FacebookTwitter

ಗೃಹಿಣಿ ಮೇಲೆ ಚರ್ಚ್ ಪಾದ್ರಿಯ ಅತ್ಯಾಚಾರ

    User Rating:  / 1

ಬೀದರ್(ಮಾ.27): ಚರ್ಚ್ ಪಾದ್ರಿಯೊಬ್ಬರು ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ನಿಜಾಮಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ... ಈ ಸಂಬಂಧ ಚರ್ಚಿನ ಫಾದರ್ ಪ್ರಕಾಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ...

ಗಾಂಧಿಗಂಜ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದ ಯುವತಿಯ ತಂದೆಯು, ತಮ್ಮ ಮಗಳನ್ನು ಫಾದರ್ ಪ್ರಕಾಶ್ ರೇಪ್ ಮಾಡಿದ್ದಾರೆಂದು ಆರೋಪಿಸಿದ್ದರು....

ಅತ್ಯಾಚಾರಕ್ಕೀಡಾದ ಯುವತಿಯೇ ಸುವರ್ಣನ್ಯೂಸ್ ವಾಹಿನಿಯೊಂದಿಗೆ ಮಾತನಾಡಿ, ತನಗೆ ಲೈಂಗಿಕ ಹಲ್ಲೆಯಾಗಿರುವುದನ್ನು ಸ್ಪಷ್ಟಪಡಿಸಿದ್ದಾಳೆ. ಫಾದರ್ ಪ್ರಕಾಶ್ ತನ್ನನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದರೆಂದು ಆಕೆ ಹೇಳಿಕೊಂಡಿದ್ದಾಳೆ... ಸದ್ಯ ಈ ಗೃಹಿಣಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು ಪ್ರಕಾಶ್ ಅವರನ್ನು ಬಂಧಿಸಿರುವ ಗಾಂಧಿಗಂಜ್ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ....

 

 

 

Add comment
 

More items in this section

ARCHIVED ARTICLES