FacebookTwitter

ಆರ್ಯನ್ ಚಿತ್ರೀಕರಣ ವೇಳೆ ಶಿವಣ್ಣ ತಲೆಗೆ ಪೆಟ್ಟು

ಬೆಂಗಳೂರು(ಜ.15): ಸಿಂಗಾಪುರದಲ್ಲಿ ಆರ್ಯನ್ ಚಿತ್ರದ ಚಿತ್ರೀಕರಣದ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ತಲೆಗೆ ಪೆಟ್ಟು ಬಿದ್ದಿದೆ. ಶಿವಣ್ಣಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಕಳವಳಪಡುವಂಥ ಗಂಭೀರ ಗಾಯಗಳಾಗಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಶಿವರಾಜ್ ಕುಮಾರ್ ಮತ್ತು ರಮ್ಯಾ ಅಭಿನಯದ ಬಹುನಿರೀಕ್ಷಿತ "ಆರ್ಯನ್" ಚಿತ್ರದ ಚಿತ್ರೀಕರಣ ಸಿಂಗಾಪುರದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದೆ. ಆದರೆ, ನಿನ್ನೆ  ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಸಣ್ಣದೊಂದು ಅವಘಡ ನಡೆದಿಯಿತು ಎಂದು ಚಿತ್ರತಂಡದ ಮೂಲಗಳು ಹೇಳಿವೆ...

ಚಿತ್ರದ ನಿರ್ಮಾಪಕ ನರ್ಗೀಸ್ ಬಾಬು ಪ್ರಕಾರ ಶಿವಣ್ಣನಿಗೆ ಅಂತಹ ದೊಡ್ಡ ಪೆಟ್ಟೇನೂ ಆಗಿಲ್ಲ. ಸೈಕಲ್ ರೇಸ್'ನ ದೃಶ್ಯವನ್ನ ಚಿತ್ರೀಕರಿಸುತ್ತಿದ್ದ ವೇಳೆ ಸ್ವತಃ ಶಿವಣ್ಣ ಸೈಕಲ್ ಓಡಿಸುತ್ತಿದ್ದಾಗ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ. ತತ್'ಕ್ಷಣವೇ ಚಿತ್ರೀಕರಣ ಸ್ಥಗಿತಗೊಳಿಸಿ ಎರಡು ದಿನಗಳ ಕಾಲ ಚಿತ್ರೀಕರಣಕ್ಕೆ ರಜೆ ಘೋಷಣೆ ಮಾಡಲಾಯಿತು ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಅವಘಡ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಇದ್ದರು. ಪ್ರತಿ ದಿನ ಆರ್ಯನ್ ಚಿತ್ರೀಕರಣ ವೀಕ್ಷಿಸಲು ಬರುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ನಿನ್ನೆ ಬಂದಿರಲಿಲ್ಲ. ಪ್ರಥಮ ಚಿಕಿತ್ಸೆ ಬಳಿಕ ಶಿವಣ್ಣ ತಾವು ಉಳಿದುಕೊಂಡಿರುವ ಹೋಟೆಲ್'ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

 

 

 

Add comment