FacebookTwitter

ಗುಲಾಬ್ ಗ್ಯಾಂಗ್: ಶೋಷಿತ ಮಹಿಳೆಯ ರಕ್ತಕ್ರಾಂತಿಗೆ ಜೀವ ತುಂಬುತ್ತಿದ್ದಾರೆ ಮಾಧುರಿ ದಿಕ್ಷಿತ್!

ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವತಾರ_ungu

ಗುಲಾಬ್ ಗ್ಯಾಂಗ್ ಸಿನಿಮಾ ಬಾಲಿವುಡ್ನಲ್ಲಿ ಬಹು ದಿನಗಳಿಂದ ಸುದ್ದಿ ಮಾಡ್ತಿದೆ. ಧಕ್..ಧಕ್ ಮಾಧುರಿ ದಿಕ್ಷಿತ್ ಈ ಮೂಲಕ ತಮ್ಮ ಪಾತ್ರ ಪೋಷಣೆಗೆ ರಗಢ್ ಫೀಲ್ ಕೊಟ್ಟಿದ್ದಾರೆ. ಸದ್ಯ ಗುಲಾಬಿ ಗ್ಯಾಂಗ್ನ ತಂಡ ಬುಂದೇಲ್ ಖಂಡ್ನಲ್ಲಿ ಸಕ್ರಿಯವಾಗಿದೆ. ಈ ಸತ್ಯ ಕಥೆಯನ್ನ ಆದರಿಸಿರುವ ಈ ಚಿತ್ರವನ್ನ ನಿಷಿತಾ ಜೈ ನಿರ್ದೇಶಿಸಿದ್ದಾರೆ.

ಶೋಷಿತ ಮಹಿಳೆಯರ ಈ ಗ್ಯಾಂಗ್ನಲ್ಲಿ ರಜ್ಜೋ ಅನ್ನೋ ಮುಖ್ಯ ಪಾತ್ರವೂ ಇದೆ. ಅದನ್ನ ಅಷ್ಟೇ ನೈಜವಾಗಿ ಅಭಿನಯಿಸೋ ಪ್ರಯತ್ನ ಮಾಡಿದ್ದಾರೆ ಬಾಲಿವುಡ್ನ, ಒಂದು ಕಾಲದ ಬೆಡಗಿ ಮಾಧುರಿ ದಿಕ್ಷಿತ್.

ಒಳ್ಳೆ ಲೀಡರ್ ಇದ್ಮೇಲೆ, ಕೆಟ್ಟ ಲೀಡರ್ ಒಬ್ಬರು ಇರಲೇಬೇಕಲ್ಲವೆ. ಆ ಒಂದು ರಾಜಕಾರಣಿಯ ಕ್ಯಾರೆಕ್ಟರನ್ನ ನಟಿ ಜೂಹಿ ಚಾವ್ಲಾ ನಿರ್ವಹಿಸಿದ್ದಾರೆ. ಈ ಎರಡೂ ಕ್ಯಾರೆಕ್ಟರ್ಗಳಿಗೆ ಇಲ್ಲಿ ಸಾಕಷ್ಟು ಅಭಿನಯಿಸೋಕೆ ಜಾಗವಿದೆ. ಅಷ್ಟೇ ಸಾಲಿಡ್ ಡೈಲಾಗ್ಗಳೂ ಇವೆ.

 

 

 

Add comment