FacebookTwitter

ಯಾಸಿನ್ ಭಟ್ಕಳ್ ಬಿಡುಗಡೆಗೆ ಉಗ್ರರಿಂದ ವಿಮಾನ ಅಪಹರಣಕ್ಕೆ ಸಂಚು

    User Rating:  / 0
    PoorBest 

ನವದೆಹಲಿ(ಜ.17): ದೇಶದಲ್ಲಿ ನಡೆದಿರುವ ಹಲವು ಸ್ಫೋಟ ಪ್ರಕರಣಗಳ ರೂವಾರಿ, ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಯಾಸಿನ್ ಭಟ್ಕಳ್`ನನ್ನು ಬಿಡಿಸಿಕೊಳ್ಳಲು ಉಗ್ರರು ಹೊಸ ತಂತ್ರ ರೂಪಿಸಿರುವ ಸುದ್ದಿ ಇದೀಗ ಬಯಲಾಗಿದೆ. ವಿಮಾನವೊಂದನ್ನು ಹೈಜಾಕ್ ಮಾಡಿ ಯಾಸಿನ್ ಭಟ್ಕಳ್ ಬಿಡುಗಡೆಗೆ ಬೇಡಿಕೆ ಇಡುವ ತಂತ್ರವನ್ನು ಉಗ್ರರು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.

ಹೀಗಾಗಿ,ನಾಗರೀಕ ವಿಮಾನಯಾನ ಭದ್ರತಾ ಸಂಸ್ಥೆಯು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನದ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಜನವರಿ 20ರಿಂದ ವಿಮಾನ ನಿಲ್ದಾಣದಲ್ಲಿ ವಿಸಿಟರ್ಸ್ ಪಾಸ್ ವಿತರಣೆಯನ್ನೂ ಸ್ಥಗಿತಗೊಳಿಸಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರರು ಕಾರ್ ಬಾಂಬ್ ಸ್ಫೋಟ ನಡೆಸುವ ಸಾಧ್ಯತೆಯೂ ದಟ್ಟವಾಗಿರುವುದರಿಂದ ಏರ್`ಪೋರ್ಟ್`ಗೆ ಬರುವ ಹೋಗುವ ವಾಹನಗಳ ತಪಾಸಣೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಭಯೋತ್ಪಾದನೆ ವಿರುದ್ಧದ ಚಟುವಟಿಕೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಕಂದಹಾರ್ ಹೈಜಾಕ್ ರೀತಿಯ ಸಂಚು: 1999ರಲ್ಲಿ ಆಫ್ಘಾನಿಸ್ತಾನದ ಕಂದಹಾರ್`ನಲ್ಲಿ ವಿಮಾನವನ್ನ ಅಪಹರಿಸಿ ಉಗ್ರಗಾಮಿ ಸಂಘಟನೆ ಜೈಷ್- ಇ-ಮೊಹ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್`ನನ್ನು ಬಿಡಿಸಿಕೊಳ್ಳುವಲ್ಲಿ ತಾಲಿಬಾನ್ ಉಗ್ರರು ಯಶಸ್ವಿಯಾಗಿದ್ದರು. ಅಂದು ತಾಲಿಬಾನ್ ಉಗ್ರರು ತಮ್ಮ ಮುಖ್ಯಸ್ಥನನ್ನು ಬಿಡಿಸಿಕೊಳ್ಳಲು ಹೂಡಿದ್ದ ತಂತ್ರವನ್ನೇ ಇಂದು ಇಂಡಿಯನ್ ಮುಜಾಹಿದ್ದೀನ್ ಉಗ್ರರು ತಮ್ಮ ನಾಯಕ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಯಾಸೀನ್ ಭಟ್ಕಳ್`ನನ್ನು ಬಿಡಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.

 

 

 

Add comment




 

More items in this section