FacebookTwitter

ಪುನೀತ್'ರ "ನಿನ್ನಿಂದಲೆ" ಚಿತ್ರದ ಹೊಸ ದಾಖಲೆ

ಬೆಂಗಳೂರು(ಜ.07): ಪುನಿತ್ ರಾಜಕುಮಾರ್ ಅಭಿನಯದ "ನಿನ್ನಿಂದಲೆ" ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಆದರೆ, ಈ ಸಿನಿಮ ಬಿಡುಗಡೆಗೂ ಮುನ್ನವೇ ಹೊಸ ದಾಖಲೆಯನ್ನ ಮಾಡಿದೆ.. ನಿನ್ನಿಂದಲೆ ಚಿತ್ರದ ಸ್ಯಾಟಲೈಟ್ ಹಕ್ಕು ಆರೂವರೆ ಕೋಟಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.. ಕನ್ನಡ ಚಿತ್ರವೊಂದು ಇಷ್ಟೊಂದು ದುಬಾರಿ ಬೆಲೆಗೆ ಟಿವಿ ರೈಟ್ಸ್ ಮಾರಾಟವಾಗಿರುವುದು  ಇದೇ ಮೊದಲು ಎನ್ನುತ್ತವೆ ಮೂಲಗಳು.

ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಭಿನಯದ "ನಿನ್ನಿಂದಲೇ" ಬಹುನಿರೀಕ್ಷಿತ ಸಿನಿಮಾವಾಗಿದೆ. ಟಾಲಿವುಡ್'ನ ಹಿರಿಯ ನಿರ್ದೇಶಕ ಜಯಂತ್ ಸಿ. ಪರಾಂಜೀ ನಿರ್ದೇಶಿಸಿರುವ ಮೊದಲ ಕನ್ನಡ ಚಿತ್ರ ಇದಾಗಿದೆ. ಸಿನಿಮಾದ ಶೇಕಡ ಅರವತ್ತರಷ್ಟು ಭಾಗ ಚಿತ್ರೀಕರಣ ಅಮೆರಿಕಾದ ನ್ಯೂಯಾರ್ಕ್'ನಲ್ಲಿ ನಡೆದಿದೆ. ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆದಿದ್ದು, ಈಗ ಚಿತ್ರದ ಸ್ಯಾಟಲೈಟ್ ರೈಟ್ಸ್  ಭಾರೀ ಮೊತ್ತಕ್ಕೆ ಮಾರಾಟವಾಗಿರುವುದು ಬಿಡುಗಡೆಗೂ ಮುನ್ನವೇ ಮತ್ತಷ್ಟು ಹೈಪ್ ಕ್ರಿಯೇಟ್ ಆದಂತಾಗಿದೆ...

ಬೃಂದಾವನ ದಾಖಲೆ ಮುರಿದುಬಿತ್ತು...!
ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಅಭಿನಯದ ಭಜರಂಗೀ ಚಿತ್ರದ ಸ್ಯಾಟಲೈಟ್ ರೈಟ್ಸ್ ಮೂರೂ ಕಾಲು ಕೋಟಿಗೆ ಮಾರಾಟವಾಗಿತ್ತು. ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ನಾಲ್ಕೂವರೆ ಕೋಟಿಗೆ ಮಾರಾಟವಾಗಿತ್ತು. ಬೃಂದಾವನ ಚಿತ್ರ ಐದೂವರೆ ಕೋಟಿಗೆ ಟೀವಿ ರೈಟ್ಸ್ ಸೇಲಾಗಿತ್ತು. ಈಗ ಪುನಿತ್ ಅಭಿನಯದ "ನಿನ್ನಿಂದಲೆ" ಸ್ಯಾಟಲೈಟ್ ರೈಟ್ಸ್ ಆರೂವರೆ ಕೋಟಿಗೆ ಮಾರಾಟವಾಗಿ ಈ ಎಲ್ಲ ದಾಖಲೆಗಳನ್ನ ಹಿಂದಿಕ್ಕಿದೆ ಎನ್ನುತ್ತವೆ ಇಂಡಸ್ಟ್ರಿ ಮೂಲಗಳು...

ಯಾಕಿಷ್ಟು ಡಿಮ್ಯಾಂಡ್...?
ನಿನ್ನಿಂದಲೇ ಚಿತ್ರ ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗೋಕೆ ಕಾರಣಗಳು ಹಲವು. ಮಣಿಶರ್ಮಾ ಸಂಗೀತವಿರುವ ಈ ಚಿತ್ರದ ಆಡಿಯೋ ಈಗಾಗಲೇ ಸೂಪರ್ ಹಿಟ್ ಆಗಿದೆ. ಗ್ಲಾಮರ್ ಗೊಂಬೆ ಎರಿಕಾ ಫರ್ನಾಂಡಿಸ್ ನಾಯಕಿಯಾಗಿದ್ದಾರೆ. ತೆಲುಗಿನ ನಂಬರ್ ಒನ್ ಕಾಮಿಡಿ ನಟ ಬ್ರಹ್ಮಾನಂದಂ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ತುಳಸೀ ಶಿವಮಣಿ, ಅವಿನಾಶ್, ಸಾಧುಕೋಕಿಲಾ, ತಿಲಕ್, ಜುಗಾರಿ ಅವಿನಾಶ್, ವಿನಾಯಕ್ ಜೋಷಿ, ಅಲೋಕ್, ಸೋನಿಯಾ ಹೀಗೆ ದೊಡ್ಡ ತಾರಾಗಣವೇ ಈ ಚಿತ್ರಕ್ಕಿದೆ.

ಚಿತ್ರದ ನಿರ್ದೇಶಕ ಜಯಂತ್ ಪರಾಂಜಿ ನಿಜಕ್ಕೂ ದೊಡ್ಡ ಡೈರೆಕ್ಟರ್. ಶಂಕರ್ ದಾದಾ ಜಿಂದಾಬಾದ್ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಬಾಲಕೃಷ್ಣ, ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಮೊದಲಾದ ಘಟಾನುಘಟಿ ನಟರನ್ನ ನಿರ್ದೇಶಿಸಿದ್ದಾರೆ.

ಇಷ್ಟೇ ಅಲ್ಲದೇ, ಸ್ಕೈ ಡೈವಿಂಗ್, ಹಾಲಿವುಡ್ ಮಾದರಿಯ ಸ್ಟಂಟ್ಸ್, ಹೊಂಬಾಳೆ ಎಲ್ಲವೂ ಈ ಚಿತ್ರಕ್ಕೆ ನಿರೀಕ್ಷೆ ಹೆಚ್ಚುವಂತೆ ಮಾಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪು ಅವರ ಯಾವ ಸಿನಿಮಾವೂ 2013ರಲ್ಲಿ ಬಿಡುಗಡೆಯಾಗಿಲ್ಲದಿರುವುದು ಅಭಿಮಾನಿಗಳ ಕಾತರ ಮತ್ತು ಕುತೂಹಲವನ್ನು ಹೆಚ್ಚಿಸಿದೆ. ಇವೆಲ್ಲವೂ ಸೇರಿ "ನಿನ್ನಿಂದಲೆ" ದುಬಾರಿ ಬೆಲೆಗೆ ಮಾರಾಟವಾಗಲು ಸಹಾಯಕವಾಗಿವೆ ಎಂಬುದು ವಿಮರ್ಶಕರ ಮಾತು.

 

 

 

Add comment