FacebookTwitter

ಪಬ್ಲಿಕ್ ಶಾಕ್: ಪಿಪಿಎಫ್ ಬಡ್ಡಿ ದರ ಇಳಿಕೆ

    User Rating:  / 0

ಪಿಪಿಎಫ್ ಬಡ್ಡಿ ದರ 0.1 ಇಳಿಕೆ

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ ಬಡ್ಡಿ ದರವೂ ಕಡಿತ

ನವದೆಹಲಿ: ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆ ಹಾಗೂ ಪಿಪಿಎಫ್‌ನಲ್ಲಿ ಹಣ ಹೂಡಿರುವವರಿಗಿದು ಕಹಿ ಸುದ್ದಿ! ಪಿಪಿಎಫ್(ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಮತ್ತು ಸಣ್ಣ ಉಳಿತಾಯ ಯೋಜನೆ ಮೇಲಿನ ಬಡ್ಡಿ ದರವನ್ನು ಶೇ.0.1ರಷ್ಟು ಇಳಿಸಲು ಸರ್ಕಾರ ನಿರ್ಧರಿಸಿದೆ.

ಅದರಂತೆ ಪಿಪಿಎಫ್‌ನ ಬಡ್ಡಿ ದರ ಶೇ.8.8ರಿಂದ ಶೇ. 8.7ಕ್ಕೆ ಇಳಿದಿದೆ. ಈ ಹೊಸ ಬಡ್ಡಿ ದರವು ಏ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆದರೆ, ಒಂದು ವರ್ಷದ ವಾಯಿದೆಯ ಉಳಿತಾಯ ಠೇವಣಿ ಯೋಜನೆಗಳು ಮತ್ತು ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಯೋಜನೆಗಳ ಬಡ್ಡಿ ದರ ಕ್ರಮವಾಗಿ ಶೇ.4 ಮತ್ತು ಶೇ.8.2 ಆಗಿರಲಿದೆ. 5 ವರ್ಷದ ವಾಯಿದೆಯ ತಿಂಗಳ ಆದಾಯ ಯೋಜನೆ (ಎಂಐಎಸ್)ಗಳಿಗೆ ಶೇ. 8.4ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

5 ಮತ್ತು 10 ವರ್ಷದ ವಾಯಿದೆಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(ಎನ್‌ಎಸ್‌ಸಿ)ಗಳಿಗೆ ಕ್ರಮವಾಗಿ ಶೇ. 8.5 ಮತ್ತು ಶೇ.88ರಷ್ಟು ಬಡ್ಡಿ ದರ ಅನ್ವಯಿಸಲಿದೆ. ಈ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಶೇ.0.1ರಷ್ಟು ಇಳಿಸಲಾಗಿದೆ. ಈ ನೂತನ ಬಡ್ಡಿ ದರವು 2013- 14ನೇ ಸಾಲಿನ ಹಣಕಾಸು ವರ್ಷಕ್ಕೆ ಅನ್ವಯವಾಗಲಿದೆ.  ಈ ನಡುವೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ(ಎಸ್‌ಸಿಎಸ್‌ಎಸ್)ಗಳ ಮೇಲಿನ ಬಡ್ಡಿ ದರ ಶೇ.9.3ರಿಂದ ಶೇ.9.2ಕ್ಕೆ ಇಳಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ವರ್ಷ ನಿರ್ಧಾರ: ಮಾರುಕಟ್ಟೆ ದರವನ್ನು ಆಧರಿಸಿ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವನ್ನು ನಿರ್ಧರಿಸಬೇಕು. ಪರಿಷ್ಕೃತ ಬಡ್ಡಿ ದರವನ್ನು ಹಣಕಾಸು ವರ್ಷದ ಆರಂಭದಲ್ಲೇ ಘೋಷಿಸಬೇಕು ಎಂದು ಕಳೆದ ವರ್ಷ ತೀರ್ಮಾನಿಸಲಾಗಿತ್ತು. ಅದರಂತೆ ಬಡ್ಡಿ ದರ ಪರಿಷ್ಕರಿಸಲಾಗಿದೆ.

ಶ್ಯಾಮಲಾ ಗೋಪಿನಾಥ್ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಈ ಸಮಿತಿಯು ಮಾರುಕಟ್ಟೆ ದರವನ್ನು ಆಧರಿಸಿ ಸಣ್ಣಉಳಿತಾಯ ಮತ್ತು ಪಿಪಿಎಫ್ ಬಡ್ಡಿ ದರವನ್ನು ನಿರ್ಧರಿಸಬೇಕು ಎಂದು ಹೇಳಿತ್ತು.

 

 

 

 

Add comment




 

More items in this section

ARCHIVED ARTICLES