FacebookTwitter

ಪುನೀತ್ 'ರಾಜಕುಮಾರ' ಚಿತ್ರದಲ್ಲಿ ನೀತು ಚಂದ್ರ ಐಟಂ ಡ್ಯಾನ್ಸ್

ಬೆಂಗಳೂರು(ಜ.14): ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ "ರಾಜಕುಮಾರ" ಚಿತ್ರದಲ್ಲಿ ಬಾಲಿವುಡ್ ಹಾಟ್ ಬೆಡಗಿ ನೀತು ಚಂದ್ರ ಕಾಣಿಸಿಕೊಳ್ಳಲಿದ್ದಾಳೆ. ತೆಲುಗಿನ ಮೆಗಾಹಿಟ್ "ದೂಕುಡು" ಚಿತ್ರದ ಈ ರೀಮೇಕ್'ನಲ್ಲಿ ನೀತು ಚಂದ್ರ ಐಟಂ ಸಾಂಗ್'ವೊಂದರಲ್ಲಿ ಡ್ಯಾನ್ಸ್ ಮಾಡಲಿದ್ದಾಳೆ. ಚಿತ್ರ ನಿರ್ಮಾಪಕರು ಈಗಾಗಲೇ ಬಾಲಿವುಡ್ ನಟಿಯ ಡೇಟ್ಸ್ ಪಡೆದುಕೊಂಡಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಮಹೇಶ್ ಬಾಬು ಅಭಿನಯದ "ದೂಕುಡು" ಚಿತ್ರ ಟಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನೇ ಸೃಷ್ಟಿಸಿತ್ತು. ಚಿತ್ರದಲ್ಲಿದ್ದ "ಪೂವೈ ಪೂವೈ" ಹಾಡು ದೊಡ್ಡ ಹಿಟ್ ಆಗಿತ್ತು. ಆ ಹಾಡಿಗೆ ಪಾರ್ವತಿ ಮೆಲ್ಟಾನ್ಕ ಎಂಬ ಅರೆಭಾರತೀಯ ಚೆಲುವೆ ಮಾದಕ ಸ್ಟೆಪ್ಸ್ ಹಾಕಿ ಮೋಡಿ ಮಾಡಿದ್ದಳು. ಈಗ ಅದೇ ಹಾಡಿನ ಕನ್ನಡ ಅವತರಣಿಕೆಗೆ ನೀತು ಚಂದ್ರ ಡ್ಯಾನ್ಸ್ ಮಾಡಲಿದ್ದಾಳೆ. ಬಾರ್ ಮತ್ತು ಡಿಸ್ಕೋ ಬ್ಯಾಗ್ರೌಂಡ್'ನಲ್ಲಿ ಹಾಡಿನ ಚಿತ್ರೀಕರಣವಾಗಲಿದ್ದು ಅದಕ್ಕಾಗಿ ವಿಶೇಷ ಸೆಟ್ ಹಾಕಲಾಗುತ್ತಿದೆ.

ಭೋಜಪುರಿ ಮೂಲದ ನೀತು ಚಂದ್ರ ಹಿಂದಿ, ತೆಲುಗಿನ ಅನೇಕ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾಳೆ.

 

 

 

Add comment