FacebookTwitter

ಬಿಎಸ್ಪಿ ನಾಯಕ ಕೊಲೆಗೆ ಬಳಸಿದ ಕಾರು ಸಿಕ್ತು ಹಂತಕರು ಸಿಕ್ಕಿಲ್ಲ

    User Rating:  / 0
ದೀಪಕ್ ಭಾರದ್ವಾಜ್

ನವದೆಹಲಿ: ಬಹುಜನ ಸಮಾಜ ಪಕ್ಷದ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಭಾರದ್ವಜ್ ಅವರ ಹತ್ಯೆಗೆ ಬಳಸಲಾದ ಸ್ಕೋಡಾ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ದೆಹಲಿಯಿಂದ 150 ಕಿ.ಮೀ ದೂರದಲ್ಲಿರುವ ಹರ್ಯಾಣದ ಜಿಂದ್ ಪ್ರದೇಶದಿಂದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಗುಂಡು ಹಾರಿಸಿ ಹತ್ಯೆ ನಡೆಸಿದ ಕೊಲೆಗಾರರು ದೆಹಲಿಯ ಖೇರಾ ಪ್ರದೇಶದವರಾಗಿದ್ದಾರೆಂದು ತಿಳಿದುಬಂದಿದ್ದು, ಇವರೆಲ್ಲರ ಮುಖ ಚಹರೆ ಈಗಾಗಲೇ ಪೊಲೀಸ ಬಳಿಯಿದ್ದು ಬಂಧನಕ್ಕೆ ಚುರುಕು ಕಾರ್ಯಾಚರಣೆ ನಡೆಸಿದ್ದಾರೆ.

ಕೊಲೆಗಾರರು ಈಗಾಗಲೇ ಸಾಕಷ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರೇ ಆಗಿದ್ದರೂ, ಅಷ್ಟೇನು ನುರಿತ ಶೂಟರುಗಳೇನಲ್ಲ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಫ್ಲಾಶ್ ಬ್ಯಾಕ್...

ಉದ್ಯಮಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕ ದೀಪಕ್ ಭಾರದ್ವಾಜ್ ಅವರು ಮಂಗಳವಾರ ಮುಂಜಾನೆ ದೆಹಲಿಯ ದಕ್ಷಿಣ ವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಅಪರಿಚಿತ ಆಗಂತುಕರಿಂದ ಹತರಾಗಿದ್ದರು.

ಮೃತ ದೀಪಕ್ ಭಾರದ್ವಾಜ್ ಅವರಿಗೆ 62 ವರ್ಷ ವಯಸ್ಸಾಗಿದ್ದು, ಇವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಲ್ಲದೆ, ರಿಯಲ್ ಎಸ್ಟೇಟ್ ಉದ್ಯಮ, ಹೊಟೇಲ್ ಉದ್ಯಮ, ಶಿಕ್ಷಣ (ಉದ್ಯಮ) ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು.

ದೆಹಲಿಯ ದಕ್ಷಿಣ ವಲಯದ ದ್ವಾರಕಾ ಮತ್ತು ಧಾನ್ಸಾ ಪ್ರದೇಶದಲ್ಲಿ ಎರಡು ಶಾಲೆ ತೆರೆಯುವ ಯೋಜನೆಯೂ ಇವರ ಮುಂದಿತ್ತು. ಅಲ್ಲದೆ, ಹರಿದ್ವಾರದಲ್ಲಿ ನಗರೀಕರಣ ಯೋಜನೆ ಮತ್ತು ದೆಹಲಿ-ಗುರುಗಾಂವ್ ಹೆದ್ದಾರಿಯಲ್ಲಿ ಹೊಟೇಲ್ ಸ್ಥಾಪಿಸುವ ಎಲ್ಲಾ ಸಿದ್ಧತೆ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಇವರ ಹತ್ಯೆಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ನಿಕಟ ಸಂಬಂಧವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು

ಮನೆಯ ಸುತ್ತಮುತ್ತಲೂ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು, ಪ್ರಕರಣ ಭೇದಿಸಲು ಪ್ರತ್ಯೇಕ ಆರು ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದರು. ಕೊಲೆಗಾರರ ಪತ್ತೆಗೆ ಹರ್ಯಾಣ, ಉತ್ತರಖಂಡ, ಉತ್ತರಾಂಚಲದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

 

 

 

Add comment
 

More items in this section

ARCHIVED ARTICLES