FacebookTwitter

ಒಂದೇ ಚಪ್ಪರದಲ್ಲಿ ಇಬ್ಬರನ್ನು ಮದುವೆಯಾದ ಭೂಪ

    User Rating:  / 1

ಹಾಸನ(ಮಾ.26): ಅಕ್ಕ ಮತ್ತು ತಂಗಿ ಇಬ್ಬರನ್ನು ಪ್ರೀತಿಸುತ್ತಿದ್ದ ಪ್ರೇಮಿಯೊಬ್ಬ ಒಂದೇ ಚಪ್ಪರದಲ್ಲಿ ಇಬ್ಬರಿಗೂ ತಾಳಿ ಕಟ್ಟಿದ್ದಾನೆ. ಈ ವಿಚಿತ್ರ ಮದುವೆ ನಡೆದಿದ್ದು ಬೇಲೂರಿನ ಘಟ್ಟಹಳ್ಳಿಯಲ್ಲಿ. ಗೋಣಿಸೋಮನಹಳ್ಳಿಯ ಜ್ಯೋತಿ ಮತ್ತು ರೇಣುಕಾ ಇಬ್ಬರೂ ಒಬ್ಬನನ್ನೇ ಮದುವೆಯಾದ ಸೋದರಿಯರು..

ಘಟ್ಟಹಳ್ಳಿಯ ರಂಗಸ್ವಾಮಿ ಅಕ್ಕ, ತಂಗಿ ಇಬ್ಬರನ್ನೂ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ವಿಷಯ ಇಬ್ಬರು ಸೋದರಿಯರಿಗೂ ಗೊತ್ತಿತ್ತು.. ಅವರಿಬ್ಬರೂ ಇವನನ್ನೇ ಮದುವೆಯಾಗ್ತೀವಿ ಅಂತ ಪಟ್ಟು ಹಿಡಿದಿದ್ದರು. ಹೀಗಾಗಿ ಹಿರಿಯರ ವಿರೋಧದ ನಡುವೆಯೂ ಮದುವೆ ಕಾರ್ಯ ಮುಗಿದುಹೋಗಿದೆ...

ಎರಡು ಮದುವೆಯಾಗುವುದು ಕಾನೂನಿಗೆ ವಿರುದ್ಧವಾದ್ದರಿಂದ ರಂಗಸ್ವಾಮಿ ಪೊಲೀಸರ ಗಮನಕ್ಕೆ ಬಾರದಂತೆ ಮದುವೆ ಮಾಡಿಕೊಂಡಿದ್ದಾನೆ...

ಮದುವೆ ವೇಳೆ ಮೊದಲು ತಾಳಿ ಕಟ್ಟಿಸಿಕೊಂಡಿದ್ದು ಅಕ್ಕ. ಆ ವೇಳೆ ಅಕ್ಕಳಿಗೆ ಹರಿಸದ್ದು ಆಕೆಯ ತಂಗಿ.... ಹೊಂದಾಣಿಕೆಯಿಂದಲೇ ಇಬ್ಬರೂ ದಾಂಪತ್ಯಕ್ಕೆ ಅಡಿ ಇಟ್ಟಿದ್ದು ವಿಶೇಷ..

 

 

 

Add comment




 

More items in this section

ARCHIVED ARTICLES