FacebookTwitter

ಮಂಗಳೂರಿನ ವಸತಿ ಗೃಹದಲ್ಲಿ ವೃದ್ಧೆಯ ಕೊಲೆ

    User Rating:  / 0
    PoorBest 

ಮಂಗಳೂರು(ಜ.17): ವೃದ್ಧೆಯೊಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಂಗಳೂರಿನ ಹೃದಯಭಾಗದಲ್ಲಿರುವ ವಸತಿ ಗೃಹವೊಂದರಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಕೇರಳದ ಪಾಲಕ್ಕಾಡ್'ನ 70 ವರ್ಷದ ಆಲೈ ಕುಟ್ಟಿ ಎಂದು ಗುರುತಿಸಲಾಗಿದೆ.

ಕಳೆದ ಮಂಗಳವಾರ(ಜನವರಿ 14)ರಂದು ಓರ್ವ ವ್ಯಕ್ತಿಯೊಂದಿಗೆ ಆಗಮಿಸಿದ್ದ ಈಕೆ ಸಿಟಿ ಸೆಂಟರ್ ಎದುರಿಗಿರುವ ವಸತಿ ಗೃಹದಲ್ಲಿ ತಂಗಿದ್ದರು.

ಕಳೆದ ರಾತ್ರಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಎರಡು ದಿನ ಆಕೆಯೊಂದಿಗೆ ಇದ್ದ ವ್ಯಕ್ತಿಯೇ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ... ಆ ಆಗುಂತಕ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

 

 

 

Add comment




 

More items in this section