FacebookTwitter

ಕಾಶ್ಮೀರ: ಹಾಡಹಗಲೇ ಗುಂಡು ಹಾರಿಸಿದ ಬಂಡುಕೋರ ಎಸ್ಕೇಪ್ ಆದ ಎನ್ನುತ್ತಿದ್ದಾರೆ ಪೊಲೀಸರು

    User Rating:  / 0
ಬಂಡುಕೋರರ ದಾಳಿ

ಸೊಪೋರ್: ಜಮ್ಮು ಕಾಶ್ಮೀರದ ಸೊಫೋರ್ ಪ್ರದೇಶದಲ್ಲಿರುವ ಬಾರಾಮುಲ್ಲಾ ಜಿಲ್ಲಾ ಪೊಲೀಸ್ ಘಟಕವನ್ನು ಗುರಿಯಾಗಿಸಿ ಶಂಕಿತ ಬಂಡುಕೋರನೊಬ್ಬ ನಡೆಸಿದ ಗುಂಡಿನ ದಾಳಿಗೆ ಅರವತ್ತು ವರ್ಷದ ನಾಗರಿಕರೊಬ್ಬರು ಮೃತಪಟ್ಟಿದ್ದು, ಮೀಸಲು ಪಡೆಯ ಪೊಲೀಸ್ ಪೇದೆಯೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ಅಪರಾಹ್ನ ನಡೆದಿದೆ.

ಎಕೆ 47 ಗನ್ ನಿಂದ ಮುಲಾಜಿಲ್ಲದೆ ಗುಂಡು ಹಾರಿಸಿದ ಪರಿಣಾಮ ಭಯಭೀತರಾಗಿದ್ದ ಜನತೆ ದಿಕ್ಕಾಪಾಲಾಗಿ ಓಡತೊಡಗಿದ್ದರಿಂದ ನೂಕುನುಗ್ಗಲು ಏರ್ಪಟ್ಟು ಹಲವರು ನೆಲಕ್ಕೆ ಬಿದ್ದು ಕಾಲ್ತುಳಿತಕ್ಕೊಳಗಾಗಿರುವುದಾಗಿ ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಡ ಹಗಲೇ ಗುಂಡು ಹಾರಿಸಿದ ಶಂಕಿತ ಬಂಡುಕೋರ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ತಿಳಿಸಿದ್ದಾರೆ.

 

 

 

Add comment




 

More items in this section

ARCHIVED ARTICLES