FacebookTwitter

ಎಫ್1 ರೇಸ್: ಮಲೇಷ್ಯಾದಲ್ಲಿ ವೆಟೆಲ್ ಗೆಲುವು

    User Rating:  / 0

ಸೆಪಾಂಗ್(ಮಾ.24): ಫಾರ್ಮುಲಾ ಒನ್ ವಿಶ್ವಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್ ಈ ಋತುವಿನಲ್ಲಿ ಮೊದಲ ಗೆಲುವು ಪಡೆದಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾ ಜಿಪಿ ರೇಸಿನಲ್ಲಿ ಮೂರನೇ ಸ್ಥಾನ ಪಡೆದಿದ್ದ ವೆಟೆಲ್ ಇಂದು ನಡೆದ ಮಲೇಷ್ಯಾ ಗ್ರ್ಯಾನ್ ಪ್ರೀ ಸ್ಪರ್ಧೆಯನ್ನು ಜಯಿಸಿದ್ದಾರೆ.

ರೆಡ್ ಬುಲ್ ತಂಡದ ಇಬ್ಬರೂ ಡ್ರೈವರುಗಳಾದ ಸೆಬಾಸ್ಟಿಯನ್ ವೆಟೆಲ್ ಮತ್ತು ಮಾರ್ಕ್ ವೆಬೆರ್ ಮೊದಲೆರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು ವಿಶೇಷ. ಆದರೆ, 56 ಸುತ್ತುಗಳಿದ್ದ ಈ ಸ್ಪರ್ಧೆಯಲ್ಲಿ ಸಾಕಷ್ಟು ನಾಟಕೀಯ ಅಂಶಗಳೂ ಇದ್ದದ್ದು ನಿಜ... ತಂಡದ ಆದೇಶಗಳನ್ನ ಧಿಕ್ಕರಿಸಿ ಮಾರ್ಕ್ ವೆಬೆರ್ ಅವರನ್ನ ಓವರ್ಟೇಕ್ ಮಾಡಿ ಗೆಲುವು ಸಾಧಿಸಿದ ಸೆಬಾಸ್ಟಿಯನ್ ವೆಟೆಲ್ ತಮ್ಮ ತಂಡದವರ ಮುನಿಸಿಗೆ ತುತ್ತಾಗಿದ್ದಾರೆ. ಅದೆಲ್ಲಾ ಟೀಮ್ ವಿಷಯವಾದರೂ ವೆಟೆಲ್ ಈ ಸ್ಪರ್ಧೆಯನ್ನ ಗೆದ್ದಿದ್ದು ವಾಸ್ತವದ ಅಂಶ....

ಇನ್ನು, ಸಹಾರಾ ಫೋರ್ಸ್ ಇಂಡಿಯಾದ ಎರಡೂ ಕಾರುಗಳು ಟೈರ್ ತೊಂದರೆಗಳಿಂದಾಗಿ ಮಧ್ಯದಲ್ಲೇ ನಿಂತುಹೋಗಿದ್ದು ದುರಂತ. ಕಳೆದ ವಾರದ ಆಸ್ಟ್ರೇಲಿಯಾ ಸ್ಪರ್ಧೆಯಲ್ಲಿ 7 ಮತ್ತು 8 ಸ್ಥಾನಗಳೊಂದಿಗೆ 6 ಮತ್ತು 4 ಅಂಕಗಳನ್ನ ಗೆದ್ದುಕೊಂಡಿದ್ದ ಫೋರ್ಸ್ ಇಂಡಿಯಾದ ಅಡ್ರಿಯಾನ್ ಸುಟಿಲ್ ಮತ್ತು ಪೌಲ್ ಡೀ ರೆಸ್ಟಾ ಅವರು ಮಲೇಷ್ಯಾದಲ್ಲಿ ನಿರಾಶೆ ಅನುಭವಿಸಬೇಕಾಯಿತು. ಆದರೂ, ಏಪ್ರಿಲ್ 14ರಂದು ನಡೆಯುವ ಚೀನೀ ಗ್ರ್ಯಾನ್ ಪ್ರೀ ರೇಸಿನಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವನ್ನು ಅವರಿಬ್ಬರು ವ್ಯಕ್ತಪಡಿಸಿದ್ದಾರೆ....

ಇವತ್ತಿನ ಪೆಟ್ರೋನಾಸ್ ಮಲೇಷ್ಯಾ ಗ್ರ್ಯಾನ್ ಪ್ರೀ ಸ್ಪರ್ಧೆಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳೆರಡೂ ಮೆರ್ಸಿಡೆಸ್ ತಂಡದ ಪಾಲಾದವು. ಲೆವಿಸ್ ಹ್ಯಾಮಿಲ್ಟನ್ 3ನೇ ಸ್ಥಾನ ಪಡೆದರೆ, ನಿಕೋ ರೋಸ್ಬರ್ಗ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಫೆರಾರಿ ತಂಡದ ಫೆಲಿಪ್ ಮಾಸಾ 5ನೇ ಸ್ಥಾನ ಪಡೆದುಕೊಂಡರು...

6 ಮತ್ತು 7ನೇ ಸ್ಥಾನಗಳನ್ನ ಲೋಟಸ್ ತಂಡ ಗೆದ್ದುಕೊಂಡಿತು. ಕಳೆದ ಬಾರಿ 8ನೇ ಸ್ಥಾನ ಗಳಿಸಿದ್ದ ರೊಮೇನ್ ಗ್ರೋಸ್ಜಿಯನ್ ಈ ಬಾರಿ 5ನೇ ಸ್ಥಾನ ಪಡೆದುಕೊಂಡರು. ಆಸ್ಟ್ರೇಲಿಯಾ ರೇಸನ್ನ ಗೆದ್ದು ಅಚ್ಚರಿ ಮೂಡಿಸಿದ್ದ ಕಿಮಿ ರಾಯ್ಕೋನೆನ್ ಇಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು...

ಇನ್ನು, 8, 9 ಮತ್ತು 10ನೇ ಸ್ಥಾನಗಳು ಸೌಬರ್ ತಂಡದ ನಿಕೋ ಹುಲ್ಕೆನ್ಬರ್ಗ್, ಮೆಕ್ಲೇರನ್ ತಂಡದ ಸೆರ್ಗಿಯೋ ಪೆರೆಜ್ ಮತ್ತು ಎಸ್.ಟಿ.ಆರ್. ತಂಡದ ಜೀನ್ ಎರಿಕ್ ವೆರ್ಗ್ನೆ ಅವರ ಪಾಲಾದವು.

1ರಿಂದ 10ರವರೆಗಿನ ಸ್ಥಾನ ಪಡೆದ ಚಾಲಕರಿಗೆ ಕ್ರಮವಾಗಿ 25, 18, 15, 12, 10, 8, 6, 4, 2, 1 ಪಾಯಿಂಟುಗಳು ದೊರಕುತ್ತವೆ. ಒಟ್ಟು 19 ರೇಸುಗಳ ಈ ಫಾರ್ಮುಲಾ ಒನ್ ಚಾಂಪಿಯನ್ಶಿಪ್ನಲ್ಲಿ ಇನ್ನೂ 17 ಸ್ಪರ್ಧೆಗಳಿವೆ. ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲೂ ಒಂದು ಗ್ರ್ಯಾನ್ ಪ್ರೀ ರೇಸ್ ಇದೆ... ಈವರೆಗೆ ನಡೆದ ಎರಡು ರೇಸುಗಳ ನಂತರ ತಂಡಗಳ ಬಲಾಬಲ ಇಲ್ಲಿದೆ...

1) ರೆಡ್ ಬುಲ್ - 66
2) ಲೋಟಸ್ - 40
3) ಫೆರಾರಿ - 40
4) ಮೆರ್ಸಿಡೆಸ್ - 37
5) ಸಹಾರಾ ಫೋರ್ಸ್ ಇಂಡಿಯಾ - 10
6) ಸೌಬರ್ - 4
7) ಮೆಕ್ಲೇರೆನ್ - 4
8) ಎಸ್.ಟಿ.ಆರ್. - 1
9) ವಿಲಿಯಮ್ಸ್-ರಿನಾಲ್ಟ್ - 0
10) ಮಾರುಸಿಯಾ-ಕಾಸ್ವರ್ತ್ - 0
11) ಕಟೆರ್ಹಾಂ - 0

 

 

 

Add comment
 

More items in this section

ARCHIVED ARTICLES