FacebookTwitter

ಚಲಿಸುವ ಕಾರಿನಲ್ಲಿ ಯುವತಿಯ ಗ್ಯಾಂಗ್ ರೇಪ್

    User Rating:  / 1

ಅಮೃತಸರ(ಮಾ.26): ದೆಹಲಿ ಗ್ಯಾಂಗ್ ರೇಪ್ ದುರ್ಘಟನೆ ನೆನಪಿಸುವಂಥ ಮತ್ತೊಂದು ಹೇಯ ಕೃತ್ಯ ವರದಿಯಾಗಿದೆ. ಚಲಿಸುವ ಕಾರಿನಲ್ಲಿ ನಾಲ್ಕು ಜನರ ಗುಂಪೊಂದು 20 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ನಿನ್ನೆ ರಾತ್ರಿ ನಾಲ್ಕು ಗಂಟೆಗಳ ಕಾಲ ಸತತವಾಗಿ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇಷ್ಟೂ ಹೊತ್ತು ಕಾರು ನಗರದ ರಸ್ತೆಗಳಲ್ಲಿ ಸಂಚರಿಸುತ್ತಲೇ ಇದ್ದರೂ ಯಾರಿಗೂ ಗೊತ್ತಾಗಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಕಾರಿನಲ್ಲಿದ್ದ ದುರುಳರು ತಮ್ಮ ಕೃತ್ಯ ಬಹಿರಂಗವಾಗಬಾರದೆಂದು ಜೋರಾಗಿ ಲೌಡ್ ಸ್ಪೀಕರ್ ಹಾಕಿದ್ದರೆನ್ನಲಾಗಿದೆ.

ಗ್ಯಾಂಗ್ ರೇಪ್ ಮಾಡಿದ ಬಳಿಕ ಕಾಮುಕರು ಆ ಯುವತಿಯನ್ನು ಕಂಟೋನ್ಮೆಂಟ್ ಪ್ರದೇಶದ ಬಳಿ ಕಾರಿನಿಂದ ಹೊರಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಸ್ ನಿಲ್ದಾಣದಿಂದ ಕಿಡ್ನ್ಯಾಪ್
ಇಪ್ಪತ್ತು ವರ್ಷದ ಯುವತಿ ತನ್ನ ಆಫೀಸ್ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಬಸ್ ನಿಲ್ದಾಣವೊಂದರ ಬಳಿ ನಿಂತಿದ್ದಾಗ ಆಕೆಯ ಅಪಹರಣವಾಗಿದೆ. ಕಾರೊಂದರಲ್ಲಿ ಬಂದ ಇಬ್ಬರು ಆಕೆಯನ್ನು ಬಲವಂತವಾಗಿ ಕಾರೊಳಗೆ ಕೂಡಿಹಾಕಿಕೊಂಡಿದ್ದಾರೆ. ಹಾಗೆಯೇ ಕಾರು ಸ್ವಲ್ಪ ಮುಂದೆ ಹೋದಾಗ ಮತ್ತಿಬ್ಬರು ವ್ಯಕ್ತಿಗಳು ಆ ಕಾರನ್ನು ಹತ್ತಿಕೊಂಡಿದ್ದಾರೆ. ಆನಂತರ ಆ ನಾಲ್ವರೂ ಒಬ್ಬರಾದ ಮೇಲೊಬ್ಬರಂತೆ ಹುಡುಗಿಯನ್ನು ರೇಪ್ ಮಾಡಿದ್ದಾರೆ...

ಯುವತಿಯ ಪರಿಚಯಸ್ಥರೇ?
ಯುವತಿಗೆ ಅತ್ಯಾಚಾರ ನಡೆಯುವ ಮೊದಲು ಮತ್ತು ನಂತರ ಆಕೆಯ ಮೊಬೈಲಿಗೆ ನಿರ್ದಿಷ್ಟ ನಂಬರುಗಳಿಂದ ಸಾಕಷ್ಟು ಕರೆ ಬಂದಿರುವ ದಾಖಲೆ ಪೊಲೀಸರಿಗೆ ಸಿಕ್ಕಿದೆ. ಅತ್ಯಾಚಾರಿಗಳು ಆ ಹುಡುಗಿಗೆ ಪರಿಚಯಸ್ಥರೇ ಇದ್ದಿರಬಹುದೆಂಬುದು ಪೊಲೀಸರ ಸಂಶಯ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರು ದುಷ್ಕರ್ಮಿಗಳನ್ನ ಗುರುತಿಸಿದ್ದು ಅವರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ....

 

 

 

Add comment
 

More items in this section

ARCHIVED ARTICLES