FacebookTwitter

ವಿಧಾನಮಂಡಲ ಅಧಿವೇಶನಕ್ಕೆ ಯಡಿಯೂರಪ್ಪ ಗೈರು

    User Rating:  / 0
    PoorBest 

 

ಬೆಂಗಳೂರು: ಬುಧವಾರದಿಂದ ಆರಂಭವಾಗಿರುವ ವಿದಾನಮಂಡಲ ಅಧಿವೇಶನದಲ್ಲಿ ಬಹುತೇಕ ನಾಯಕರು ಭಾಗಿಯಾಗಿರುವ ಹೊರತಾಗಿಯೂ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಗೈರು ಹಾಜರಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಿಎಸ್’ವೈ ಗೈರುಹಾಜರಿಯ ಹಿಂದೆಯೂ ಏನೋ ರಾಜಕೀಯ ತಂತ್ರವಿದೆ ಎಂಬ ಮಾತು ಕೇಳಿಬಂದಿದೆ.

ಇತ್ತೀಚೆಗೆತಾನೆ ಕೆಜೆಪಿಯನ್ನ ಬಿಜೆಪಿಯೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿ ಇದೀಗ ಕಾನೂನು ರೀತಿಯ ಕ್ರಮಗಳಲ್ಲಿ ತೊಡಗಿಕೊಂಡಿರುವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು, ರಾಜ್ಯ ವಿಪಕ್ಷ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲು ಸಕಲ ಸಿದ್ಧತೆಗೆ ಸ್ಪಂಧಿಸುತ್ತಿದ್ದಾರೆನ್ನಲಾಗಿದೆ.

ಈ ನಡುವೆ, ಕೆಜೆಪಿಯಿಂದ ಬಿಜೆಪಿಗೆ ವಾಪಾಸು ಬಂದ ಯಡಿಯೂರಪ್ಪ, ವಯಕ್ತಿಕವಾಗಿ ತನಗೆ ಯಾವುದೇ ರೀತಿಯ ಸ್ಥಾನಮಾನ ಬೇಡವಾದರೂ ತನ್ನ ಬೆಂಬಲಿಗ ಶಾಸಕರಿಗೆ ಸೂಕ್ತ ಸ್ಥಾನಮಾನಕ್ಕೆ ಬೇಡಿಕೆಯಿಟ್ಟಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದರಾದರೂ, ಬಿಎಸ್’ವೈ ರಾಜಕೀಯದ ಆಳ ಅಗಲ ಅರಿತವರ ಅಭಿಪ್ರಾಯಗಳಂತೆ, ಆರಂಭದಲ್ಲಿ ತನಗೆ ಯಾವುದೇ ಬೇಡಿಕೆಯಿಡದ ಇದೇ ಯಡಿಯೂರಪ್ಪ, ಕೊನೆಗೆ ತನ್ನ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಸಿಕ್ಕಬಳಿಕ ಅವರನ್ನೇ ರಿಮೋಟ್ ಕಂಟ್ರೋಲಾಗಿ ಬಳಸಿಕೊಂಡು ರಾಜ್ಯ ಬಿಜೆಪಿಯನ್ನು ತೊಗಲುಗೊಂಬೆಯಂತೆ ಆಡಿಸಿ ನಡುಗಿಸಿಬಿಡುವ ಸಾಧ್ಯತೆಯಿದೆ ಎಂಬ ಭವಿಷ್ಯ ಕೇಳಿಬಂದಿದೆ.

 

 

 

 

Add comment




 

More items in this section

ARCHIVED ARTICLES