FacebookTwitter

ಲಂಕನ್ನರನ್ನು ಆಡಿಸಲು ಜಯಾ ವಿರೋಧ

    User Rating:  / 0
ಜಯಲಲಿತಾ

ಚೆನ್ನೈ: ಚೆನ್ನೈನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಶ್ರೀಲಂಕಾ ತಂಡಕ್ಕೆ ನೆರೆಯ ತಮಿಳು ನಾಡು ಸರ್ಕಾರ ಪ್ರವೇಶ ನಿರಾಕರಿಸಿದೆ.

ಶ್ರೀಲಂಕಾದಲ್ಲಿ ಹಲವಾರು ವರ್ಷಗಳಿಂದ ಅಮಾಯಕ ತಮಿಳರನ್ನು ಹತ್ಯೆ ಮಾಡುತ್ತಾ ಬರುತ್ತಿರುವುದು ಹಾಗೂ ತಮಿಳು ಜನಾಂಗದವರ ನರಮೇಧ ಇಂದಿಗೂ ಮುಂದುವರೆಸುತ್ತಿರುವುದು ಸಾಕ್ಷ್ಯ ಸಮೇತ ಸಾಭೀತಾಗುತ್ತಿದೆ ಎಂದು ಪ್ರತಿಪಾಧಿಸಿರುವ ಮುಖ್ಯಮಂತ್ರಿ ಜಯಲಲಿತಾ, ರಾಜ್ಯದಾದ್ಯಂತ ಶ್ರೀಲಂಕಾ ವಿರೋಧಿ ನಿಲುವು ವ್ಯಕ್ತವಾಗಿರುವುದರಿಂದಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಶ್ರೀಲಂಕಾದ ಕ್ರೀಡಾಪಟುಗಳು, ಅಂಪೈರುಗಳು, ಇನ್ನಿತರ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂಧಿಗಳಿಗೆ ಪ್ರವೇಶ ನಿರಾಕರಿಸಲು ಸಮ್ಮತಿಸುವುದಾದರೆ ಮಾತ್ರ ತಮಿಳುನಾಡಿನಲ್ಲಿ ಐಪಿಎಲ್ ಪಂದ್ಯ ನಡೆಯಲು ಅನುಮತಿ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಜಯಲಲಿತಾ, ಶ್ರೀಲಂಕಾದ ಆಟಗಾರರು ಹಾಗೂ ಸಿಬ್ಬಂಧಿಗಳಿಗೆ ತಮಿಳುನಾಡಿನಲ್ಲಿ ಪ್ರವೇಶ ನೀಡದಂತೆ ಐಪಿಎಲ್ ಪ್ರಾಯೋಜಕರಿಗೆ ಬಿಸಿಸಿಐ ಸೂಚನೆ ನೀಡುವಂತೆ ಸಲಹೆ ನೀಡಲು ಒತ್ತಾಯಿಸಿದ್ದಾರೆ.

ಶ್ರೀಲಂಕಾ ತಮಿಳರ ನರಮೇಧಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಾದ್ಯಂತ ಶ್ರೀಲಂಕಾ ವಿರೋಧಿ ಭಾವನೆ ಹೊಗೆಯಾಡುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ, ಶ್ರೀಲಂಕಾ ಮಂದಿ ಭಾಗವಹಿಸುವಿಕೆಯಲ್ಲಿ ನಡೆಯುವ ಯಾವುದೇ ಕ್ರೀಡೆಗೂ ನಿಷೇಧ ಹೇರಲಾಗಿರುವುದಾಗಿ ತಿಳಿಸಿರುವ ಅವರು, ಶ್ರೀಲಂಕಾ ನೌಕಾದಳದ ಸಿಬ್ಬಂದಿ ಭಾರತೀಯ ಮೀನುಗಾರರನ್ನು ಹತ್ಯೆ ಮಾಡುತ್ತಿರುವ ಕುರಿತು ಈಗಾಗಲೇ ಸಾಕಷ್ಟು ಬಾರಿ ಪ್ರಧಾನಿಗೆ ಪತ್ರಬರೆದಿದ್ದರೂ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

Add comment
 

More items in this section

ARCHIVED ARTICLES