FacebookTwitter

ನಿನ್ನಿಂದಲೇ ಕನ್ನಡ ಚಿತ್ರ ವಿಮರ್ಶೆ

16 ಜನವರಿ 2014 - ತಾಂತ್ರಿಕವಾಗಿ ಮೇಲ್ಮಟ್ಟದಲ್ಲಿರುವ "ನಿನ್ನಿಂದಲೇ" ಪುನೀತ್ ಅಭಿಮಾನಿಗಳಿಗಷ್ಟೇ ಅಲ್ಲ, ಕನ್ನಡ ಚಿತ್ರ ಪ್ರೇಮಿಗಳು ಒಮ್ಮೆಯಾದರೂ ಹೆಮ್ಮೆಯಿಂದ ನೋಡಬಹುದಾದ ಕನ್ನಡ ಚಿತ್ರವಾಗಿದೆ...

ಘರ್ಷಣೆ ಚಿತ್ರ ವಿಮರ್ಶೆ

03 ಜನವರಿ 2014 : ಘರ್ಷಣೆಯ ಚಿತ್ರಕಥೆಯಲ್ಲಿ ವಿಶೇಷತೆಯಿದೆ. ಆಕ್ಷನ್ ಚಿತ್ರ ಎಂದರೆ ಅದು ಮಾಸ್‌'ಗೆ ಮಾತ್ರ ಎಂಬ ನಂಬಿಕೆ ಸುಳ್ಳು ಮಾಡುವ ಕ್ಲಾಸ್ ಟಚ್ ಇದೆ. ಆದರೆ, ಮಾಸ್ ಇಮೇಜ್ ಇರುವ ಮಾಲಾಶ್ರೀಯನ್ನು ನಾಯಕಿಯಾಗಿಸಿದ್ದೇ ಈ ಚಿತ್ರದ ದೌರ್ಬಲ್ಯ ಎನಿಸಿದರೂ ತಪ್ಪಿಲ್ಲ. ಮಾಲಾಶ್ರೀ ಅವರ ತೀರಾ ಮಾಮೂಲಿ ಎಂಟ್ರಿ ಆದಾಗಲೇ ಪ್ರೇಕ್ಷಕ ಇದು ವಿಭಿನ್ನ ಸಿನಿಮಾ ಎಂದು ಅರ್ಥ ಮಾಡಿಕೊಂಡರೆ ನಿರ್ದೇಶಕ ದಯಾಳ್ ಬಚಾವ್ ಆಗಬಹುದು.

ಅಯೋಧ್ಯಪುರಂ ಚಿತ್ರ ವಿಮರ್ಶೆ

03 ಜನವರಿ 2014 : ಮುಸ್ಲಿಂ ಹುಡುಗಿ ಮತ್ತು ಹಿಂದು ಹುಡುಗನ ಪ್ರೀತಿ, ಇದರ ನಡುವೆ ಎರಡು ಕೋಮಿನವರ 'ಒಳ' ಒಪ್ಪಂದದ ರಾಜಕೀಯ. ಕೋಮು ಸೌಹಾರ್ದಕ್ಕೆ ಹೆಸರಾದ ರಾಮಾಪುರ ಜನಾಂಗೀಯ ಗಲಭೆಯಿಂದ 'ಕೋಮ' ಸ್ಥಿತಿ ತಲುಪುವುದು, ಪ್ರೇಮಿಗಳ ಸಾವು... ಹೀಗೆ ಒಂದಕ್ಕೊಂದು ಸಂಬಂಧ ಇಲ್ಲದ ದೃಶ್ಯಗಳು, ಸನ್ನಿವೇಶಗಳ ಮೂಲಕ ರಾಮಾಪುರದ ರಾಮಾಯಣಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.

ಛತ್ರಪತಿ ಕನ್ನಡ ಚಿತ್ರ ವಿಮರ್ಶೆ

27 ಡಿಸೆಂಬರ್ 2013 : ತೆಲುಗಿನ ಮೂಲ ಚಿತ್ರದಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲ ಮಸಾಲೆಗಳು ಇದ್ದವು. ಆದರೆ, ಅದೇ ಚಿತ್ರ ಕನ್ನಡಕ್ಕೆ ಬರುವಾಗ ಮೂಲದಲ್ಲಿ ಗೆಲುವಿಗೆ ಕಾರಣವಾದ ಅಂಶಗಳನ್ನು ಕೈ ಬಿಟ್ಟಿದೆ. ತೀರಾ ಸಾಧಾರಣ ಎಂಬಂತೆ ರಿಮೇಕ್ ಮಾಡಿದ್ದಾರೆ. ನಾಯಕನನ್ನು ವಿಜೃಂಭಿಸುವ ಭರದಲ್ಲೋ ಅಥವಾ 'ರಿಮೇಕ್ ಚಿತ್ರ ತಾನೇ, ಹೇಗೆ ಮಾಡಿದರೂ ನಡೆಯುತ್ತದೆ' ಎನ್ನುವ ನಿರ್ದೇಶಕನ ಮನಸ್ಥಿತಿಯಿಂದಲೋ 'ಛತ್ರಪತಿ' ಮೂಡಿ ಬಂದಂತಿದೆ.

ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ

27 ಡಿಸೆಂಬರ್ 2013 : ಸೂಕ್ಷ್ಮ ದೃಶ್ಯಗಳಿಂದ ಗಮನಸೆಳೆಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಎರಡನೇ ಚಿತ್ರದ ಮೊದಲಾರ್ಧದಲ್ಲಿ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತವೆ. ಆದರೆ ನಂತರ ಮುಂಗಾರು ಮಳೆಯ ಜಾಡು ಹಿಡಿದು ಕೊನೆಗೆ ಮಾಮೂಲು ಧಾಟಿಯಲ್ಲೇ ಅಂತ್ಯ ಕಂಡು, ಈ ಹನಿ ಹನಿ ಪ್ರೇಮ್ ಕಹಾನಿ, ಹನಿ ಹನಿಗೂಡಿದ್ರೆ ಹಳ್ಳ ಎಂಬಂತಾಗುವುದು ನಿರಾಸೆ.

ಗಾಲಿ ಚಿತ್ರ ವಿಮರ್ಶೆ

20 ಡಿಸೆಂಬರ್ 2013 : ನಾಯಕ 'ಜೀವನ್' ಈ ಸಿನಿಮಾದಿಂದ ನಂಗೆ 'ಲೈಫ್' ಸಿಗುತ್ತೆ ಅಂದ್ಕೊಂಡ್ರೆ ಅದು ಅವರ ಇನ್ನೊಂದು ತಪ್ಪು. ಪಾಯಿಂಟ್ ಟು ವರಿ ಎನ್ನುವ ವಿಷಯ ಎಂದರೆ ಅವರ ಡೈಲಾಗ್ ಡೆಲಿವರಿ. ಗಾಲಿ ಸಿನಿಮಾದಲ್ಲಿರುವುದೇ ತೀರಾ ವೀಕ್ ಸ್ಟೋರಿ. ಆದರೆ ಅದು ಎಷ್ಟು 'ವೀಕ್' ಓಡುವ ಸ್ಟೋರಿ ಎಂಬುದು ಮಾತ್ರ ಗಾಲಿ ಚಿತ್ರದ ಬಗ್ಗೆ ಆಡುವ ಗೇಲಿ ಮಾತಲ್ಲ.

ಭಜರಂಗಿ ಚಿತ್ರ ವಿಮರ್ಶೆ

12 ಡಿಸೆಂಬರ್ 2013 : ಕೈಯಲ್ಲಿ ಮಚ್ಚೇ ಇರಲಿ, ಕತ್ತಿಯೇ ಇರಲಿ, ಅದನ್ನು ಹಿಡಿಯೋ 'ಠೀವಿ ರೈಟ್ಸ್' ಕೇವಲ ಶಿವರಾಜ್ ಕುಮಾರ್ ಬಳಿಯಲ್ಲೇ ಇದೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಎಲ್ಲರೂ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಹಾತೊರೆಯುವಾಗ ಶಿವಣ್ಣ, ಬ್ಯಾಡ್ಲಕ್ ಬಾದ್ಶಾ ಎಂದು ಕರೆಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೀಟರ್ ತೋರಿಸಿರುವುದು ಸ್ಪೆಷಲ್. ಇಡೀ ಸಿನಿಮಾ ನನ್ನ ಮೇಲೆ ನಿಂತಿದೆ ಎಂಬ ಅರಿವಿಟ್ಟುಕೊಂಡೇ ಶಿವಣ್ಣ ಚಿತ್ರದುದ್ದಕ್ಕೂ ಮಿಂಚಿದ್ದಾರೆ.

ದ್ಯಾವ್ರೇ ಕನ್ನಡ ಚಿತ್ರ ವಿಮರ್ಶೆ

06 ಡಿಸೆಂಬರ್ 2013 : ವ್ಯವಸ್ಥೆಗಳನ್ನು ಮಿತಿಯಲ್ಲಿರಿಸಿ ಮನುಷ್ಯತ್ವದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದಾರೆ ವಿಜಿ. ಗೋಡೆಗಳಿಗೆ ಕಿವಿಗಳಿವೆ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಗೋಡೆಗಳಿಗೆ ಹೃದಯವೂ ಇರುತ್ತದೆ ಎನ್ನುತ್ತದೆ ದ್ಯಾವ್ರೇ ಚಿತ್ರ. ಈ ಕಾರಣಕ್ಕೆ ವಿಜಿ ಅವರನ್ನು ಗಾಡ್ ಬ್ಲೆಸ್ಡ್ ಡೈರೆಕ್ಟರ್ ಎನ್ನಬಹುದು.

ಚಡ್ಡಿದೋಸ್ತ್ ಚಿತ್ರ ವಿಮರ್ಶೆ

29 ನವೆಂಬರ್ 2013 : ರಘು, ಸಾಧು ಜೋಡಿಯ ಸಿನಿಮಾ ಆದ್ದರಿಂದ ಕಥೆ ಇಲ್ಲಿ ನಾಮ್‌ಕೇ ವಾಸ್ತೆ. ಹಾಗಂತ ಕಥೆಯೇ ಇಲ್ಲದೆ ರೀಲು ಸುತ್ತಿಲ್ಲ. ಗಟ್ಟಿಯಾದ ಸ್ನೇಹವನ್ನಿಟ್ಟುಕೊಂಡು ಕಥೆಯನ್ನು ತೆಳುವಾದ ಎಳೆಯಾಗಿಸಲಾಗಿದೆ. ಆದರೆ ಮನರಂಜನೆಗೆ ಖಂಡಿತಾ ಮೋಸವಾಗದ ಕಾರಣ ಮೊದಲಿನಿಂದ ಕೊನೆಯವರೆಗೂ, ನಗಿಸಲು ನೀವು ನಗುವೆವು ನಾವು ಎನ್ನುತ್ತಾನೆ ಪ್ರೇಕ್ಷಕ. ಆದರೆ, ಲೋ ಬಜೆಟ್, ರಘು ಅವರ ಕಾಸ್ಟ್ಯೂಮ್ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಚಿತ್ರದ ಮೈನಸ್ ಪಾಯಿಂಟ್.

ಕೂಲ್ ಗಣೇಶ ಚಿತ್ರ ವಿಮರ್ಶೆ

29 ನವೆಂಬರ್ 2013 : ಪದೇಪದೇ ಪ್ರೇಕ್ಷಕನಿಗೆ ಕೂತ ಜಾಗದಲ್ಲೇ ಬಿಸಿ ಏರಿಸುವುದರಿಂದ ನೋಡುಗರ ಪಾಲಿಗೆ 'ಹೀಟ್ ಗಣೇಶ'ನಾಗುತ್ತಾನೆ. ಜಗ್ಗೇಶ್ ಅಭಿನಯದ ಸಿನಿಮಾದಿಂದ ಮಾತು ಮಾತಿಗೂ ಕಚಗುಳಿ ಅಪೇಕ್ಷಿಸುವುದು ಸಹಜ. ಆದರೆ, ಈ ನಿರೀಕ್ಷೆ ಹುಸಿ ಮಾಡುವ ನಿಟ್ಟಿನಲ್ಲಿ ನಿರ್ದೇಶಕ ವಸಂತ್‌ ಆದಿಯಾಗಿ ಇಡೀ ಚಿತ್ರತಂಡ ಸಾಕಷ್ಟು ಶ್ರಮ ಹಾಕಿದೆ!

"ಚಿತ್ರಮಂದಿರದಲ್ಲಿ" ಚಿತ್ರ ವಿಮರ್ಶೆ

25 ಅಕ್ಟೋಬರ್ 2013 : ಕಥೆಯಲ್ಲಿನ ಒಂದಷ್ಟು ಗೊಂದಲಗಳ ಸಮಸ್ಯೆ, ನೀರಸ ಕ್ಲೈಮ್ಯಾಕ್ಸ್‌ನ ಸಮಸ್ಯೆ ಮತ್ತು ಅದರ ಜೊತೆಗೆ ತೆರೆಯ ಮೇಲೆ ಪಾತ್ರಗಳ ಲಿಪ್ ಸಿಂಕ್ ಆಗದ 'ಚಿತ್ರಮಂದಿರದಲ್ಲಿ'ನ ಸಮಸ್ಯೆಯೂ ಸೇರಿ, ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ  ಕೊಂಚ ಡಲ್ ಎನಿಸಿದರೂ ಒಟ್ಟಾರೆ ಚಿತ್ರಮಂದಿರದಲ್ಲಿ ಕುಳಿತು ನೋಡಿದರೆ ಒಂದು ವಿಭಿನ್ನ ಅನುಭವವನ್ನಂತೂ ನೀಡುವ ಚಿತ್ರವಾಗಿದೆ 'ಚಿತ್ರಮಂದಿರದಲ್ಲಿ'.