FacebookTwitter

ಕನ್ನಡಕ್ಕೆ ಬರುತ್ತಿದ್ದಾಳೆ 'ಬಾಲಿಕಾ ವಧು' ಸೆನ್ಸೇಷನ್ ಅವಿಕಾ ಗೋರ್

ಬೆಂಗಳೂರು(ಜ.09): ವಿಶ್ವದ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ಎಂದು ಖ್ಯಾತಿ ಗಳಿಸಿರುವ ಮಾಸ್ಟರ್ ಕಿಶನ್ ಹೊಸ ಹುಡುಗಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್'ಪಾತ್ - 2" ಚಿತ್ರದಲ್ಲಿ ಹಿಂದಿಯ ಕಿರುತೆರೆ ಸೆನ್ಸೇಶನ್ ಅವಿಕಾ ಗೋರ್ ನಟಿಸುತ್ತಿದ್ದಾಳೆ. ಹಿಂದಿಯ "ಬಾಲಿಕಾ ವಧು" ಧಾರಾವಾಹಿಯಲ್ಲಿ ಆನಂದಿ ಪಾತ್ರದ ಮೂಲಕ ಭಾರೀ ಖ್ಯಾತಿ ಪಡೆದಿದ್ದ 16 ವರ್ಷದ ಆವಿಕಾ ಗೋರ್ "ಕೇರ್ ಆಫ್ ಫುಟ್ಪಾತ್-2" ಚಿತ್ರದಲ್ಲಿ ಪೂರ್ಣಪ್ರಮಾಣದ ಸಿನಿಮಾ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ.

ಅವಿಕಾ ಗೋರ್ ಈ ಚಿತ್ರದ ನಾಯಕ ದೀಪಕ್ ಪಾಠಕ್'ಗೆ ಜೋಡಿಯಾಗಿ ನಟಿಸಲಿದ್ದಾಳೆ. ಜನವರಿ 16 ರಿಂದ ಬೆಂಗಳೂರಲ್ಲಿ ಚಿತ್ರೀಕರಣ ಆರಂಭವಾಗಲಿದೆ...

ಕನ್ನಡದಲ್ಲಿ ಅವಿಕಾಗೆ ಇದು ಮೊದಲ ಚಿತ್ರವಾದರೂ ದಕ್ಷಿಣ ಭಾರತಕ್ಕೆ ಆಕೆ ಹೊಸಬಳಲ್ಲ. ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ನಿರ್ಮಾಣದ "ಉಯ್ಯಾಲ ಜಂಪಾಲ" ಚಿತ್ರದಲ್ಲಿ ಆವಿಕಾ ಗೋರ್ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ್ದಾಳೆ. ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ತೆಲುಗಿನಲ್ಲಿ ಮಾಡುವ ಮುಂಚೆ ಈಕೆ ಮೂರು ಹಿಂದಿ ಚಿತ್ರಗಳಲ್ಲೂ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾಕೆ.

ರವೀನಾ ಟಂಡನ್ ಈಗ ಟೀಚರಮ್ಮ...
ಇನ್ನು, ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್'ಪಾತ್ ಚಿತ್ರದ ಮೊದಲ ಭಾಗ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿತ್ತು. ಆಗವರು ಅತ್ಯಂತ ಕಿರಿಯ ನಿರ್ದೇಶದ ಎಂದು ಗಿನ್ನೆಸ್ ದಾಖಲೆ ಮಾಡಿದ್ದರು. ಈಗ ಎರಡನೇ ಭಾಗದಲ್ಲೂ ಸುದ್ದಿಯಾಗಿದ್ದಾರೆ. ದಶಕದ ಹಿಂದೆ ಸೆಕ್ಸೀ ತಾರೆಯಾಗಿ ಮಿಂಚುತ್ತಿದ್ದ ರವೀನಾ ಟಂಡನ್ ಈ ಚಿತ್ರದಲ್ಲಿ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

 

 

Add comment