FacebookTwitter

ಚುನಾವಣೆ ಬಗ್ಗೆ ಉಪ್ಪಿ ಕಿವಿಮಾತು

    User Rating:  / 0

ಬೆಂಗಳೂರು(ಮಾ.25): ಅಯ್ಯೋ, ರಾಜಕೀಯ ಕಚಡ ಆಗ್ಬಿಟ್ಟಿದೆಯಪ್ಪಾ... ಆ ಹೊಲಸಿಗೆ ನಾನ್ಯಾಕೆ ಕೈಹಾಕ್ಲಿ... ನಾನ್ ವೋಟ್ ಹಾಕಲ್ಲ ಸಾರ್.... ಎಲೆಕ್ಷನ್ನಿಗೆ ನಿಂತವರು ಎಲ್ರೂ ಕಳ್ಳರೇ... ಯಾರಿಗೆ ವೋಟ್ ಹಾಕಿ ಏನ್ ಪ್ರಯೋಜನ... ಅಂತ ಹೇಳುವವರ ಪೈಕಿ ನೀವೂ ಒಬ್ಬರಾ? ಹಾಗಾದರೆ, ರಿಯಲ್ ಸ್ಟಾರ್ ಉಪ್ಪಿಯ ಚಾಟಿ ಏಟು ನಿಮಗೆ ಶತಃಸಿದ್ಧ... ಸುವರ್ಣನ್ಯೂಸ್ ವಾಹಿನಿಯಲ್ಲಿ ಉಪೇಂದ್ರರ ರಾಜಕೀಯ ಮಾತುಗಳ ಚಾಟಿ ಏಟು ಅನುಭವಿಸಲು ಸಿದ್ಧರಾಗಿ....

ತಮ್ಮದೇ ರಾಜಕೀಯ ಚಿಂತನೆಗಳನ್ನ ಹೊಂದಿರುವ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ನಮ್ಮ ರಾಜ್ಯದ ಮತದಾರರಿಗೆ ಕೆಲ ಕಿವಿ ಮಾತು ಹೇಳಲಿದ್ದಾರೆ. ವಿಧಾನಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ ಸುವರ್ಣನ್ಯೂಸ್ ವಾಹಿನಿಯ ಔದ್ಯಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಅಭಿಯಾನಕ್ಕೆ ಉಪೇಂದ್ರ ಕೈಜೋಡಿಸಲಿದ್ದಾರೆ.

ನಮ್ಮ ವಾಹಿನಿ ಹೊರತರಲಿರುವ ಪ್ರೋಮೋಗಳಲ್ಲಿ ಉಪ್ಪಿ ಕಾಣಿಸಿಕೊಳ್ಳಲಿದ್ದಾರೆ. ಮತದಾನದ ಮಹತ್ವದ ಬಗ್ಗೆ ರಿಯಲ್ ಸ್ಟಾರ್ ಅವರ ಸಂದೇಶಗಳಿರುವ ಮೂರು ಪ್ರೋಮೋಗಳು ಮುಂದಿನ ವಾರ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಲಿದೆ.

 

 

 

Add comment
 

More items in this section

ARCHIVED ARTICLES