FacebookTwitter

ಕಾಂಗ್ರೆಸ್ ಆಡಳಿತದಲ್ಲಿ ಕೋಮುಗಲಭೆ ನಡೆದಿಲ್ಲ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್

    User Rating:  / 0
    PoorBest 

 

ಬೆಂಗಳೂರು: ದೇಶ, ಧರ್ಮ, ತಾಯಿ ಸೆಂಟಿಮೆಂಟುಗಳನ್ನು ವ್ಯವಸ್ಥಿತವಾಗಿ ಬಳಸಿ ದೈವತ್ವವನ್ನು ಹಾಗೂ ಧರ್ಮವನ್ನು ನಂಬುವ ಅಮಾಯಕರ ಭಾವನೆಗಳನ್ನು ಕೆರಳಿಸಿ ಅವರನ್ನು ಪರಸ್ಪರ ಕಚ್ಚಾಡಿಸಿ ಅವರೆಲ್ಲರೂ ಒಬ್ಬರಿಗೊಬ್ಬರೂ ಹಗೆತನ ತೀರಿಸುವ ವೈಷಮ್ಯದಲ್ಲೇ ನಿರತರಾಗಿರುವ ಸಂದರ್ಭದಲ್ಲಿ ಇತ್ತ ಉಪಾಯದಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಮಾಸ್ಟರ್ ಪ್ಲಾನ್ ಹೊಂದಿದೆಯೆನ್ನಲಾಗಿರುವ ಕೋಮುಗಲಭೆಗಳಿಗೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ ಎಂದು ಬುಧವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರದಿಂದ ಏಳು ದಿನಗಳ ಕಾಲ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲದೆ, ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯ ನೆಮ್ಮದಿಯಿಂದಿದ್ದು, ಬಹುತೇಕ ಬಡಪರ ಯೋಜನೆಗಳು ಅನುಷ್ಟಾನಕ್ಕೆ ಬಂದಿರುವುದಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಕೋಮುಗಳ ನಡುವೆ ಪರಸ್ಪರ ಕಚ್ಚಾಟವಾಗಲೀ ನಡೆಯದೆ ಪರಸ್ಪರ ಸೌಹಾರ್ದತೆ ಕಾಪಾಡಿಕೊಂಡು ರಾಜ್ಯದಲ್ಲಿ ಶಾಂತಿ ಕಾಪಾಡಿಕೊಂಡು ಹೋಗುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಚಿಕ್ಕಮಗಳೂರಿನ ಮಸೀದಿಯೊಂದಕ್ಕೆ ಹಂದಿಮಾಂಸವನ್ನು ಎಸೆದಿದ್ದ ಕಿಡಿಗೇಡಿಗಳು ಅಲ್ಲಿನ ಶಾಂತಿಯುತ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದರಾದರೂ, ದೇಶದ್ರೋಹಿ ಕೋಮುವಾದಿಗಳ ಮಾಸ್ಟರ್ ಪ್ಲಾನ್ ವಿಫಲವಾಗಿತ್ತು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಭಮಾಡಿಕೊಳ್ಳುವ ವ್ಯಾಪಾರಿ ಚಿಂತನೆಯಿಂದ ಜನರ ಭಾವನೆಗಳನ್ನು ಕೆರಳಿಸಿ ಆನಂತರ ಅವರಿಗೆ ಸ್ವಾಂತನ ಹೇಳುವ ನೆಪದಲ್ಲಿ ಹಾಜರಾಗಿ ಮಹಾನ್ ನಾಯಕರಂತೆ ಪೋಸುಕೊಟ್ಟು ಸಿನಿಮೀಯ ರೀತಿಯಲ್ಲಿ ಭರವಸೆಗಳ ಮಾತನಾಡಿ ಜನರ ಪ್ರೀತಿಗಳಿಸಿ, ಅದೇ ಪ್ರೀತಿ ಅಭಿಮಾನವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಯತ್ನ ನಡೆದಿತ್ತಾದರೂ, ಅದೃಷ್ಟವಶಾತ್ ಯಾವುದೇ ಅಮಾಯಕರು ರೋಚ್ಚಿಗೇಳದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.

ಸಾಮಾನ್ಯವಾಗಿ ಹಿಂದೂ ದೇವಾಲಯದೊಳಗೆ ದನದ ಮಾಂಸ ಎಸೆದರೆ ಹಿಂದೂಗಳು ರೊಚ್ಚಿಗೇಳುವುದು ಹಾಗೂ ಮುಸಲ್ಮಾನರ ಮಸೀದಿಯೊಳಗೆ ಹಂದಿ ಮಾಂಸವನ್ನ ಕಡಿದು ಎಸೆದರೆ ತಟ್ಟನೆ ರೊಚ್ಚಿಗೆದ್ದು ಒಬ್ಬರಿಗೊಬ್ಬರು ಹಗೆತನ ತೀರಿಸಿಕೊಳ್ಳಲು ಗುಸುಗುಸು ಮಾತನಾಡಿಕೊಂಡು ದ್ವೇಷ ಕಟ್ಟಿಕೊಂಡು ಕಡಿದಾಡಿ ಹೆಣವಾಗುವುದು ಸಾಮಾನ್ಯವೇ ಆದರೂ ಅದೃಷ್ಟವಶಾತ್ ಯಾವೊಂದು ಕೋಮಿನ ರುಂಡವೂ ಈ ಬಾರಿ ಉದುರಲಿಲ್ಲ.

ಕೋಮುಗಲಭೆಯ ತರುವಾಯ ನೊಂದವರಿಗೆ ನೆರವಾಗುವ ರೀತಿಯಲ್ಲಿ ಹಾಗೂ ಪಕ್ಕಾ ಸಾಥ್ ಕೊಡುವ ಆಪ್ತರಕ್ಷಕರಂತೆ ವೇಷತೊಟ್ಟುಕೊಂಡು ಬರುತ್ತಿದ್ದ ರಾಜಕಾರಣಿಗಳು, ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯೆಂದು ನಕಾರಾತ್ಮಕವಾಗಿ ಭಾಷಣ ಬಿಗಿದು ಬಿಟ್ಟಿಯಾಗಿ ಜನಪ್ರೀಯಗಳಿಸುವ ನಾಟಕವೂ ಚಿಕ್ಕಮಗಳೂರು ಸಂಚಿನಲ್ಲಿ ವಿಫಲವಾಗಿತ್ತು.

ದುರಂತಮಯವೆಂಬಂತೆ ಕೆಲ ಬಡಪಾಯಿ ಬಿಸಿರಕ್ತದ ಹುಡುಗರು ಪ್ರತಿಭಟನೆಯ ನೆಪದಲ್ಲಿ ಅಂಗಡಿಮುಂಗಟ್ಟುಗಳನ್ನು ಬಲತ್ಕಾರವಾಗಿ ಮುಚ್ಚಿಸುವ ವಿಫಲ ಯತ್ನ ನಡೆಸಿದ್ದರಾದರೂ ಪ್ರಯತ್ನ ಯಶಸ್ವಿಯಾಗಿಲ್ಲ. ಜತೆಗೆ, ನಡು ರಸ್ತೆಯಲ್ಲಿ ಟೈರುಗಳನ್ನು ಸುಟ್ಟು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಯಾವನೋ ಕಿಡಿಗೇಡಿಯೊಬ್ಬ ಮಸೀದಿಯೊಂದಕ್ಕೆ ಹಂದಿ ಮಾಂಸ ಎಸೆದನೆಂದರೆ ಅದಕ್ಕೆ ಅಕ್ಕಪಕ್ಕದ ಅನ್ಯ ಧರ್ಮೀಯನ ವಿರುದ್ಧ ಕೆಂಗಣ್ಣು ಬೀರುವುದು ಯಾವ ನ್ಯಾಯ ಎಂಬ ತಾರ್ಕಿಕ ವಾದಕ್ಕೆ ವಿರುದ್ಧವಾಗಿ ಮೊನ್ನೆ ಮೊನ್ನೆ ಚಿಕ್ಕಮಗಳೂರಿನಲ್ಲಿ ನಡೆದ ಶಾಂತಿ ಕದಡುವ ಯತ್ನದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಲಿದ್ದ ಸಂದರ್ಭದಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದ ಜಾಗೃತ ಖಡಕ್ ಪೊಲೀಸರು, ಉದ್ರಿಕ್ತ ಗುಂಪು ಚದುರಿಸಲು ಎರ್ರಾಬಿರ್ರಿ ಲಾಠಿ ಬೀಸಿ ಬಿಗುವಿನ ವಾತಾವರಣವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.  

 

 

 

 

Add comment
 

More items in this section

ARCHIVED ARTICLES