FacebookTwitter

ಕರಿನಾ, ಪ್ರಿಯಾಂಕರನ್ನು ಮೀರಿಸಿ ನಾಲ್ಕೂವರೆ ಕೋಟಿ ತೆರಿಗೆ ಪಾವತಿಸಿದ ಕತ್ರೀನಾ ಕೈಫ್!

    User Rating:  / 0
ಕತ್ರಿನಾ ಕೈಫ್

ನವದೆಹಲಿ: ಬಾಲಿವುಡ್ಡಿನ ಚೆಂದುಳ್ಳಿ ಚೆಲುವೆ ಕತ್ರಿನಾ ಕೈಫ್ ಕೇವಲ ಸೌಂದರ್ಯದಲ್ಲಿ ಮಾತ್ರ ಮುಂಚೂಣಿಯಲ್ಲರೀ, ಬದಲಾಗಿ ನಿಯತ್ತಾಗಿ ತೆರಿಗೆ ಪಾವತಿಸುವುದರಲ್ಲೂ ಮುಂಚೂಣಿಯಾಗಿ ಜಾಣತನ ಮೆರೆದಿದ್ದಾರೆ.

ಹಾಗಂತ ಬೇರೆ ನಟಿ ಮಣಿಯರಾಗಲೀ ಅಥವಾ ಇನ್ನಿತರ ಗಣ್ಯ ವ್ಯಕ್ತಿಗಳಾಗಲೀ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲವೆಂದಲ್ಲ. ತಾನು ಪಾವತಿಸಬೇಕಾಗಿರುವ ತೆರಿಗೆ ಹಣದ ನಿಗಧಿತ ಪ್ರಮಾಣವನ್ನು ಮುಂಚೂಣಿಯಾಗೇ ಪಾವತಿಸಿ ಇತರರಿಗೂ ಮಾದರಿಯಾಗಿದ್ದಾರೆ.

ವಿಷಯ ಇಷ್ಟೆ, ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಅವರು ನಟಿಸಿದ್ದ 2012 ರ ಜನಪ್ರೀಯ ‘ಏಕ್ತಾ ಟೈಗರ್’ ಮತ್ತು ‘ಜಬ್ ತಕ್ ಹೆ ಜಾನ್’ ಚಿತ್ರದ ಕಲೆಕ್ಷನ್ನು 100 ಕೋಟಿ ರೂಪಾಯಿಯನ್ನೂ ದಾಟಿದ ರಭಸ ನೋಡಿ ಇಡೀ ಬಾಲಿವುಡ್ಡಿಗೆ ಬಾಲಿವುಡ್ಡೇ ಬಾಯಿಗೆ ಬೆರಳಿಟ್ಟು ಹುಬ್ಬೇರಿಸಿತ್ತು. ಈ ಚಿತ್ರಗಳ ಹೆಸರಿನೊಂದಿಗೆ ಕತ್ರಿನಾ ಕೈಫ್ ಹೆಸರೂ ತೇಲಾಡುತ್ತಿತ್ತು.

ಹಿಂಗಾಗಿ ಅದೃಷ್ಟ ಮತ್ತೆ ಮತ್ತೆ ಒಲಿದು ಬರತೊಡಗಿತ್ತು. ಅದನ್ನು ಸಾಭೀತುಪಡಿಸಲು ಅಮಿರ್ ಖಾನ್ ನಟಿಸುತ್ತಿರುವ ‘ದೂಮ್ 3’ ಚಿತ್ರದ ಪ್ರಮುಖ ಪಾತ್ರ ಕತ್ರಿನಾ ಬೆನ್ನಿಗೆ ಅಂಟಿಕೊಂಡಿತ್ತು. ಅದಕ್ಕೆ ಸಂದಾಯವಾಗಬೇಕಾಗಿದ್ದ ಸಂಭಾವನೆಯಲ್ಲಿ ಬಹುಪಾಲು ಈಗಾಗಲೇ ಕತ್ರಿನಾ ಕೈ ಸೇರಿದೆ.

ಆದರೆ, ಇದೀಗ ‘ದೂಮ್ 3’ ಚಿತ್ರೀಕರಣದಲ್ಲಿ ನಿರತರಾಗಿರುವ ಕತ್ರೀನಾ, ತುಂಬಾ ಬ್ಯುಸಿಯಾಗಿರುವ ನಡುವೆಯೇ, ಮುಂಗಡವಾಗಿ ತೆರಿಗೆ ಪಾವತಿ ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಈ ಕಾರಣಕ್ಕಾಗಿಯೇ ಮುದ್ದು ಹುಡುಗಿ ಕತ್ರೀನಾರ ಲೆಕ್ಕ ವ್ಯವಹಾರ ಯಾಕೊ ಬಾಲಿವುಡ್ಡಿನ ಮುತ್ಸದ್ದಿಗಳಿಗೆ ಮಾತ್ರವಲ್ಲದೆ ಮಧ್ಯಮ ವರ್ಗದ ಶ್ರೀಸಾಮಾನ್ಯನಿಗೂ ಇಷ್ಟವಾಗಿಬಿಟ್ಟಿದೆ.

ಇಷ್ಟೇ ಹಾಗಿದ್ದರೆ ಪರವಾಗಿಲ್ಲ. ತಾನು ಖಡಕ್ಕಾಗಿ ತೆರಿಗೆ ಪಾವತಿಸುವ ಮೂಲಕ ಆಕರ್ಷಕ ಕಂಗಳ ಕರಿನಾ ಕಪೂರ್, ಪ್ರಿಯಾಂಕ ಚೋಪ್ರಾ ಮುಂತಾದ ನಟಿಯರ ಮುಂಗಡ ತೆರಿಗೆ ಪಾವತಿ ಪ್ರಮಾಣವನ್ನೂ ಮೀರಿಸಿದ್ದಾರೆ. ಇದು ಕತ್ರಿನಾ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತಂದಿದೆ.

 

 

 

Add comment
 

More items in this section

ARCHIVED ARTICLES