FacebookTwitter

ಬೆಂಗಳೂರಿನಲ್ಲಿ ಪೂನಂಪಾಂಡೆಯನ್ನ ಕುಡುಕರು ಅಟ್ಟಿಸಿಕೊಂಡು ಬಂದಿದ್ದರಂತೆ..!

 ಇತ್ತೀಚೆಗೆ ಹೊಸ ವರ್ಷದ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಪೂನಂಪಾಂಡೆ ಅಲ್ಲಾದ ಕೆಲವು ಕಹಿ ಘಟನೆಗಳನ್ನ ಖಾಸಗಿ ಪತ್ರಿಕೆಯೊಂದಕ್ಕೆ ತೆರೆದಿಟ್ಟಿದ್ದಾರೆ. ನನ್ನ ಜೀವನದಲ್ಲಿ ಗಂಡಸರಿಂದ ನಾನು ಎದುರಿಸಿದ ಅತ್ಯಂತ ಗಂಭೀರ ಪರಿಸ್ಥಿತಿ ಅದು ಎಂದು ಪೂನಂಪಾಂಡೆ ಹೇಳಿಕೊಂಡಿದ್ದಾರೆ.

ಪೂನಂ ಹೇಳಿದ್ದು... `ಅದು ದಕ್ಷಿಣ ಬೆಂಗಳೂರಿನಲ್ಲಿರುವ ಒಂದು ಕ್ಲಬ್, ಪಾರ್ಟಿ ಆರಂಭವಾಗಿ ಆಗಿನ್ನೂ 10 ನಿಮಿಷಗಳಷ್ಟೇ ಆಗಿತ್ತು. ಪಾನಮತ್ತರಾಗಿದ್ದ ಪಾರ್ಟಿಯಲ್ಲಿದ್ದ ಪುರುಷರು ತಮ್ಮ ಎಲ್ಲೆ ಮೀರಿ ವರ್ತಿಸಲು ಶುರು ಮಾಡಿದ್ದರು. ನನ್ನ ಸುತ್ತಲೂ 15-20 ಬೌನ್ಸರ್ಸ್ ಮತ್ತು ಸುತ್ತಲೂ ಹತ್ತಾರು ಗಾರ್ಡ್`ಗಳಿದ್ದರೂ ಅವರನ್ನ ತಡೆಯಲು ಸಾಧ್ಯವಾಗಲಿಲ್ಲ. ನನ್ನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೆಲ ರೌಡಿಗಳು ಸ್ಟೇಜ್ ಹತ್ತಿ ನನ್ನ ಕಡೆ ನುಗ್ಗಲಾರಂಭಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಅವರನ್ನ ಬೌನ್ಸರ್`ಗಳೂ ತಡೆಯಲಾಗಲಿಲ್ಲ. ಅಲ್ಲಿದ್ದ ಪಾನಮತ್ತರಾಗಿದ್ದ ಗಂಡಸರು ನನ್ನ ನೃತ್ಯಕ್ಕಿಂತ ನನ್ನ ಬಳಿ ಬೇರೆಯದನ್ನೇ ನಿರೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಹುಷಾರಾದ ನಾನು, ಸ್ಟೇಜ್`ನಿಂದ ಕೆಳಗಿಳಿದು ಓಡತೊಡಗಿದೆ. ನನ್ನ ಜೀವನದಲ್ಲಿ ನಾನೆಂದೂ ಅಷ್ಟು ಜೋರಾಗಿ ಓಡಿರಲಿಲ್ಲ. ಮಹಡಿಯ ತನ್ನ ಕೊಠಡಿಯತ್ತ ಒಂದೇ ಉಸಿರಲ್ಲಿ ಓಡಿದೆ. ಕುಡುಕರ ಗುಂಪು ಸಹ ನನ್ನನ್ನೇ ಹಿಂಬಾಲಿಸಿತು. ಕೊಠಡಿ ಬಳಿಗೂ ಹಿಂಬಾಲಿಸುತ್ತಲೇ ಬಂದರು. ಗಾರ್ಡ್`ಗಳು ಸಹ ಅವರನ್ನ ತಡೆಯಲೂ ಭಾರೀ ಹರಸಾಹಸ ಪಡಬೇಕಾಯ್ತು ಎಂದು ಪೂನಂಪಾಂಡೆ ಹೇಳಿದ್ದಾರೆ'.

ಒಟ್ಟಿನಲ್ಲಿ, ಹೆಜ್ಜೆ ಹೆಜ್ಜೆಗೂ ಬಟ್ಟೆ ಬಿಚ್ಚಿ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿದ್ದ ಪೂನಂಪಾಂಡೆಗೆ ಕೆಲ ಕುಡುಕರು ಅಕ್ಷರಶಃ ಬೆಚ್ಚಿ ಬೀಳಿಸಿದ್ದಾರೆ.

ಮಾಹಿತಿ ಕೃಪೆ(ಟೈಮ್ಸ್ ಆಫ್ ಇಂಡಿಯಾ)

 

 

 

Add comment