookTwitter

ದಲಿತರು-ಸವರ್ಣೀಯರ ನಡುವೆ ಘರ್ಷಣೆ; ಒಬ್ಬ ದಲಿತನ ಬರ್ಬರ ಹತ್ಯೆ

    User Rating:  / 2
    PoorBest 
ದಲಿತನ ಹತ್ಯೆ

ಯಾದಗಿರಿ: ಇಲ್ಲಿನ ಶಹಾಪುರ ತಾಲೂಕಿನ ಕನ್ಯಾಕೊಳ್ಳೂರು ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದ್ದು ಈ ಸಂಬಂಧ ಎಲ್ಲಾ ಜಾತಿಯ ಜನರೂ ಸೇರಿ ದೇವಾಲಯದ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ ದಲಿತ ಸಮುದಾಯದ ಜನರೂ ಕೂಡ ತಮ್ಮ ಗ್ರಾಮದೇವತೆಯ ಜಾತ್ರೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸಂದರ್ಭ ಇದಕ್ಕೆ ಸವರ್ಣೀಯರು ಅಡ್ಡಿಪಡಿಸಿದ ವೇಳೆ ಘರ್ಷಣೆ ನಡೆದು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಚೌಡೇಶ್ವರಿ ಜಾತ್ರೆಯ ಬ್ಯಾನರ್ ಕಟ್ಟುವ ವಿಚಾರವಾಗಿ ದಲಿತರು ಮತ್ತು ಸವರ್ಣೀಯರ ನಡುವೆ ಘರ್ಷಣೆ ನಡೆದು ಈ ಹತ್ಯೆ ನಡೆದಿದ್ದು, ತದನಂತರ ಸೃಷ್ಟಿಯಾಗಿದ್ದ ಉದ್ರಿಕ್ತ ವಾತಾವರಣದಿಂದಾಗಿ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿರುವುದಾಗಿ ಗೊತ್ತಾಗಿದೆ. ಘಟನೆಯಲ್ಲಿ ಹತ್ಯೆಯಾದ ದಲಿತ ವ್ಯಕ್ತಿಯನ್ನು ದೇವೇಂದ್ರಪ್ಪ (45) ಎಂದು ಗುರುತಿಸಲಾಗಿದೆ.

ದೇವಾಲಯದ ಜಾತ್ರೆಯ ಬ್ಯಾನರ್ ಕಟ್ಟುತ್ತಿದ್ದ ದಲಿತರಿಗೆ ಅಡ್ಡಿಪಡಿಸಿದ ಸವರ್ಣೀಯರು, ನೀವ್ಯಾಕ್ರೀ ದೇವಾಲಯದ ಬ್ಯಾನರ್ ಕಟ್ಟಿತ್ತಿದ್ದೀರ. ನಿಮ್ಮನ್ನು ಯಾರು ಬ್ಯಾನರು ಕಟ್ಟಲು ಹೇಳಿದ್ದು ಎಂದು ವರಾತ ತೆಗೆದು ಅಡ್ಡಿಪಡಿಸಿದರೆನ್ನಲಾಗಿದೆ. ಈ ಸಂದರ್ಭ ಪ್ರತಿಕ್ರಿಯಿಸಿದ ದಲಿತ ಭಕ್ತಾಧಿಗಳ ವಿರುದ್ಧ ಕೆಲ ಕಿಡಿಗೇಡಿ ಸವರ್ಣೀಯರು ಹಲ್ಲೆ ನಡೆಸಿ ಒಬ್ಬ ವ್ಯಕ್ತಿಯನ್ನು ಬರ್ಭರವಾಗಿ ಹತ್ಯೆ ಮಾಡಿದ್ದಾರೆ.

ಬರ್ಭರ ಹತ್ಯೆ ಖಂಡಿಸಿರುವ ದಲಿತ ಭಕ್ತಾಧಿಗಳು ಕೊಲೆಗಾರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಶಹಾಪುರದ ಬಸವೇಶ್ವರ ವೃತ್ತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ಉದ್ರಿಕ್ತ ಗುಂಪಿನಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಸುಮಾರು 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿದೆ. ಇತರೆ 10 ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಗೊತ್ತಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದು ಹತ್ಯೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ: ದೈವತ್ವವನ್ನು ನಂಬಿ ಬದುಕು ಸವೆಸುತ್ತಿದ್ದ ಅಮಾಯಕರು, ಶ್ರಮಜೀವಿಗಳ ದುಡಿಮೆಯನ್ನು ದೇವರು ಸಂಪ್ರದಾಯದ ಹೆಸರಿನಲ್ಲಿ ಉಪಾಯದಿಂದ ಕಿತ್ತು ತಿಂದು ಬದುಕು ಸವೆಸುತ್ತಿದ್ದ ಪುರೋಹಿತಶಾಹಿ ಕಿಡಿಗೇಡಿಗಳಿಂದ ಸೃಷ್ಟಿಯಾಯಿತೆನ್ನಲಾದ ವರ್ಣಾಶ್ರಮ ಪದ್ಧತಿಯಿಂದ ಬಲಿಪಶುವಾದ ದಲಿತರು, ಈ ಹಿಂದಿನಿಂದಲೂ ಸವರ್ಣೀಯರಿಂದ ಅಮಾನವೀಯವಾಗಿ ಶೋಷಣೆ ಎದುರಿಸುತ್ತಾ ಬರುತ್ತಿದ್ದು, ಇಂದಿನ ಶುಶಿಕ್ಷಿತ ಆಧುನಿಕ ಸಮಾಜದಲ್ಲಿ ಕಾನೂನು ಅರಿವಿನಿಂದಾಗಿ ಈ ರೀತಿಯ ಶೋಷಣೆ ತುಸು ಕಡಿಮೆಯಾಗುತ್ತಿದೆಯೇನೋ ಅಂದುಕೊಳ್ಳುವಷ್ಟರಲ್ಲೇ ಇದೀಗ ಮತ್ತೆ ಮತ್ತೆ ಅದೇ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಪ್ರಜ್ಞಾವಂತ ನಾಗರಿಕರನ್ನು ಚಕಿತಗೊಳಿಸಿದೆ.

ಶತಶತಮಾನಗಳಿಂದ ಶೋಷಣೆ ಎದುರಿಸುತ್ತಾ ಬರುತ್ತಿರುವ ದಲಿತರು ತಾವು ಎದುರಿಸುತ್ತಿರುವ ಶೋಷಣೆಯನ್ನ ಸೂಕ್ಷ್ಮವಾಗಿ ಗಮನಿಸಿ ಈ ಕುರಿತು ಜಾಗೃತರಾಗಿ ಅಂತಹಾ ಹೇಯ ನಡವಳಿಕೆಯ ವಿರುದ್ಧ ಪ್ರತಿಭಟಿಸುವುದಾಗಲೀ ಅಥವಾ ತಾವು ಎದುರಿಸಿದ ಶೋಷಣೆಗೆ ಪ್ರತಿಕಾರ ತೀರಿಸಿಕೊಳ್ಳಲು ಯಾವುದೇ ರೀತಿಯ ರಕ್ತ ಕ್ರಾಂತಿಗಾಗಲೀ ಮುಂದಾಗಿರುವುದಿಲ್ಲ.

ಪುರಾತನ ಮನಸ್ಥಿತಿಯ ಕಿಡಿಗೇಡಿಗಳು ತಮ್ಮ ಸ್ವ ಹಿತಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿ ಸೃಷ್ಟಿಸಿದ ಧಾರ್ಮಿಕ ಶಾಸ್ತ್ರಗಳಿಂದ ವ್ಯವಸ್ಥಿತವಾಗಿ ತುಳಿತಕ್ಕೊಳಗಾಗಿ ಕೀಳರಿಮೆಯಿಂದ ಬಳಲುತ್ತಿರುವ ದಲಿತರಿಗೆ ಪ್ರಸಕ್ತ ಕಾನೂನಿನ ಅರಿವಿನ ಕೊರತೆಯಿರುವುದು ಕೂಡ ಈ ರೀತಿಯ ಶೋಷಣೆ ಮುಂದುವರೆಯಲು ಕಾರಣವೆನ್ನಲಾಗಿದೆ.

ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭ ವಿವಿಧ ವೇಷತೊಟ್ಟುಕೊಂಡು ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಘೋಷಣೆ ಕೂಗುತ್ತಾ ಉಪಾಯದಿಂದ ಮತಪಡೆದು ಅಧಿಕಾರಕ್ಕೇರುವ ಸಮಯ ಸಾಧಕ ನಾಯಕರು ಇದೀಗ ಕಣ್ಮರೆಯಾಗಿರುವುದಾಗಿ ಟೀಕೆ ವ್ಯಕ್ತವಾಗಿದೆ.

 

 

 

 

 

 

 

 

 

 

 

 

 

 

 

 

Add comment
 

More items in this section