FacebookTwitter

ಸರ್ಕಾರದ ಅನುದಾನ ಹಿಂದಿರುಗಿಸಿದ ಬೇಲಿಮಠ

    User Rating:  / 0

ಬೆಂಗಳೂರು: ಸರ್ಕಾರ ತಮ್ಮ ಮಠಕ್ಕೆ ನೀಡಿದ್ದ ಅನುದಾನವನ್ನು ಬೇಲಿಮಠ ಹಿಂದಿರುಗಿಸಲು ನಿರ್ಧರಿಸಿದೆ. ಸರ್ಕಾರದ ಅನುದಾನ ತಮ್ಮ ಮಠಕ್ಕೆ ಅಗತ್ಯವಿಲ್ಲ ಎಂದು ಬೇಲಿ ಮಠದ ಶ್ರೀಗಳಾದ ಶಿವರುದ್ರಸ್ವಾಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ...

ತಮ್ಮ ಮಠಕ್ಕೆ ಭಕ್ತರು ಕೊಡುವ ದೇಣಿಗೆಯೇ ಸಾಕು. ಸರ್ಕಾರದ ಸಹಾಯ ಬೇಕಾಗಿಲ್ಲ. ತಮಗೆ ನೀಡಿದ್ದ ಒಂದು ಕೋಟಿಯನ್ನು ಯಾವುದಾದರೂ ಜನಪರ ಕೆಲಸಗಳಿಗೆ ಉಪಯೋಗಿಸಿ ಎಂದು ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೇಲಿಮಠಶ್ರೀಗಳು ಹಿತವಚನ ಹೇಳಿದ್ದಾರೆನ್ನಲಾಗಿದೆ....

ಮಠಗಳಿಗೆ ಅನುದಾನ ನೀಡಬೇಕೇ ಬೇಡವೇ ಎಂಬ ಜಿಜ್ಞಾಸೆ ಇತ್ತೀಚೆಗೆ ಶುರುವಾದ ಹಿನ್ನೆಲೆಯಲ್ಲಿ ಬೇಲಿ ಮಠದ ಸ್ವಾಮೀಜಿಯ ಈ ನಿರ್ಧಾರ ಬೇರೆ ಮಠಗಳಿಗೆ ದಾರಿದೀಪವಾಗಬಹುದೇ....?

 

 

 

Add comment




 

More items in this section

ARCHIVED ARTICLES