FacebookTwitter

ಜೊಕೋವಿಚ್ಗೆ ಸೋಲೊಪ್ಪಿದ ಸೋಮದೇವ್

    User Rating:  / 0

ಮಿಯಾಮಿ,ಅಮೆರಿಕ (ಮಾ.25): ಭಾರತೀಯ ಟೆನಿಸ್ ಪ್ರಿಯರಿಗೆ ಪವಾಡದ ಕನಸು ಸದ್ಯಕ್ಕಂತೂ ನನಸಾಗಲಿಲ್ಲ. ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೋವಿಚ್ ವಿರುದ್ಧ ಸೋಮದೇವ್ ಗೆದ್ದು ಹೊಸ ಸಂಚಲನ ಸೃಷ್ಟಿಸುತ್ತಾರೆಂಬ ಬಯಕೆ ಈಡೇರಲಿಲ್ಲ. ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ವಿಶ್ವದ ಅತ್ಯುತ್ತಮ ಆಟಗಾರ ಜೊಕೋವಿಚ್ 6-2, 6-4ರಿಂದ ಸೋಮದೇವ್ ಅವರನ್ನು ಸೋಲಿಸಿದರು.

ಹಾರ್ಡ್ ಕೋರ್ಟ್ ಅಂಗಳದಲ್ಲಿ ಸರ್ಬಿಯಾದ ಆಟಗಾರನಿಗೆ ಸರಿಸಾಟಿ ಯಾರೂ ಇಲ್ಲ. ಈ ಹಿನ್ನೆಲೆಯಲ್ಲಿ ಸೋಮದೇವ್ ಅವರ ಗೆಲುವಿನ ಸಾಧ್ಯತೆ ಇರಲಿಲ್ಲ. ಆದರೂ ಟೆನಿಸ್ ಕ್ರೀಡೆಯಲ್ಲಿ ಏನು ಬೇಕಾದರೂ ಸಂಭವಿಸಬಹುದಲ್ಲಾ..! ಟಾಪ್ 50 ಆಟಗಾರರನ್ನ ಆಗಾಗ ಸೋಲಿಸುತ್ತಿದ್ದ ಸೋಮದೇವ್ ಅವರು ವಿಶ್ವದ ಅಗ್ರ ಆಟಗಾರನನ್ನ ಮಣಿಸಿದರೆ ಅಂಥ ತೀರಾ ಅಚ್ಚರಿ ಏನಲ್ಲ. ಆದರೂ ವಿಶ್ವದ 254ನೇ ಶ್ರೇಯಾಂಕದ ಸೋಮದೇವ್ ಅವರಿಂದ ಈ ಗೆಲುವನ್ನು ನಿರೀಕ್ಷಿಸಿದ್ದು ಸ್ವಲ್ಪ ಹೆಚ್ಚಾಯಿತೇನೋ...! ಆದರೆ, ಸೋಮದೇವ್ ನಿರೀಕ್ಷೆಮೀರಿ ಸುಲಭವಾಗಿ ಸೋಲಪ್ಪಿದರು.

ಹಾರ್ಡ್ ಕೋರ್ಟ್ ಸ್ಪೆಷಲಿಸ್ಟ್ ಜೊಕೋವಿಚ್ ಈ ಪಂದ್ಯದಲ್ಲಿ ಎಲ್ಲಿಯೂ ವರ್ಮನ್ಗೆ ಅವಕಾಶ ನೀಡಲಿಲ್ಲ. ಎರಡನೇ ಸೆಟ್್ನಲ್ಲಷ್ಟೇ ಸೋಮದೇವ್ ಸ್ವಲ್ಪ ಲಯ ಕಂಡುಕೊಂಡಂತೆ ತೋರಿತು. ಆದರೆ, ಜೊಕೋವಿಚ್ ಅವರ ವೈವಿಧ್ಯಮಯ ಹೊಡೆತಗಳಿಗೆ ಭಾರತದ ಆಟಗಾರನ ಬಳಿ ಹೆಚ್ಚು ಪ್ರತ್ಯಾಸ್ತ್ರಗಳಿರಲಿಲ್ಲ...

ಜೊಕೋವಿಚ್ ಕ್ವಾರ್ಟರ್ ಫೈನಲ್ ಪ್ರವೇಶಕ್ಕಾಗಿ ಮುಂದಿನ ಸುತ್ತಿನಲ್ಲಿ ಜರ್ಮನಿಯ ಟಾಮಿ ಹಾಸ್ ವಿರುದ್ಧ ಸೆಣಸಲಿದ್ದಾರೆ.

ಇತ್ತ, ಸೋಮದೇವ್ ಈ ಟೂರ್ನಿಯಿಂದ ನಿರ್ಗಮಿಸಿದರೂ ಅವರ ವಿಶ್ವರ್ಯಾಂಕಿಂಗ್ ಮೇಲೇರುವುದರಲ್ಲಿ ಅನುಮಾನವೇ ಇಲ್ಲ. ಅರ್ಹತಾ ಗಡಿಯನ್ನು ದಾಟಿ ಮೂರನೇ ಸುತ್ತಿನವರೆಗೂ ಪ್ರವೇಶಿಸಿದ ಸಾಧನೆಗಾಗಿ ಸೋಮದೇವ್ ಟಾಪ್-200 ರ ಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ....

 

 

 

Add comment




 

More items in this section

ARCHIVED ARTICLES