FacebookTwitter

ಅಯ್ಯಯ್ಯೋ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ್ದಕ್ಕೆ 10,000 ರೂ. ಕಟ್ ಆಯ್ತು..!

    User Rating:  / 0
    PoorBest 

 

ಶಿವಮೊಗ್ಗ(ಜ.22): ಅದ್ಯಾಕೋ ಇತ್ತೀಚೆಗೆ ಎಟಿಎಂಗಳಲ್ಲಿ ಯಡವಟ್ಟುಗಳಾಗ್ತಿವೆ. ಶಿವಮೊಗ್ಗದ ನಾಗರಾಜ ಎಂಬಾತ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ 56 ಸೆಕೆಂಡ್ ಗಳಲ್ಲೇ 10 ಸಾವಿರ ರೂಪಾಯಿ ಮಂಗಮಾಯವಾಗಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಈತ ಕರ್ನಾಟಕ ಬ್ಯಾಂಕ್ನ ಎಟಿಎಂ ಕಾರ್ಡ್`ನಿಂದ ಎಸ್.ಬಿ.ಎಂ ಎಟಿಎಂ ಸೆಂಟರ್`ನಲ್ಲಿ 500 ರೂ. ಹಣ ಡ್ರಾ ಮಾಡಿದ್ದಾನೆ. ಆದರೆ, ಅದಾದ ಕೇವಲ 56 ಸೆಕೆಂಡ್ ಗಳಲ್ಲೇ ಅದೇ ಎಟಿಎಂನಿಂದ 10 ಸಾವಿರ ರೂ. ಡ್ರಾ ಆಗಿದ್ದು ಕಂಡು ನಾಗರಾಜ್ ಹೌಹಾರಿದ್ದಾರೆ. ನಾಗರಾಜು ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಹಣ ಕಟ್ಟಾಗಿರುವುದು ಗೊತ್ತಾಗಿದೆ.

ನಾಗರಾಜು ಅಕೌಂಟ್ ಹೊಂದಿರುವ ಕರ್ನಾಟಕ ಬ್ಯಾಂಕ್`ನವರು ಹೆಚ್ಚುವರಿ ಹಣ ಡ್ರಾ ಬಗ್ಗೆ ಜವಬ್ದಾರಿ ಹೊರುತ್ತಿಲ್ಲ, ಇನ್ನೊಂದೆಡೆ ಎಟಿಎಂ ಸೆಂಟರ್`ನ ಎಸ್.ಬಿ.ಎಂ.ಬ್ಯಾಂಕ್ ನವರು ಇದರ ಹೊಣೆಗಾರಿಕೆ ತಮ್ಮದಲ್ಲ ಎಂದು ಹೇಳುತ್ತಿದ್ದಾರಂತೆ. ಸಮಸ್ಯೆ ಬಗೆಹರಿಸದೆ ಪರಸ್ಪರ ಒಬ್ಬರ ಮೇಲೊಬ್ಬರು ದೂರುತ್ತಾರೆ. ಇದರಿಂದ ಕಂಗಾಲಾಗಿರುವ ಗ್ರಾಹಕ ನಾಗರಾಜು ನಾನು ಕಷ್ಟಪಟ್ಟು ದುಡಿದ ಹಣ ಸ್ವಾಮಿ ಹುಡುಕಿ ಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ವಿಪರ್ಯಾಸ ಎಂದರೆ ಹಣ ಕಳೆದುಕೊಂಡ ಗ್ರಾಹಕ ನಾಗರಾಜ ನೆರವಿಗೆ ಬರ ಬೇಕಾದ ಸಿಸಿ ಕ್ಯಾಮರಾ ಕೆಟ್ಟು ಹೋಗಿದ್ದು, ಎಟಿಎಂ ಒಳಗಡೆ ನಡೆದ ಯಾವ ದೃಶ್ಯವೂ ಸೆರೆಯಾಗಿಲ್ಲ.

 

 

 

 

Add comment
 

More items in this section