FacebookTwitter

ಮಲಗಿದ್ದಲ್ಲೇ ಶವವಾದ ಆರು ಕಾರ್ಮಿಕರು

    User Rating:  / 0

ಬೆಂಗಳೂರು(ಮಾ.25): ಉದ್ಯಾನನಗರಿಯಲ್ಲಿ ಮತ್ತೊಂದು ಅಗ್ನಿಅವಘಡ ಸಂಭವಿಸಿದೆ. ಗೋದಾಮಿನಲ್ಲಿದ್ದ ಆರು ಕಾರ್ಮಿಕರು ಮಲಗಿದ್ದಲ್ಲೇ ಬೆಂಕಿಗಾಹುತಿಯಾದ ಧಾರುಣ ಘಟನೆ ನಡೆದಿದೆ... ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ನಲ್ಲಿರುವ ಎಸ್.ಆರ್.ಸೀಟಿಂಗ್ ಸಿಸ್ಟಂ ಗೋದಾಮಿನಲ್ಲಿ ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ.

ಮೃತ ಕಾರ್ಮಿಕರೆಲ್ಲ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬೆಳಗ್ಗೆ 5.30ರ ಹೊತ್ತಿನಲ್ಲಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಯ್ತು. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ, ಗೋದಾಮು ಒಳಪ್ರವೇಶಿಸಿದಾಗ ಏಳು ಕಾರ್ಮಿಕರು ಉಸಿರುಗಟ್ಟಿ ಮಲಗಿದ್ದಲ್ಲೇ ಶವವಾಗಿದ್ದರು ಅಂತ ಸ್ಥಳೀಯರು ತಿಳಿಸಿದ್ದಾರೆ.

ಶ್ರೀಭೈರವೇಶ್ವರ ಟಿಂಬರ್ ಯಾರ್ಡ್ ಬಳಿ ಇರುವ ಈ ಗೋದಾಮಿಗೆ ಬೆಂಕಿ ತಗುಲಿದ್ದು ಹೇಗೆ ಎಂಬುದು ಇನ್ನೂ ತಿಳಿದುಬಂದಿಲ್ಲ.... ಗೋದಾಮಿನಲ್ಲಿ ಏಳು ಕಾರ್ಮಿಕರಿದ್ದರೆನ್ನಲಾಗಿದ್ದು, ಆರು ಜನರ ಶವ ಮಾತ್ರ ಸಿಕ್ಕಿದೆ. ಮೃತರೆಲ್ಲರೂ ಸುಲ್ತಾನ್ ಪಾಳ್ಯದ ನಿವಾಸಿಗಳಾಗಿದ್ದು, ತಾಲಿಬ್, ಸರ್ಫರಾಜ್, ನೂರ್ ಹಸನ್, ಶೋಯೆಬ್, ಖಾಜಿ ಪಾಷಾ ಮತ್ತು ಉಸ್ಮಾನ್ ಎಂದು ಗುರುತಿಸಲಾಗಿದೆ. ನದೀಮ್ ಎನ್ನುವ ಮತ್ತೊಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಧಾವಿಸಿರುವ ರಾಮನಗರ ಪೊಲೀಸರು ಗೋದಾಮಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ರಾಮನಗರ ಎಸ್ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.....

 

 

 

Add comment
 

More items in this section

ARCHIVED ARTICLES