FacebookTwitter

ಮೋಹಕ ಬೆಡಗಿ ರಾಗಿಣಿ ದ್ವಿವೇದಿಗೆ ಮತ್ತೆರಡು ತಮಿಳು ಆಫರ್

ಬೆಂಗಳೂರು(ಜ.14): ಕನ್ನಡದ ಹಾಟ್ ಮತ್ತು ಸೆಕ್ಸೀ ನಟಿ ರಾಗಿಣಿ ದ್ವಿವೇದಿ ನೆರೆಯ ತಮಿಳಿನಲ್ಲಿ ಗಟ್ಟಿಯಾಗಿ ತಳವೂರುವ ಲಕ್ಷಣ ಕಾಣುತ್ತಿದೆ. "ನಿಮಿರ್ನ್'ದು ನಿಲ್" ಚಿತ್ರದ ಮೂಲಕ ಕಾಲಿವುಡ್ ಮಂದಿಯ ಗಮನ ಸೆಳೆದಿರುವ ರಾಗಿಣಿ ಈಗ ಮತ್ತೆರಡು ತಮಿಳು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಸಮುದ್ರಕಣಿ ನಿರ್ದೇಶನದ, ಜೆಯಂ ರವಿ ಅಭಿನಯದ "ನಿಮಿರಂದು ನಿಲ್" ಚಿತ್ರ ರಾಗಿಣಿಗೆ ಒಳ್ಳೆಯ ಬ್ರೇಕ್ ತಂದುಕೊಟ್ಟಿರುವುದಂತೂ ಸತ್ಯ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲ ಬರ್ಲಿನ್ ಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ. ಹೀಗಾಗಿ, ರಾಗಿಣಿಗೆ ಕಾಲಿವುಡ್'ನಲ್ಲಿ ಒಳ್ಳೆಯ ಬೇಡಿಕೆ ಬರುತ್ತಿದೆ.

ವೀರ ಮದಕರಿ ಮೂಲಕ ಕನ್ನಡ ಸ್ಯಾಂಡಲ್'ವುಡ್'ಗೆ ಎಂಟ್ರಿಕೊಟ್ಟ ಪಂಜಾಬಿ ಮೂಲದ ಬೆಡಗಿ ರಾಗಿಣಿ ದ್ವಿವೇದಿ ಸದ್ಯಕ್ಕೆ "ರಾಗಿಣಿ ಐಪಿಎಸ್" ಚಿತ್ರದ ಬಿಡುಗಡೆಯ ಗಡಿಬಿಡಿಯಲ್ಲಿದ್ದಾಳೆ. ಕನ್ನಡದಲ್ಲೂ ಸಾಕಷ್ಟು ಬ್ಯುಸಿಯಾಗಿರುವ ರಾಗಿಣಿ ಉಪ್ಪಿ ಅಭಿನಯದ "ಬಸವಣ್ಣ", ಕೋಮಲ್ ಅಭಿನಯದ "ಡೈರೆಕ್ಟೆಡ್ ಬೈ ಕೋಮಲ್" ಮೊದಲಾದ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ.

(ಮಾಹಿತಿ ಕೃಪೆ: ಚಿತ್ರಲೋಕ)

 

 

 

Add comment