FacebookTwitter

ವೀರಣ್ಣ ಮತ್ತಿಕಟ್ಟಿ ಭೂಅಕ್ರಮ ಬಯಲು

    User Rating:  / 0

ಬೆಂಗಳೂರು(ಮಾ.27): ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣ ಮತ್ತೀಕಟ್ಟಿ ವಿರುದ್ಧ ಭೂಅಕ್ರಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಮತ್ತು ಧಾರವಾಡದಲ್ಲಿ ಕಳೆದ ಎರಡು ಮೂರು ದಶಕಗಳಿಂದ ಮತ್ತಿಕಟ್ಟಿಯವರು ತಮಗೆ ಹಾಗೂ ತಮ್ಮ ಸಂಬಂಧಿಕರಿಗೆ ಒಟ್ಟು 8 ಜಿ-ಕೆಟಗರಿ ನಿವೇಶನ ಪಡೆದುಕೊಂಡಿರುವ ವಿಷಯ ಬಯಲಾಗಿದೆ. ಈ ಅಕ್ರಮ ವ್ಯವಹಾರಗಳ ದಾಖಲೆಗಳು ನಮ್ಮ ಸುವರ್ಣನ್ಯೂಸ್ ವಾಹಿನಿಗೆ ಲಭ್ಯವಾಗಿವೆ....

ವೀರಣ್ಣ ಮತ್ತಿಕಟ್ಟಿಯವರು ತಮ್ಮ ಹೆಸರಲ್ಲಿ ಮೂರು ಸೈಟುಗಳನ್ನು ಪಡೆದುಕೊಂಡಿದ್ದಾರೆ. ಅವರ ಮೂವರು ಮಕ್ಕಳು, ಒಬ್ಬ ಅಳಿಯ ಹಾಗೂ ಮತ್ತೊಬ್ಬ ಸಂಬಂಧಿಕರ ಹೆಸರಲ್ಲಿ ತಲಾ ಒಂದೊಂದು ನಿವೇಶನ ಪಡೆದುಕೊಂಡಿದ್ದಾರೆ... ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ 5 ಸೈಟುಗಳನ್ನ ಮಾಡಿಕೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಹಾಗೂ ಬಿಜೆಪಿ ಸರ್ಕಾರವಿದ್ದಾಗಲೂ ಸೈಟ್ ಪಡೆದುಕೊಂಡಿದ್ದಾರೆ...

ವೀರಣ್ಣ ಮತ್ತಿಕಟ್ಟಿಯವರ ಜಿ-ಕೆಟಗರಿ ಸೈಟ್ ದಾಖಲೆ
----------------------------
1) 1982 - ಆರ್.ಟಿ.ನಗರದ ಮಠದಹಳ್ಳಿಯಲ್ಲಿ 40/60 ಅಡಿ ನಿವೇಶನ
2) 2002 - ಕೋರಮಂಗಲದ ಮಲಪ್ರಭಾ ಬ್ಲಾಕಿನಲ್ಲಿ ಒಂದು ಸೈಟ್
3) 2003 - ಎಚ್ಎಸ್ಆರ್ ಲೇಔಟಿನ 6ನೇ ಸೆಕ್ಟರ್ನಲ್ಲಿ 40/60 ಅಡಿ ನಿವೇಶನ
4) 2003 - ಕೋರಮಂಗಲದಲ್ಲಿ ಮಗಳು ವಿದ್ಯಾ ಹೆಸರಲ್ಲಿ ಸೈಟ್
5) 2006 - ಮಗ ಅಶೋಕ್ ಹೆಸರಲ್ಲಿ ಸೈಟ್
6) 2007 - ಧಾರವಾಡದಲ್ಲಿ ಮಗ ಮಹೇಶ್ ಹೆಸರಲ್ಲಿ ಸೈಟ್
7) 2007 - ಧಾರವಾಡದಲ್ಲಿ ಸಂಬಂಧಿ ಶಾಂತಾ ಎಂಬುವವರ ಹೆಸರಲ್ಲಿ ಸೈಟ್
8) 2009 - ಕೋರಮಂಗಲದಲ್ಲಿ ಅಳಿಯ ಪ್ರವೀಣ್ ಹೆಸರಲ್ಲಿ ಸೈಟ್

ಈಗಾಗಲೇ ಒಂದು ನಿವೇಶನ ಹೊಂದಿರುವ ಯಾವುದೇ ವ್ಯಕ್ತಿ ಕೂಡ ಜಿ-ಕೆಟಗರಿ ಸೈಟನ್ನು ಪಡೆಯುವಂತಿಲ್ಲ. ಹೀಗಿರುವಾಗ, ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿಯವರ ಎಂಟೆಂಟು ಜಿ-ಕೆಟಗರಿ ಸೈಟುಗಳ ಸಂಪಾದನೆ ಕಾನೂನಿಗೆ ವಿರುದ್ಧ...

 

 

 

Add comment




 

More items in this section

ARCHIVED ARTICLES