FacebookTwitter

ಪಿಎಸ್ಐ ಬಂಡೆ ಸಾವು ಪ್ರಕರಣ - ಸಿಬಿಐ ತನಿಖೆಗೆ ಪತ್ನಿ ಮಲ್ಲಮ್ಮ ಆಗ್ರಹ

    User Rating:  / 0
    PoorBest 

 

ಗುಲ್ಬರ್ಗಾ(ಜ.21): ಪಿಎಸ್`ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ನಮ್ಮ ಕುಟುಂಬ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಆಗ್ರಹಿಸಿದ್ದಾರೆ. ಗುಲ್ಬರ್ಗಾದ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಗಂಡನಿಗೆ ಐಜಿಪಿ ವಜೀರ್ ಅಹ್ಮದ ಅವರು ಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ನನ್ನ ಗಂಡ ಹಲವಾರು ಬಾರಿ ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಐಜಿಪಿ ನನ್ನ ಗಂಡನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂದು ಬಂಡೆ ಅವರ ಪತ್ನಿ ಆರೋಪಿಸಿದ್ದಾರೆ.

ಐಜಿಪಿ ವರ್ಗಾವಣೆ ಕೈಬಿಟ್ಟಿರುವ ರಾಜ್ಯ ಸರಕಾರದ ಕ್ರಮವನ್ನು ಟೀಕಿಸಿರುವ ಅವರು, ಐಜಿಪಿ ವಜೀರ್ ಅಹ್ಮದ್ ಅವರೇ ನನ್ನ ಗಂಡನ ಸಾವಿಗೆ ನೇರ ಹೊಣೆಯಾಗಿದ್ದಾರೆ. ಹಾಗಾಗಿ, ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು. ಜನರಿಗಾಗಿ ನನ್ನ ಗಂಡ ಪ್ರಾಣ ಬಿಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಗಂಡನ ಆತ್ಮಕ್ಕೆ ಶಾಂತಿ ಕೊಡಿಸಲು ನನ್ನ ಪ್ರಾಣ ಹೋದರೂ ಸರಿ ಹೋರಾಡುತ್ತೇನೆ ಎಂದು ಮಲ್ಲಮ್ಮ ಎಚ್ಚರಿಕೆ ನೀಡಿದ್ದಾರೆ.

 

 

 

Add comment




 

More items in this section

ARCHIVED ARTICLES