FacebookTwitter

ಆಮ್`ಆದ್ಮಿ ಸಚಿವನಿಂದ ದುರ್ವರ್ತನೆ ಆರೋಪ-ಸೋಮನಾಥ್ ಭಾರ್ತಿಯನ್ನ ಗುರ್ತಿಸಿದ ಉಗಾಂಡಾ ಮಹಿಳೆ

    User Rating:  / 0
    PoorBest 

 

ನವದೆಹಲಿ(ಜ.22): ಪೊಲೀಸರು ಅಸಹಕಾರ ತೋರಿದರೆಂಬ ಆರೋಪವೊಡ್ಡಿ ಅವರ ಅಮಾನತಿಗೆ ಪಟ್ಟು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಧರಣಿ ನಡೆಸುತ್ತಿರುವ ಆಮ್ ಆದ್ಮಿಯ ಕಾನೂನು ಸಚಿವ ಸೋಮನಾಥ್ ಭಾರ್ತಿಗೆ ಸಂಕಷ್ಟ ಎದುರಾಗಿದೆ. ದೆಹಲಿಯ ಕಿರ್ಕಿ ವಲಯದಲ್ಲಿ ಜನವರಿ 16ರ ರಾತ್ರಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆ ದಾಳಿ ನಡೆಸಿದ್ದ ಸಂದರ್ಭ ಕಾನೂನು ಸಚಿವ ಸೋಮನಾಥ್ ಭಾರ್ತಿ, ವಿದೇಶಿ ಯುವತಿಯರ ಮೇಲೆ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಉಗಾಂಡಾ ಯುವತಿಯರು ಸೋಮನಾಥ್ ಭಾರ್ತಿಯ ಗುರುತು ಹಿಡಿದಿದ್ದು, ಅಂದು ರಾತ್ರಿ ತಮ್ಮ ಜೊತೆ ಕೆಟ್ಟ ವರ್ತನೆ ತೋರಿದ ವ್ಯಕ್ತಿ ಇವರೇ ಎಂದು ಸಾಕೇತ್ ಮ್ಯಾಜಿಸ್ಟ್ರೇಟ್ ಕೋರ್ಟ್`ನಲ್ಲಿ ಹೇಳಿಕೆ ನೀಡಿದ್ದಾರೆ.

ಟಿವಿ ಮತ್ತು ಪತ್ರಿಕೆಗಳಲ್ಲಿ ಸೋಮನಾಥ್ ಭಾರ್ತಿಯ ದೃಶ್ಯ ನೋಡಿ ಉಂಗಾಡಾ ಯುವತಿಯರು ಭಾರ್ತಿಯ ಗುರುತು ಪತ್ತೆಹಚ್ಚಿದ್ದಾರೆ. ಇಬ್ಬರೂ ಉಗಾಂಡಾ ಯುವತಿಯರು ಸಾಕೇತ್ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಉಗಾಂಡಾ ಯುವತಿಯರು ಹೇಳಿದ್ದು.. ಬುಧವಾರ ರಾತ್ರಿ ಸೋನಾಥ್ ಭಾರ್ತಿ ಮತ್ತು ಅವರ ಸಹಚರರು ನನ್ನ ಮೇಲೆ ಹಲ್ಲೆ ನಡೆಸಿದರು. ನೀವು ಕಪ್ಪು ಜನರು, ನೀವು ನಮ್ಮ ದೇಶವನ್ನು ಬಿಟ್ಟು ತೊಲಗಬೇಕು ಎಂದು ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರ ಕೈಯಲ್ಲಿ ಉದ್ದವಾದ ಸ್ಟಿಕ್`ಗಳಿದ್ದವು. ಒಂದೊಮ್ಮೆ ನೀವು ದೇಶಬಿಟ್ಟು ತೊಲಗದಿದ್ದರೆ ನಿಮ್ಮನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿದರು. ನಮ್ಮ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನ ಮರುದಿನ ಟಿವಿ ಮತ್ತು ಪತ್ರಿಕೆಗಳಲ್ಲಿ ನೋಡಿದೆವು. ನಾವು ರಾತ್ರಿ ನೋಡಿದ್ದಾಗ ಧರಿಸಿದ್ದ ಬಟ್ಟೆಯನ್ನೇ ಆತ ಪೋಟೋ, ದೃಶ್ಗಯಗಳಲ್ಲೂ ಧರಿಸಿದ್ದನು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ನಮ್ಮನ್ನು ರಕ್ಷಿಸಿದರು ಎಂದು ಉಗಾಂಡಾ ಯುವತಿಯರು ಹೇಳಿದ್ದಾರೆ.

ಅಷ್ಟೇ ಅಲ್ಲ, ಅಂದು ಬೆಳಗಿನ ಜಾವ ಉಗಾಂಡಾ ಮಹಿಳೆಯರ ವೈದ್ಯಕೀಯ ಪರೀಕ್ಷೆ ವೇಳೆ ಸಚಿವ ಸೋಮನಾಥ್ ಭಾರ್ತಿ ಹಾಜರಿದ್ದದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ. ಹೀಗಾಗಿ, ಆಮ್ ಆದ್ಮಿಯ ಕಾನೂನು ಸಚಿವ ಸೋಮಾನಾಥ್ ಭಾರ್ತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

 

 

 

 

Add comment




 

More items in this section