FacebookTwitter

ಟೈಗರ್ ವುಡ್ಸ್ ಮತ್ತೆ ವಿಶ್ವ ನಂಬರ್ ಒನ್

    User Rating:  / 0

ಓರ್ಲಾಂಡೋ, ಫ್ಲೋರಿಡಾ: ಖಾಸಗಿ ಬದುಕಿನ ದುರ್ಘಟನೆಗಳ ಕಾರಣದಿಂದ ಕಂಗೆಟ್ಟು ವೃತ್ತಿಜೀವನದಲ್ಲೂ ಮಂಕಾಗಿಬಿಟ್ಟಿದ್ದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಮತ್ತೆ ಎದೆಸೆಟೆದು ನಿಂತಿದ್ದಾರೆ. ಹೆಚ್ಚೂಕಡಿಮೆ ಎರಡೂವರೆ ವರ್ಷಗಳ ನಂತರ ವುಡ್ಸ್ ಮತ್ತೆ ವಿಶ್ವದ ನಂಬರ್ ಒನ್ ಗಾಲ್ಫ್ ಆಟಗಾರನೆನಿಸಿದ್ದಾರೆ... ಆರ್ನಾಲ್ಡ್ ಪಾಮರ್ ಗಾಲ್ಫ್ ಟೂರ್ನಿ ಜಯಿಸುವ ಮೂಲಕ ವುಡ್ಸ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ...

2010ಕ್ಕೆ ಮುಂಚೆ ಟೈಗರ್ ವುಡ್ಸ್ ಅವರಿಗೆ ಸರಿಸಾಟಿಯಾದ ಬೇರೊಬ್ಬ ಆಟಗಾರನಿರಲಿಲ್ಲ. ಹಲವು ವರ್ಷಗಳ ಕಾಲ ಅವರ ನಂಬರ್ ಒನ್ ಸ್ಥಾನ ಅಬಾಧಿತವಾಗಿತ್ತು... 2010ರಲ್ಲಿ ಅವರ ಖಾಸಗಿ ಜೀವನದಲ್ಲಿ ಅಲ್ಲೋಲಕಲ್ಲೋಸ ಉಂಟಾಯಿತು. ವೇಶ್ಯೆಯರೊಂದಿಗೆ ಮತ್ತು ಪರಸ್ತ್ರೀಗಳೊಂದಿಗೆ ಟೈಗರ್ ವುಡ್ಸ್ ಲೈಂಗಿಕ ಸಂಬಂಧ ಹೊಂದಿದ ವಿಷಯ ಬಹಿರಂಗವಾಗಿ ಆತನ ಹೆಂಡತಿ ವಿಚ್ಛೇದನ ನೀಡಿದ್ದಳು. ಇದೇ ನೋವೂ ಟೈಗರ್ ವುಡ್ಸ್ ಅವರ ಆಟದ ಮೇಲೆ ಪರಿಣಾಮ ಬೀರಿತ್ತು... ಕೆಲ ಕಾಲ ಗಾಲ್ಫ್ ಕ್ರೀಡೆಯಿಂದ ದೂರ ಉಳಿದ ವುಡ್ಸ್ ತಮ್ಮ ಚಾಂಪಿಯನ್ ಪಟ್ಟ ಕಳೆದುಕೊಂಡಿದ್ದರು. ಕ್ರೀಡೆಗೆ ಮರಳಿಬಂದರೂ ತಮ್ಮ ಹಿಂದಿನ ಲಯ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ... ಅವರ ರ್ಯಾಂಕಿಂಗ್ 58ನೇ ಸ್ಥಾನದವರೆಗೂ ಕುಸಿದಿತ್ತು....

ಇತ್ತೀಚಿನ ಕೆಲ ದಿನಗಳಿಂದ ಮತ್ತೆ ಲಯ ಕಂಡುಕೊಂಡಿರುವ ಟೈಗರ್ ವುಡ್ಸ್ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ತಮ್ಮ ಹಿಂದಿನ ಮ್ಯಾಜಿಕ್ ಅವರ ಕೈಹಿಡಿದಿರುವಂತೆ ಕಾಣುತ್ತಿದೆ... ಸತತ ಪರಿಶ್ರಮ, ಗಟ್ಟಿಮನಸು, ಅಚಲ ವಿಶ್ವಾಸ ಇವೆಲ್ಲವೂ ವುಡ್ಸ್ ಅವರ ಕೈಹಿಡಿದಿವೆ....

ಇನ್ನು, ಈ ಗಾಲ್ಫ್ ಮಾಂತ್ರಿಕನ ಪ್ರಭಾವ ಇನ್ನೆಷ್ಟು ವರ್ಷ ಮುಂದುವರಿಯುತ್ತದೋ ಕಾದು ನೋಡಬೇಕು....

 

 

 

Add comment
 

More items in this section

ARCHIVED ARTICLES