FacebookTwitter

ಸೆಂಟ್ರಲ್ ಆಫ್ರಿಕಾದಲ್ಲಿ ಫ್ರೆಂಚ್ ಸೇನಾಪಡೆಯ ಗುಂಡೇಟಿಗೆ ಇಬ್ಬರು ಭಾರತೀಯರು ಸಾವು

    User Rating:  / 0
ಗುಂಡೇಟು

ದರ್ಬಾನ್: ಇಬ್ಬರು ಅಮಾಯಕ ಭಾರತೀಯ ಪ್ರಜೆಗಳು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶದ ಬಂಗುಯ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಫ್ರೆಂಚ್ ಸೇನಾ ಪಡೆಯ ಗುಂಡಿಗೆ ಹತರಾಗಿದ್ದಾರೆ.

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನ ಬಂಗುಯ್ ಪ್ರದೇಶ ಪ್ರತ್ಯೇಕತಾವಾದಿ ಬಂಡುಕೋರರ ಹಿಡಿತದಲ್ಲಿದ್ದು, ಈ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಗಾಗಿ ಅದರಲ್ಲೂ ವಿಶೇಷವಾಗಿ ವಿಮಾನ ನಿಲ್ದಾಣದ ಉಸ್ತುವಾರಿ ಹೊಣೆಯನ್ನು ಫ್ರೆಂಚ್ ಸೇನಾಪಡೆ ವಹಿಸಿಕೊಂಡಿದೆ.

ಈ ಸಂದರ್ಭ ಅಚಾನಕ್ಕಾಗಿ ಕಾಣಿಸಿಕೊಂಡಿದ್ದ ಗುಂಪನ್ನು ಬಂಡುಕೋರರು ಅಥವಾ ದಾಳಿಕೋರರಿರಬಹುದೆಂದು ಅಂದಾಜಿಸಿದ್ದ ಫ್ರೆಂಚ್ ಭದ್ರತಾ ಸಿಬ್ಬಂಧಿ ಅನುಮಾನದಿಂದ ಗುಂಡಿನ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಇಬ್ಬರು ಭಾರತೀಯರು ಸಾವನ್ನಪ್ಪಿದ್ದರೆ ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಫ್ರಾನ್ಸ್ ಅಧ್ಯಕ್ಷ ಫ್ರಾನ್ಕೊಯಿಸ್ ಹೊಲ್ಲಾಂಡ್, ಘಟನೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ.

 

 

 

Add comment
 

More items in this section

ARCHIVED ARTICLES