FacebookTwitter

ಕನ್ನಡ ಗಾಯಕ ಯಶವಂತ್ ಹಳಿಬಂಡಿ ನಿಧನ

    User Rating:  / 1
    PoorBest 

ಬೆಂಗಳೂರು(ಜ.22): ಖ್ಯಾತ ಗಾಯಕ ಯಶವಂತ್ ಹಳಿಬಂಡಿ ನಿಧನರಾಗಿದ್ದಾರೆ. 63 ವರ್ಷದ ಹಳಿಬಂಡಿ ಬುಧವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

1950ರ ಮೇ 25ರಂದು ಧಾರವಾಡದಲ್ಲಿ ಜನಸಿದ್ದ ಯಶವಂತ್ ಹಳಿಬಂಡಿ ಆಕಾಶವಾಣಿಯಲ್ಲಿ ಗಾಯಕರಾಗಿದ್ದರು. "ಪಾತರಗಿತ್ತಿ ಪಕ್ಕ... ನೋಡಿದ್ದೇನೆ ಅಕ್ಕ" ಎಂಬ ಹಾಡಿನ ಕಂಠಸಿರಿ ಇವರದ್ದೇ... ಇದೂ ಸೇರಿ, ಅವರು ಕನ್ನಡದಲ್ಲಿ ಬಹಳಷ್ಟು ಭಾವಗೀತೆಗಳನ್ನ ಹಾಡಿ ಜನಮಾನಸದಲ್ಲಿ ಅಚ್ಚೊತ್ತಿದ್ದಾರೆ. 250ಕ್ಕೂ ಹೆಚ್ಚು ಗೀತೆಗಳನ್ನ ಹಾಡಿರುವ ಹಳಿಬಂಡಿ ಕರ್ನಾಟಕ ಕಲಾಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ. ಹಳಿಬಂಡಿಯವರ ಪುತ್ರ ಪಂಚಮ್ ಎಂಬುವವರೂ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ..

ಬಸವನಗುಡಿ ಬಳಿಯ ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

 

 

 

Add comment




 

More items in this section

ARCHIVED ARTICLES