FacebookTwitter

ಹೋಳಿ ಆಡುವ ಮುನ್ನ ಕೆಲ ಟಿಪ್ಸ್

    User Rating:  / 0

ದೇಶಾದ್ಯಂತ ಹೋಳಿ ಸಂಭ್ರಮ. ಬಣ್ಣಗಳ ಆಟದಲ್ಲಿ ಮೈಮರೆತು ಕಣ್ಣಗೆ, ಚರ್ಮಕ್ಕೆ ತೊಂದರೆ ತಂದುಕೊಳ್ಳಬೇಡಿ. ಹೋಳಿ ಹಬ್ಬ ಆಡುವ ಮುನ್ನ ಒಂದಷ್ಟು ಜಾಗ್ರತೆ ವಹಿಸಿ. ರಾಸಾಯನಿಕ ಬಣ್ಣ ಬಳಕೆ ಮಾಡುವ ಬದಲಾಗಿ ನೈಸರ್ಗಿಕ ಬಣ್ಣಗಳನ್ನೇ ಉಪಯೋಗಿಸಿ. ಇದು ಆರೋಗ್ಯಕ್ಕೂ ಹಿತ, ಮನಸ್ಸಿಗೂ ಮುದ...


ಆಚರಣೆ ಹೀಗಿರಲಿ...

* ನೈಸರ್ಗಿಕ ಬಣ್ಣಗಳನ್ನು ಬಳಸಿ ಆಚರಿಸಿ

* ಸಾಧ್ಯವಿದ್ದಷ್ಟು ಒಣ ಬಣ್ಣಗಳನ್ನೇ ಬಳಸಿ

* ಮುಖ, ಕೈ, ಮೈಗೆ ಕೊಬ್ಬರಿ ಎಣ್ಣೆ ಲೇಪಿಸಿ

* ಪ್ರಖರ ಬೇಸಿಗೆ ಇರುವುದರಿಂದ ಹೆಚ್ಚು ಬಣ್ಣ ಹಾಗೂ ನೀರಿನಾಟ ಬೇಡ

* ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ

* ಮದ್ಯಸೇವನೆ, ಭಂಗಿ, ಸಿಗರೇಟು, ಗಾಂಜಾ ಸೇವನೆ ಒಳ್ಳೆಯದಲ್ಲ

* ಕಣ್ಣಿನೊಳಗೆ ಬಣ್ಣ ಹೋದರೆ ಸ್ವಚ್ಛ, ತಣ್ಣೀರಿನಿಂದ ಕಣ್ಣು ತೊಳೆಯಿರಿ

* ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿ

* ಹೋಳಿ ಹಬ್ಬದಲ್ಲಿ ನಡೆಯುವ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ  ಉತ್ಸಾಹದಿಂದ ಅನಾಹುತಕ್ಕೆ ಅವಕಾಶ ಕೊಡಬೇಡಿ


ರಾಸಾಯನಿಕ ದುಷ್ಪರಿಣಾಮ

* ಹಸಿರು-ಕಾಪರ್ ಸಲ್ಫೇಟ್-ಕಣ್ಣಿನ ತೊಂದರೆ

* ನೇರಳೆ-ಕ್ರೋಮಿಯಂ ಅಯೋಡೈಡ್-ಅಸ್ತಮಾ

* ಕಪ್ಪು-ಲೆಡ್ ಆಕ್ಸೈಡ್-ಕಿಡ್ನಿ ಸಮಸ್ಯೆ

* ಕೆಂಪು-ಮರ್ಕ್ಯೂರಿಕ್ ಸಲ್ಫೇಟ್-ಚರ್ಮ ವ್ಯಾಧಿ

* ಸಿಲ್ವರ್-ಅಲ್ಯುಮಿನಿಯಂ ಬ್ರೋಮೈಡ್-ಮೈ ಕೆರೆತ, ದೇಹ ಬಾವು ಇತ್ಯಾದಿ

* ನೀಲಿ-ವಿವಿಧ ರಾಸಾಯನಿಕಗಳು-ಹಲವು ದೈಹಿಕ ತೊಂದರೆಗಳು


- ಬಸವರಾಜ ಹಿರೇಮಠ



ಬಣ್ಣಗಳಲ್ಲಿ ಬಳಸುವ ರಾಸಾಯನಿಕಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ. ಬಣ್ಣವಾಡಿದ ನಂತರ ಕೆರೆ, ಬಾವಿ ಹಾಗೂ ಕೊಳಗಳಲ್ಲಿ ಸ್ನಾನ ಮಾಡುವುದರಿಂದ ಮೈಗಂಟಿರುವ ಬಣ್ಣ ನೀರಿನಲ್ಲಿ ಕರಗಿ ಜಲಚರಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

- ಮುಕುಂದ ಮೈಗೂರ, ಪರಿಸರವಾದಿ

 

 

 

Add comment




 

More items in this section

ARCHIVED ARTICLES