FacebookTwitter

ಹಿರಿಯ ಅಭಿನೇತ್ರಿ ಸುಕುಮಾರಿ ನಿಧನಕ್ಕೆ ಶೋಕ

    User Rating:  / 0

ಚೆನ್ನೈ(ಮಾ.27): ಹಿರಿಯ ಅಭಿನೇತ್ರಿ ಎಸ್.ಸುಕುಮಾರಿ ಅವರ ನಿಧನಕ್ಕೆ ದೇಶಾದ್ಯಂತ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ. 74 ವರ್ಷದ ಸುಕುಮಾರಿಯವರು ನಿನ್ನೆ ಸಂಜೆ ತಮ್ಮ ನಿವಾಸದಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ಸಾವಿಗೀಡಾಗಿದ್ದರು.

ಖ್ಯಾತ ಚಿತ್ರ ತಯಾರಕ ಭೀಮ್ ಸಿಂಗ್ ಅವರ ಪತ್ನಿಯಾದ ಸುಕುಮಾರಿ ಅವರು ಬಹುಭಾಷಾ ಕಲಾವಿದರಾಗಿದ್ದರು. ಮಲಯಾಳಂ ಚಿತ್ರರಂಗದ ಪ್ರಮುಖ ನಟಿಯಾಗಿದ್ದ ಸುಕುಮಾರಿಯವರು ಹಲವು ಭಾಷೆಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದರು. ಮಲಯಾಳಂ, ತಮಿಳು, ತೆಲುಗು, ಹಿಂದಿ, ಒರಿಯಾ, ಬಂಗಾಳಿ ಮೊದಲಾದ ಭಾಷೆಗಳಲ್ಲಿ 2500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ...

ಎಂಜಿಆರ್, ಶಿವಾಜಿ ಗಣೇಶನ್, ನಾಗೇಶ್ವರರಾವ್ ಮೊದಲಾದ ಹಳೇ ತಲೇಮಾರಿನ ನಾಯಕರು, ರಜನೀಕಾಂತ್, ಕಮಲಹಾಸನ್, ಮಮ್ಮೂಟಿ, ಮೋಹನಲಾಲ್ ಮೊದಲಾದ ಹಿರಿಯ ಸ್ಟಾರ್ ಗಳೊಂದಿಗೂ ನಟಿಸಿದಂಥ ಅಪ್ಪಟ ಕಲಾವಿದೆ ಸುಕುಮಾರಿ.

ಸುಕುಮಾರಿ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಮ್ಮೂಟಿ, ಶರತ್ ಕುಮಾರ್, ಖುಷ್ಬು, ಶ್ರೀದೇವಿ, ಪ್ರಿಯಾಮಣಿ ಮೊದಲಾದ ಕಲಾವಿದರು ಕಂಬನಿ ಮಿಡಿದಿದ್ದಾರೆ....

 

 

 

Add comment




 

More items in this section

ARCHIVED ARTICLES