FacebookTwitter

ಹೊಸ ಕಾಂಡೋಮ್ ಬಗ್ಗೆ ಹೊಸ ಐಡಿಯಾ ಇದ್ರೆ ಹೇಳಿ...

    User Rating:  / 0

* ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಆಕರ್ಷಕ ಪ್ರಸ್ತಾವನೆ
* ಆರಂಭದಲ್ಲೇ ಸಿಗುತ್ತೆ 54.33 ಲಕ್ಷ ನೆರವು

ಹೂಸ್ಟನ್: ಮುಂದಿನ ತಲೆಮಾರಿನ ಕಾಂಡೋಮ್ ಹೇಗಿರಬೇಕು ಎನ್ನುವ ಕುರಿತು ನಿಮ್ಮಲ್ಲೇನಾದರೂ ಐಡಿಯಾ ಇದೆಯಾ?

ಒಂದು ವೇಳೆ ಇದ್ದರೆ  Grandchallengers.orgಗೆ ತಿಳಿಸಿ. 543 ಲಕ್ಷ ನಿಮ್ಮದಾಗಬಹುದು.  ಹೌದು. ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಷನ್ ಇಂಥದ್ದೊಂದು ಆಕರ್ಷಕ ಪ್ರಸ್ತಾಪ ಜಗತ್ತಿನ ಮುಂದಿಟ್ಟಿದೆ. ಒಂದು ವೇಳೆ ನಿಮ್ಮ ಐಡಿಯಾ ಫೌಂಡೇಷನ್‌ಗೆ ಇಷ್ಟವಾದರೆ ಈ ರೀತಿಯ ಕಾಂಡೋಮ್ ಉತ್ಪಾದನೆಗೆ ಆರಂಭಿಕವಾಗಿ 54.33 ಲಕ್ಷ ನೆರವು ನೀಡಲಿದೆ. ನಂತರ 543 ಲಕ್ಷದ ವರೆಗೆ ಅನುದಾನವನ್ನು ಫೌಂಡೇಷನ್ ನೀಡುತ್ತದೆ. ಒಂದು ವೇಳೆ ಇದೇನಾದರೂ ಯಶಸ್ವಿಯಾದರೆ ಜಗತ್ತಿನ ಕೋಟ್ಯಂತರ ವ್ಯಕ್ತಿಗಳ ಜೀವನಮಟ್ಟ ಸುಧಾರಣೆ ಕಾಣಲಿದೆ ಎಂದು ಫೌಂಡೇಷನ್‌ನ ಕ್ರಿಸ್ ವಿಲ್ಸನ್ ಅಭಿಪ್ರಾಯಪಡುತ್ತಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಇಂದ್ರಿಯ ಸುಖ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಪುರುಷರು ಕಾಂಡೋಮ್ ಬಳಕೆಗೆ ಹಿಂದೇಟು ಹಾಕುತ್ತಾರೆ. ಹೊಸ ತಲೆಮಾರಿನ ಕಾಂಡೋಮ್ ಈ ಸಮಸ್ಯೆಗೆ ಕಡಿವಾಣ ಹಾಕಲು ಯಶಸ್ವಿಯಾಗಬಹುದು ಎಂಬುದು ಫೌಂಡೇಷನ್‌ನ ನಿರೀಕ್ಷೆ.

ಇದೇ ವೇಳೆ, ಕಡಿಮೆ ಬೆಲೆಯ ಮತ್ತು ಸರಳವಾಗಿ ಧರಿಸಬಹುದಾದ ಮಹಿಳಾ ಕಾಂಡೋಮ್‌ಗಳು ಬೇಡದ ಗರ್ಭ ಹಾಗೂ ಲೈಂಗಿಕ ರೋಗಗಳಿಗೆ ಕಡಿವಾಣ ಹಾಕಬಹುದು ಎಂದೂ ಫೌಂಡೇಷನ್ ಅಭಿಪ್ರಾಯಪಟ್ಟಿದೆ.

 

 

 

Add comment




 

More items in this section

ARCHIVED ARTICLES