FacebookTwitter

ಮೋದಿ ರಾಜ್ಯದಲ್ಲಿ ನೀರಿಗಿಂತ ಬೀರೇ ಚೀಪ್ ಅಂತೆ!

    User Rating:  / 0

ರಾಜಕೋಟ್(ಮಾ.25): ನರೇಂದ್ರ ಮೋದಿಯ ಆಡಳಿತ ಮೋಡಿ ಬಗ್ಗೆಯೇ ಹೆಚ್ಚೆಚ್ಚು ಕೇಳಿಬರುತ್ತಿರುವ ಸದ್ದಿನ ನಡುವೆ ವಿರೋಧಿಗಳ ಧ್ವನಿಯೂ ಜೋರಾಗುತ್ತಿದೆ. ಗುಜರಾತಿನಲ್ಲಿ ನೀರಿನ ವ್ಯವಸ್ಥೆ ಹದಗೆಟ್ಟಿದೆ ಎಂದು ಆ ರಾಜ್ಯದ ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆ.

ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯಲ್ಲಿ ಗುಜರಾತನ್ನ ಕಡೆಗಣಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ನೀರು ಬಲು ದುಬಾರಿಯಾಗಿದ್ದು, ನೀರಿಗಿಂತ ಸಾರಾಯಿಯೇ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ವಿರೋಧಪಕ್ಷಗಳು ವ್ಯಂಗ್ಯವಾಡಿವೆ....

ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಜನರು ನೀರಿಗಾಗಿ ಹಾಹಾಕಾರ ನಡೆಸಿದ್ದಾರೆ. ನೀರು ಸಿಗುವುದೇ ಕಷ್ಟವಾಗಿದೆ. ಆದರೆ, ಹೆಂಡ ಮಾತ್ರ ಯಾವಾಗಬೇಕಾದರೂ ಎಷ್ಟು ಬೇಕಾದರೂ ದೊರಕುತ್ತದೆ. ನೀರಿಗಿಂತ ಕಡಿಮೆ ಬೆಲೆಯಲ್ಲೇ ಹೆಂಡ ಸಿಗುತ್ತದೆ ಎಂದು ಗುಜರಾತಿನ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋಧವಾಡಿಯಾ ವಿಷಾದಿಸಿದ್ದಾರೆ....

ಮೋದಿಯನ್ನು ಇನ್ನಷ್ಟು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡರು, ಗುಜರಾತಿನ ಬರಪೀಡಿತ ಪ್ರದೇಶಗಳಿಗಾಗಿ ಕೇಂದ್ರ ಸರ್ಕಾರ ನೀಡಿದ್ದ 1500 ಕೋಟಿ ರೂಪಾಯಿಯನ್ನು ಮೋದಿ ತಮ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ..

ಮೋದಿಯ ಅಭಿವೃದ್ಧಿ ಮಂತ್ರವನ್ನು ತಳ್ಳಿಹಾಕಿದ ಮೋಧವಾಡಿಯಾ, ಜನರಿಗೆ ಮೋದಿ ಮಂಕುಬೂದಿ ಎರಚುವ ಪ್ರಯತ್ನವದು ಎಂದು ಟೀಕಿಸಿದ್ದಾರೆ...

 

 

 

Add comment
 

More items in this section

ARCHIVED ARTICLES