FacebookTwitter

ಹೆಲಿಕಾಪ್ಟರ್ ಹಗರಣದಲ್ಲಿ ಯಾರೋ ಹಣ ಮಾಡಿದ್ದಾರೆ ಎಂದ ಎ.ಕೆ.ಆಂಟನಿ

    User Rating:  / 0
ಎ.ಕೆ.ಆಂಟನಿ

ತಿರುವನಂತಪುರಂ (ಕೇರಳ): ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭಾರೀ ಮೊತ್ತದ ಹಗರಣದಲ್ಲಿ ಯಾರೋ ಹಣ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ರಕ್ಷಣಾ ಸಚಿವ ಎ.ಕೆ.ಆಂಟನಿ, ಹಗರಣ ಸಂಬಂಧ ಈಗಾಗಲೇ ಸಮಗ್ರ ತನಿಖೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಅಪರಾಧಿ ಸ್ಥಾನಕ್ಕೆ ಗುರಿಯಾಗುವ ಯಾವುದೇ ಪ್ರಭಾವೀ ವ್ಯಕ್ತಿಯಾದರೂ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿರುವ ಅಕ್ರಮ ಹಣಕಾಸು ವರ್ಗಾವಣೆ ಸಂಬಂಧ ಭಾರತೀಯ ತನಿಖಾ ಮಂಡಳಿ ಸಮಗ್ರ ತನಿಖೆ ನಡೆಸುತ್ತಿದ್ದು, ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದರು.

ಫ್ಲ್ಯಾಶ್ ಬ್ಯಾಕ್....

ಇಟಲಿ ಸರ್ಕಾರಿ ಒಡೆತನದ ವೈಮಾನಿಕ ಕೈಗಾರಿಕೆ ಫಿನ್ ಮೆಕಾನಿಕಾ ಕಂಪನಿಯಿಂದ ಭಾರತೀಯ ವಾಯು ಸೇನೆಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಎಂಬ ಹನ್ನೆರೆಡು ವಿವಿಐಪಿ ಹೆಲಿಕಾಪ್ಟರ್ ಖರೀದಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ, ಆಮದು ಪ್ರಕ್ರಿಯೆಗೆ ಚಾಲನೆ ನೀಡಲಾಗಿ ಇದುವರೆಗೆ ಆರು ಹೆಲಿಕಾಪ್ಟರ್ ಭಾರತಕ್ಕೆ ಪೂರೈಕೆಯಾಗಿದೆ.

ಸದರಿ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯ ಗುತ್ತಿಗೆ ವ್ಯವಹಾರವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಇಟಲಿ ಕಂಪನಿ ಫಿನ್ ಮೆಕಾನಿಕಾ ಮಧ್ಯವರ್ತಿಗಳನ್ನು ಬಳಸಿಕೊಂಡಿದ್ದು, ಈ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ಬಹುಕೋಟಿ ಹಣ ಕೈ ಕೈ ವರ್ಗಾವಣೆಯಾಗಿದ್ದು ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

 

 

 

Add comment
 

More items in this section

ARCHIVED ARTICLES