FacebookTwitter

ರಣಜಿ ಫೈನಲ್'ಗೆ ಕರ್ನಾಟಕ

    User Rating:  / 0
    PoorBest 

ಮೊಹಾಲಿ(ಜ.22): ಕರ್ನಾಟಕ ತಂಡ ನಿರೀಕ್ಷೆಯಂತೆ ರಣಜಿ ಫೈನಲ್ ತಲುಪಿದೆ. ಇಂದು ನಡೆಯಬೇಕಿದ್ದ ಪಂಜಾಬ್ ವಿರುದ್ಧದ ಸೆಮಿಫೈನಲ್'ನ ಕೊನೆಯ ದಿನದಾಟವೂ ಮಳೆಯಿಂದಾಗಿ ಸ್ಥಗಿತಗೊಂಡಿತು. ಹೀಗಾಗಿ, ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಅಂತಿಮ ಘಟ್ಟಕ್ಕೇರಿದೆ.

ಕರುಣ್ ನಾಯರ್ ಮತ್ತು ಅಮಿತ್ ವರ್ಮಾ ಅವರ ಅಮೋಘ ಶತಕದ ನೆರವಿನೊಂದಿಗೆ ಕರ್ನಾಟಕ ರಣಜಿ ಫೈನಲ್ ತಲುಪುವ ಸಾಧ್ಯತೆಯನ್ನ ನಿನ್ನೆಯೇ ಖಚಿತಪಡಿಸಿಕೊಂಡಿತ್ತು.. ಪಂದ್ಯದ ನಾಲ್ಕನೇ ದಿನಾಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 447 ರನ್ ಗಳಿಸಿ 177 ರನ್ನುಗಳ ಅಮೋಘ ಮೊದಲ ಇನಿಂಗ್ಸ್ ಮುನ್ನಡೆ ಪಡೆದುಕೊಂಡು ಸುಸ್ಥಿತಿಯಲ್ಲಿತ್ತು..

ನಿನ್ನೆ 5 ವಿಕೆಟ್ ನಷ್ಟಕ್ಕೆ 351 ರನ್ನುಗಳೊಂದಿಗೆ ನಾಲ್ಕನೇ ದಿನದಾಟ ಮುಂದುವರಿಸಿದ ಕರ್ನಾಟಕ ಸರಾಗವಾಗಿ ರನ್ ಪೇರಿಸುತ್ತಾ ಹೋಯಿತು. ಮೂರನೇ ದಿನವೇ ಶತಕ ಭಾರಿಸಿದ್ದ ಕರುಣ್ ನಾಯರ್ ತಮ್ಮ ಅದ್ಭುತ ಆಟ ಮುಂದುವರಿಸಿದರು. ಅಮಿತ್ ವರ್ಮಾ ಕೂಡ ಶತಕ ಪೂರೈಸಿದರು. ಇಬ್ಬರೂ 6ನೇ ವಿಕೆಟ್'ಗೆ ಮುರಿಯದ 206 ರನ್ ಜೊತೆಯಾಟ ನೀಡಿದರು. ಈ ಇಬ್ಬರು ಬ್ಯಾಟುಗಾರರ ಜೊತೆಯಾಟ ಮುರಿಯಲು ಹರ್ಭಜನ್ ಸಿಂಗ್ ಮತ್ತವರ ಸಂಗಡಿಗ ಬೌಲರುಗಳು ಹರಸಾಹಸ ಪಡುವುದನ್ನ ನೋಡಲು ಸಾಧ್ಯವಾಗದೇ ವರುಣನೇ ಮಧ್ಯ ಬಂದು ಜೊತೆಯಾಟ ನಿಲ್ಲಿಸಿದಂತಿತ್ತು... ಇಡೀ ದಿನ ಕೇವಲ 36 ಓವರ್ ಆಟವಷ್ಟೇ ಸಾಧ್ಯವಾಗಿದ್ದು...

ಅಮಿತನ ಸಾಹಸಗಳು...
ನಾಲ್ಕನೇ ದಿನದಂದು ಎಲ್ಲರ ಗಮನ ಸೆಳೆದದ್ದು ಅಮಿತ್ ವರ್ಮಾ.. ಮೈದಾನದ ಮೂಲೆ ಮೂಲೆಗೂ ಚೆಂಡನ್ನ ಆಟ್ಟುವ ಮೂಲಕ ಪಂಜಾಬಿ ಬೌಲರ್'ಗಳ ಬೆವರಿಳಿಸಿದ ಅಮಿತ್ ವರ್ಮಾ ತಮ್ಮ 7ನೇ ಶತಕ ಭಾರಿಸಿ ಹೀರೋ ಎನಿಸಿದರು. ಅಮಿತ್ 17 ಬೌಂಡರಿಗಳ ಸಹಿತ 114 ರನ್ ಗಳಿಸಿದರು. ಈವರೆಗೆ 38 ಫಸ್ಟ್ ಕ್ಲಾಸ್ ಪಂದ್ಯಗಳನ್ನಾಡಿರುವ ಅಮಿತ್ ವರ್ಮಾ 44.30 ಸರಾಸರಿಯಲ್ಲಿ 2,304 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 7 ಆಕರ್ಷಕ ಶತಕ ಹಾಗೂ 10 ಅರ್ಧ ಶತಕಗಳು ಸೇರಿವೆ. ಹಾಗೆಯೇ, 22 ವಿಕೆಟ್ ಕೂಡ ಕಬಳಿಸಿದ್ದಾರೆ...

ಮಹಾ ಸವಾಲು...
ಎರಡು ದಶಕಗಳ ಬಳಿಕ ಕರ್ನಾಟಕ ತಂಡ ರಣಜಿ ಪ್ರಶಸ್ತಿಯ ಹೊಸ್ತಿಲಿಗೆ ಬಂದಿದೆ. ಇನ್ನೊಂದೆಡೆ, ಮಹಾರಾಷ್ಟ್ರ ಕೂಡ ದಶಕಗಳ ನಂತರ ರಣಜಿ ಫೈನಲ್ ತಲುಪಿದೆ. ಹೈದರಾಬಾದ್'ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.



ಸ್ಕೋರು ವಿವರ:

ಪಂಜಾಬ್ ಮೊದಲ ಇನಿಂಗ್ಸ್ 270 ರನ್


ಕರ್ನಾಟಕ ಮೊದಲ ಇನಿಂಗ್ಸ್ 447/5

(ಕರುಣ್ ನಾಯರ್ ಅಜೇಯ 151, ಅಮಿತ್ ವರ್ಮಾ ಅಜೇಯ 114, ಮನೀಶ್ ಪಾಂಡೆ 65, ಸಿಎಂ ಗೌತಂ 48, ರಾಬಿನ್ ಉತ್ತಪ್ಪ 47 ರನ್ - ಹರ್ಭಜನ್ ಸಿಂಗ್ 98/2)

 

 

 

Add comment




 

More items in this section

ARCHIVED ARTICLES