FacebookTwitter

ಅನುಷ್ಕಾ ಶರ್ಮಾ ಮನೆಯಲ್ಲಿ 5 ದಿನ ತಂಗಿದ್ದ ವಿರಾಟ್ ಕೊಹ್ಲಿ..?

ಮುಂಬೈ(ಜ.13): ಟೀಮ್ ಇಂಡಿಯಾದ ಉಪನಾಯಕ ಡ್ಯಾಶಿಂಗ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್`ನ ಲೌಲಿ ಗರ್ಲ್ ಅನುಷ್ಕಾ ಶರ್ಮಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಹಲವು ದಿನಗಳಿಂದ ಬಾಲಿವುಡ್`ನಲ್ಲಿ ಹರಿದಾಡುತ್ತಿದೆ. ಇದೀಗ ಈ ಮಾತಿಗೆ ಇಂಬು ನೀಡುವಂಥಾ ಸಾಕ್ಷ್ಯಗಳು ದೊರೆತಿವೆ. ಹೌದು, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಮ್ ಇಂಡಿಯಾ ವೀಟ್ ವಾಶ್ ಆದ ಬಳಿಕ ಭಾರತಕ್ಕೆ ಸಹ ಆಟಗಾರರೊಂದಿಗೆ ವಾಪಸ್ ಆದ ಕೊಹ್ಲಿ, ತಮ್ಮ ಮನೆಗೆ ಹೋಗಿಯೇ ಇಲ್ಲ. ಮತ್ತೆ ಲ್ಲಿಗೆ ಹೋಗಿದ್ದರೂ ಅಂತೀರಾ..? ಅದು ಅನುಷ್ಕಾ ಶರ್ಮಾ ಮನೆಗೆ ಅಂತಿದೆ ಖಾಸಗಿ ಪತ್ರಿಕೆಯೊಂದರ ವರದಿ.

ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ದಕ್ಷಿಣ ಆಫ್ರಿಕಾದಿಂದ ವಾಪಸ್ ಆದ ವಿರಾಟ್, ನಿನ್ನೆ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವವರೆಗೂ ಮುಂಬೈನ ಬದ್ರಿನಾಥ್ ಟವರ್ಸ್`ನಲ್ಲಿರುವ ಅನುಷ್ಕಾ ಮನೆಯಲ್ಲೇ ತಂಗಿದ್ದರಂತೆ. ಮುಂಬೈನ

`ವಿರಾಟ್ ಸಾಬ್ ರಾತ್ರಿ ಅನುಷ್ಕಾ ಮೇಡಂ ಮನೆಯಲ್ಲೇ ತಂಗಿದ್ದರು. 5 ದಿನಗಳಿಂದ ಅವರು ಇಲ್ಲಿಯೇ ಇದ್ದಾರೆ' ಅಪಾರ್ಟ್`ಮೆಂಟ್`ನ ವಾಚ್`ಮೆನ್ ಒಬ್ಬ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಮನೆಯಿಂದ ಹೊರಡುತ್ತಿದ್ದ ಕೊಹ್ಲಿ ರಾತ್ರಿ 8.30ರ ವೇಳೆಗ ವಾಪಸ್ ಆಗುತ್ತಿದ್ದರಂತೆ.

ಅಷ್ಟೇ ಅಲ್ಲ, ನಿನ್ನೆ ನ್ಯೂಜಿಲೆಂಡ್`ಗೆ ತೆರಳುವ ಮುನ್ನ 20 ನಿಮಿಷ ಅನುಷ್ಕಾಗಾಗಿ ವಿರಾಟ್ ಕೊಹ್ಲಿ ಕಾಯುತ್ತಿದ್ದರಂತೆ. ಕಳೆದ ವರ್ಷ ಶ್ಯಾಂಪೂವೊಂದರ ಜಾಹೀರಾತಿನ ಮೂಲಕ ಪರಿಚಿತರಾದ ಅನುಷ್ಕಾ ಮತ್ತು ವಿರಾಟ್ ಕೊಹ್ಲಿಯ ಸಂಬಂಧ ಈಗಲೂ ಮುದುವರೆದಿದೆ.

ಮಾಹಿತಿ ಕೃಪೆ (ಟೈಮ್ಸ್ ಆಫ್ ಇಂಡಿಯಾ)

 

 

 

Add comment