FacebookTwitter

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯಿಂದ ಹೊಸ ಪಕ್ಷ, ನಾಳೆ ಅಧಿಕೃತ ಘೋಷಣೆ

ಬೆಂಗಳೂರು(ಜ.22): ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ `ಜನಶಕ್ತಿ' ಎಂಬ ಹೊಸ ಪಕ್ಷ ಕಟ್ಟಿದ್ದಾರೆ. ನಾಳೆ ಸುಭಾಶ್ ಚಂದ್ರ ಭೋಸ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಹೊಸ ಪಕ್ಷವನ್ನು ಬಿದರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಹ್ಯಾಮಿಲ್ಟನ್'ನಲ್ಲೂ ಗೆಲುವು ಮಿಸ್ ಮಾಡಿಕೊಂಡ ಟೀಮ್ ಇಂಡಿಯಾ

ಹ್ಯಾಮಿಲ್ಟನ್(ಜ.22): ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಭಾರತ ಸೋಲಪ್ಪಿದೆ. ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 15 ರನ್'ಗಳಿಂದ ಗೆಲುವು ಸಾಧಿಸಿತು.

ವಿಧಾನಮಂಡಲ ಅಧಿವೇಶನಕ್ಕೆ ಯಡಿಯೂರಪ್ಪ ಗೈರು

 

ಇತ್ತೀಚೆಗೆತಾನೆ ಕೆಜೆಪಿಯನ್ನ ಬಿಜೆಪಿಯೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿ ಇದೀಗ ಕಾನೂನು ರೀತಿಯ ಕ್ರಮಗಳಲ್ಲಿ ತೊಡಗಿಕೊಂಡಿರುವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು, ರಾಜ್ಯ ವಿಪಕ್ಷ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲು ಸಕಲ ಸಿದ್ಧತೆಗೆ ಸ್ಪಂಧಿಸುತ್ತಿದ್ದಾರೆನ್ನಲಾಗಿದೆ.

ರಣಜಿ ಫೈನಲ್'ಗೆ ಕರ್ನಾಟಕ

ಮೊಹಾಲಿ(ಜ.22): ಕರ್ನಾಟಕ ತಂಡ ನಿರೀಕ್ಷೆಯಂತೆ ರಣಜಿ ಫೈನಲ್ ತಲುಪಿದೆ. ಪಂಜಾಬ್ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಅಂತಿಮ ಘಟ್ಟಕ್ಕೇರಿದೆ.

ಸಿದ್ದರಾಮಯ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿದೆ:ರಾಜ್ಯಪಾಲ

ರಾಜ್ಯಪಾಲರ ಭಾಷಣದಲ್ಲಿ ಸುಳ್ಳಿನ ಕಂತೆಗಳೇ ತುಂಬಿಕೊಂಡಿದ್ದು ಗಿನ್ನಿಸ್ ದಾಖಲೆಗೆ ಸೇರಿಸಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಸದಾನಂದ ಗೌಡ ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಕೋಮುಗಲಭೆ ನಡೆದಿಲ್ಲ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್

ಯಾವುದೇ ಕೋಮುಗಳ ನಡುವೆ ಪರಸ್ಪರ ಕಚ್ಚಾಟವಾಗಲೀ ನಡೆಯದೆ ಪರಸ್ಪರ ಸೌಹಾರ್ದತೆ ಕಾಪಾಡಿಕೊಂಡು ರಾಜ್ಯದಲ್ಲಿ ಶಾಂತಿ ಕಾಪಾಡಿಕೊಂಡು ಹೋಗುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಿವೃತ್ತಿಗೂ ಮುನ್ನ ಟೀಮ್ ಇಂಡಿಯಾದಲ್ಲೊಂದು ಅವಕಾಶ ಸಿಕ್ಕರೆ ಸಾಕು - ಸೆಹ್ವಾಗ್

ಹರ್ಯಾಣ(ಜ.22): ಕಳಪೆ ಪ್ರದರ್ಶನದಿಂದ ಸಾಕಷ್ಟು ದಿನಗಳಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಶತ ಪ್ರಯತ್ನ ನಡೆಸುತ್ತಿದ್ದಾರೆ. 

ಅಯ್ಯಯ್ಯೋ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ್ದಕ್ಕೆ 10,000 ರೂ. ಕಟ್ ಆಯ್ತು..!

ಶಿವಮೊಗ್ಗ(ಜ.22): ಅದ್ಯಾಕೋ ಇತ್ತೀಚೆಗೆ ಎಟಿಎಂಗಳಲ್ಲಿ ಯಡವಟ್ಟುಗಳಾಗ್ತಿವೆ. ಶಿವಮೊಗ್ಗದ ನಾಗರಾಜ ಎಂಬಾತ ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ 56 ಸೆಕೆಂಡ್ ಗಳಲ್ಲೇ 10 ಸಾವಿರ ರೂಪಾಯಿ ಮಂಗಮಾಯವಾಗಿದೆ. 

ಆಮ್`ಆದ್ಮಿ ಸಚಿವನಿಂದ ದುರ್ವರ್ತನೆ ಆರೋಪ-ಸೋಮನಾಥ್ ಭಾರ್ತಿಯನ್ನ ಗುರ್ತಿಸಿದ ಉಗಾಂಡಾ ಮಹಿಳೆ

ನವದೆಹಲಿ(ಜ.22): ಪೊಲೀಸರು ಅಸಹಕಾರ ತೋರಿದರೆಂಬ ಆರೋಪವೊಡ್ಡಿ ಅವರ ಅಮಾನತಿಗೆ ಪಟ್ಟು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಧರಣಿ ನಡೆಸುತ್ತಿರುವ ಆಮ್ ಆದ್ಮಿಯ ಕಾನೂನು ಸಚಿವ ಸೋಮನಾಥ್ ಭಾರ್ತಿಗೆ ಸಂಕಷ್ಟ ಎದುರಾಗಿದೆ.

ರಣಜಿ ಫೈನಲ್ ಹೊಸ್ತಿಲಲ್ಲಿ ಕರ್ನಾಟಕ

ಮೊಹಾಲಿ(ಜ.22): ಕರುಣ್ ನಾಯರ್ ಮತ್ತು ಅಮಿತ್ ವರ್ಮಾ ಅವರ ಅಮೋಘ ಶತಕದ ನೆರವಿನೊಂದಿಗೆ ಕರ್ನಾಟಕ ರಣಜಿ ಫೈನಲ್ ತಲುಪುವ ಸಾಧ್ಯತೆಯನ್ನ ಬಹುತೇಕ ಖಚಿತಪಡಿಸಿಕೊಂಡಿದೆ.

ಕನ್ನಡ ಗಾಯಕ ಯಶವಂತ್ ಹಳಿಬಂಡಿ ನಿಧನ

ಬೆಂಗಳೂರು(ಜ.22): ಖ್ಯಾತ ಗಾಯಕ ಯಶವಂತ್ ಹಳಿಬಂಡಿ ನಿಧನರಾಗಿದ್ದಾರೆ. 63 ವರ್ಷದ ಹಳಿಬಂಡಿ ಬುಧವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅಕ್ಕಿನೇನಿ ನಾಗೇಶ್ವರರಾವ್ ವಿಧಿವಶ

ಹೈದರಾಬಾದ್(ಜ.22): ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಟಾಲಿವುಡ್'ನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವ್ ವಿಧಿವಶರಾಗಿದ್ದಾರೆ.

ಹಠ ಸಾಧಿಸಿದ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಕೊನೆಗೂ ಮಣಿದ ಕೇಂದ್ರ ಸರ್ಕಾರ, ವಿವಾದದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಮನೆಗೆ ತೆರಳಲು ಸೂಚಿಸುವ ಮೂಲಕ ಪರೋಕ್ಷವಾಗಿ ಅಮಾನತು ಹೊರಡಿಸಿ ಅತ್ತ ಹಾವೂ ಸಾಯ್ಬಾರ್ದು ಇತ್ತ ಕೋಲೂ ಮುರಿಯಬಾರದೆಂಬ ನಾಜೂಕು ಕ್ರಮಕ್ಕೆ ಮುಂದಾಗಿ, ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ದಾರಿ ಸುಗಮಗೊಳಿಸಿದೆ.

ಸೂಕ್ತ ಹಕ್ಕು ಕಲ್ಪಿಸಿದರೆ ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರು:ರಾಹುಲ್ ಗಾಂಧಿ

ಮಹಿಳಾ ಸಬಲೀಕರಣ, ರಾಹುಲ್ ಗಾಂಧಿ/ ಸಾಂದರ್ಭಿಕ ಚಿತ್ರ_ungu

ನೀವು ನಂಬಲೇ ಬೇಕು..., ನಮ್ಮ ಮನೆಯಲ್ಲಿ ನಮ್ಮಪ್ಪ ರಾಜೀವ್ ಗಾಂಧಿಯಿದ್ದರು ಹಾಗೂ ದೊಡ್ಡಪ್ಪ ಸಂಜಯ್ ಗಾಂಧಿಯೂ ಇದ್ದರು. ಆದರೆ ನಮ್ಮ ಕುಟುಂಬದ ಬಾಸ್ ಆಗಿದ್ದವರು ನಮ್ಮಜ್ಜಿ ಇಂದಿರಾ ಗಾಂಧಿ. ಅವರ ಒಂದು ಮಾತಿನ ವಿರುದ್ಧ ಯಾರೂ ಚಕಾರವೆತ್ತುವಂತಿರಲಿಲ್ಲ. ಅವರ ನಿರ್ಧಾರ ಅಷ್ಟೊಂದು ಖಡಕ್ಕಾಗಿರುತ್ತಿತ್ತು ಎಂದು ವಿವರಿಸುವ ಮೂಲಕ ಮಹಿಳೆಯರಿಗೂ ಸಕಲ ಸಾಮರ್ಥ್ಯವಿದೆ ಎಂದು ಹುರಿದುಂಬಿಸಿದ್ದಾರೆ.

ಪಿಎಸ್ಐ ಬಂಡೆ ಸಾವು ಪ್ರಕರಣ - ಸಿಬಿಐ ತನಿಖೆಗೆ ಪತ್ನಿ ಮಲ್ಲಮ್ಮ ಆಗ್ರಹ

ಗುಲ್ಬರ್ಗಾ(ಜ.21): ಪಿಎಸ್`ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ನಮ್ಮ ಕುಟುಂಬ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಆಗ್ರಹಿಸಿದ್ದಾರೆ. 

ಕೇಜ್ರಿವಾಲ್ ಒತ್ತಡಕ್ಕೆಲ್ಲಾ ಕೇಂದ್ರ ಮಣಿಯಲ್ಲ; ಶಿಂದೆ

ಸುಶಿಲ್ ಕುಮಾರ್ ಶಿಂದೆ, ಅರವಿಂದ್ ಕೇಜ್ರಿವಾಲ್/ungu

ಪೊಲೀಸರು ಸಚಿವರ ಆದೇಶ ಪಾಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ವರದಿ ಬಂದ ಬಳಿಕ ಅದರ ಸತ್ಯಾಸತ್ಯೆತೆಯನ್ನು ಆದರಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತಾದ ಕೇಂದ್ರದ ನಿಲುವಿನಲ್ಲಿ ಯಾವೊಂದು ಬದಲಾವಣೆಯೂ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಬಂಟರನ್ನಿಟ್ಟುಕೊಂಡು ಭಂಡಾಟ ಬೇಡ ಧೋನಿ-ತಪ್ಪು ತಿದ್ದಿಕೊಳ್ಳದಿದ್ದರೆ ಸೋಲಿನ ಸರಣಿ

ನೇಪಿಯರ್(ಜ.21): ಆಸ್ಟ್ರೇಲಿಯಾ, ವೆಸ್ಟ್`ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮೂರೂ ಸರಣಿಗಳಲ್ಲಿ ಸುರೇಶ್ ರೈನಾ ಭಾರೀ ವೈಫಲ್ಯ ಅನುಭವಿಸಿದ್ದಾರೆ. ಆದರೂ, ತಂಡದಲ್ಲಿ ಮುಂದುವರೆದಿರುವ ಧೋನಿ.

ದೆಹಲಿಯಲ್ಲಿ ಕೇಜ್ರಿವಾಲ್ ಧರಣಿ:ಪೊಲೀಸರು-ಆಮ್ ಆದ್ಮಿ ಕಾರ್ಯಕರ್ತರ ಘರ್ಷಣೆ

ನವದೆಹಲಿ(ಜ.21): ಸಚಿವರ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಧರಣಿ 2ನೇ ದಿನ ಮತ್ತಷ್ಟು ತೀವ್ರತೆ ಪಡೆದಿದೆ. 

ಜೆಡಿಎಸ್ ಕಚೇರಿ ಕಾಂಗ್ರೆಸ್`ಗೆ ಸೇರಿದ್ದು - ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

ಬೆಂಗಳೂರು(ಜ.21): ಜೆಡಿಎಸ್ ಪಕ್ಷಕ್ಕೆ ಯಾಕೋ ಟೈಮ್ ಸರಿಯಿಲ್ಲ ಅಂತಾ ಕಾಣುತ್ತೆ. ಅದಕ್ಕೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಎದುರುರಾಗುತ್ತಲೇ ಇವೆ. ಈಗ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಾಲಾಗಿದೆ.

ವೀರಪ್ಪನ್ ಸಹಚರರು ಸೇರಿ 15 ಜನರ ಮರಣದಂಡನೆ ಶಿಕ್ಷೆ ಜೀವಾವಧಿಯಾಗಿ ಬದಲಾವಣೆ- ಸುಪ್ರೀಂ

ಕ್ಷಮಾದಾನ ಅರ್ಜಿ ವಿಳಂಬವಾದರೆ ಮರಣದಂಡನೆ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ .

ಸಿಎಂ ಕೇಜ್ರಿವಾಲ್ ಧರಣಿ 2ನೇ ದಿನಕ್ಕೆ

ನವದೆಹಲಿ(ಜ.21): ದೆಹಲಿಯ ಎಎಪಿ ಸರ್ಕಾರ ಹಾಗೂ ಕೇಂದ್ರ ಯುಪಿಎ ಸರ್ಕಾರದ ನಡುವಿನ ವಾರ್ ಮುಂದುವರೆದಿದೆ. ಸಿಎಂ ಕೇಜ್ರಿವಾಲ್ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.