FacebookTwitter

ಸಚಿವ ಸಂಪುಟದಿಂದ ರೇಣುಕಾಚಾರ್ಯ ವಜಾ

    User Rating:  / 1

ಬೆಂಗಳೂರು(ಮಾ.27): ಬಿಜೆಪಿಯಿಂದ 6 ವರ್ಷ ಕಾಲ ಉಚ್ಛಾಟಿತಗೊಂಡಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಅವರನ್ನ ಇದೀಗ ಸಚಿವಸಂಪುಟದಿಂದಲೂ ಹೊರದಬ್ಬಲಾಗಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಶಿಫಾರಸಿನ ಮೇರೆ ರಾಜ್ಯಪಾಲರು ಅಬಕಾರಿ ಸಚಿವರನ್ನ ಸಂಪುಟದಿಂದ ವಜಾ ಮಾಡಿದ್ದಾರೆ.

ಯಡಿಯೂರಪ್ಪನವರ ಬಲಗೈ ಬಂಟನೆಂದೇ ಹೆಸರುವಾಸಿಯಾದ ಎಂ.ಪಿ.ರೇಣುಕಾಚಾರ್ಯ ತಾವಾಗೇ ಸರ್ಕಾರ ಮತ್ತು ಪಕ್ಷವನ್ನ ತೊರೆಯುವ ಸಾಧ್ಯತೆ ಇತ್ತಾದ್ದರಿಂದ ಈ ಹೊಸ ಬೆಳವಣಿಗೆ ಅನಿರೀಕ್ಷಿತವಾಗಿಯೇನೂ ಇರಲಿಲ್ಲ. ಸದಾನಂದಗೌಡ, ಅನಂತಕುಮಾರ್, ಪ್ರಹ್ಲಾದ್ ಜೋಷಿ ಮೊದಲಾದ ಬಿಜೆಪಿ ಪ್ರಮುಖ ನಾಯಕರ ವಿರುದ್ಧ ರೇಣುಕಾಚಾರ್ಯರು ಭ್ರಷ್ಟಾಚಾರದ ಆರೋಪಗಳನ್ನ ಹೊರಿಸಿದಾಗಲೇ ಅವರ ಉಚ್ಛಾಟನೆಗೆ ಕೌಂಟ್ ಡೌನ್ ಶುರುವಾಗಿತ್ತು.

ಪಕ್ಷದ ಶಿಸ್ತಿನ ಕಾರಣವೊಡ್ಡಿ ನಿನ್ನೆ ರಾತ್ರಿಯೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ರೇಣುಕಾರ್ಯರನ್ನ ಆರು ವರ್ಷಗಳ ಉಚ್ಛಾಟಿಸಲಾಗಿತ್ತು. ನಂತರ, ಸಿಎಂ ಜಗದೀಶ್ ಶೆಟ್ಟರ್ ಅವರು ರೇಣುಕಾಚಾರ್ಯರನ್ನ ಸಚಿವ ಸಂಪುಟದಿಂದಲೂ ಕೈಬಿಡುವಂತೆ ರಾಜ್ಯಪಾಲ ಭಾರದ್ವಜ್ ಅವರಿಗೆ ಶಿಫಾರಸು ಮಾಡಿ ಪತ್ರ ಬರೆದಿದ್ದರು. ರಾಜ್ಯಪಾಲರು ಇಂದು ಮುಖ್ಯಮಂತ್ರಿಗಳ ಶಿಫಾರಸನ್ನು ಮಾನ್ಯ ಮಾಡಿ ರೇಣುಕಾಚಾರ್ಯರಿಗೆ ಸಂಪುಟದಿಂದ ಗೇಟ್ ಪಾಸ್ ನೀಡಲು ನಿರ್ಧರಿಸಿದ್ದಾರೆ....

ಇನ್ನೀಗ, ರೇಣುಕಾಚಾರ್ಯರ ಮುಂದಿನ ಕಾರ್ಯಸ್ಥಳ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷವೇ ಆಗಲಿರುವುದು ಖಚಿತ.....

 

 

 

Add comment
 

More items in this section

ARCHIVED ARTICLES