FacebookTwitter

ಮತ್ತೆ ಬಾಂಬ್ ಸಿಡಿಸಿದ ರೇಣುಕಾಚಾರ್ಯ

    User Rating:  / 1

ಹೊನ್ನಾಳಿ(ಮಾ.26): ಅಬಕಾರಿ ಸಚಿವ ರೇಣುಕಾಚಾರ್ಯ ಮೂರು ಬಾಂಬ್ ಸಿಡಿಸಿದ್ದಾರೆ. ಹಣಕ್ಕಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡರು ಕಣ್ಣೀರಿಟ್ಟಿದ್ದರೆಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ... ಅಲ್ಲದೆ, ತಾನು ಇನ್ನೆರಡು ದಿನದಲ್ಲಿ ಬಿಜೆಪಿ ತೊರೆಯುವುದಾಗಿಯೂ ತಿಳಿಸಿದ್ದಾರೆ. ಹಾಗೆಯೇ, ಮೂವರು ಬಿಜೆಪಿ ಮುಖಂಡರು ಭ್ರಷ್ಟರೆಂಬ ಬಗ್ಗೆ ತನ್ನ ಬಳಿ ದಾಖಲೆಗಳಿರುವುದಾಗಿಯೂ ಹೇಳಿಕೆ ನೀಡಿದ್ದಾರೆ....

ಡಿವಿಎಸ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದುಡ್ಡಿಗಾಗಿ ಹಪಹಪಿಸುತ್ತಿದ್ದರೆಂಬುದು ರೇಣು ಆರೋಪ. ಅಲ್ಲದೇ, ದುಡ್ಡಿಗಾಗಿ ಕಣ್ಣೀರಿಡುತ್ತಿದ್ದ ಸದಾನಂದಗೌಡರಿಗೆ ತಾನೇ ಹಣ ನೀಡಿರುವುದಾಗಿ ಅಬಕಾರಿ ಸಚಿವರು ತಿಳಿಸಿದ್ದಾರೆ. ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, ತನ್ನ ಬಳಿ ಸದಾನಂದಗೌಡರಿಗೆ ದುಡ್ಡು ಕೊಟ್ಟಿದ್ದಕ್ಕೆ ದಾಖಲೆ ಕೂಡ ಇದೆ, ಇನ್ನೆರಡು ದಿನದಲ್ಲಿ ಬಹಿರಂಗ ಮಾಡುತ್ತೇನೆ ಎಂದು ಹೇಳಿದ್ದಾರೆ... ಅಷ್ಟೇ ಅಲ್ಲ, ಡಿವಿಎಸ್ ಅವರು ತಮ್ಮ ಬಳಿಯಷ್ಟೇ ಅಲ್ಲ, ಸಬ್ ರಿಜಿಸ್ಟ್ರಾರುಗಳ ಬಳಿಯೂ ಹಣ ಪಡೆಯುವ ಮಟ್ಟಕ್ಕೆ ಹೋಗಿದ್ದರು ಎಂದು ಅವರು ಟೀಕಿಸಿದ್ದಾರೆ.

ಇನ್ನು, ಬಿಜೆಪಿಯನ್ನು ತೊರೆಯುವ ವಿಷಯ ಪ್ರಸ್ತಾಪಿಸಿದ ರೇಣುಕಾಚಾರ್ಯ ಅದನ್ನೂ ಎರಡು ದಿನದಲ್ಲಿ ಮಾಡುತ್ತೇನೆಂಬ ಭರವಸೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದೊಳಗಿನ ವಿದ್ಯಮಾನಗಳಿಂದಾಗಿ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂಬುದು ರೇಣು ಕಾರಣ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ ಒಂದು ರೀತಿ ರಬ್ಬರ್ ಸ್ಟಾಂಪಿ ಇದ್ದಂತೆ ಎಂದು ಟೀಕಿಸಿದ ರೇಣುಕಾಚಾರ್ಯ, ಬಿಜೆಪಿ ಮುಖಂಡ ಅನಂತಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಂತಕುಮಾರ್ ಒಬ್ಬ ಭ್ರ್ಟ ವ್ಯಕ್ತಿ ಎಂದು ಅವರು ನೇರವಾಗಿ ಆರೋಪಿಸಿದ್ಧಾರೆ.... ಅನಂತಕುಮಾರ್ ಅಷ್ಟೇ ಅಲ್ಲ, ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೂಡ ಭ್ರಷ್ಟರು ಎಂದು ಆರೋಪಿಸಿದ ಅವರು, ಆ ಬಗ್ಗೆಯೂ ತಮ್ಮ ಬಳಿ ಪುರಾವೆಗಳಿವೆ ಎಂದಿದ್ದಾರೆ....

 

 

 

Add comment
Comments   

 
0 #2 Chetan 2013-03-26 17:41
Renukacharya .. because of U (Shakuni) BJP is facing this situation.. You are Shakuni Mama... Thu Ninage nachike agaa beku.... !!!! Shukuni.. ginta Kade Ninu
Quote
 
 
0 #1 Chetan 2013-03-26 17:39
Renukacharya .. because BJP is facing this situation.. You are Shakuni Mama... Thu Ninage nachike agaa beku.... !!!! Shukuni.. ginta Kade Ninu
Quote
 

 

More items in this section

ARCHIVED ARTICLES