FacebookTwitter

ನೆರೆಯ ಪಾಕಿಸ್ತಾನದಲ್ಲಿ ಭಯಭೀತಿಯಲ್ಲಿ ಹೋಳಿ ಆಚರಣೆ

    User Rating:  / 0
ಹೋಲಿ ಆಚರಣೆ

ಕರಾಚಿ: ಪಾಕಿಸ್ತಾನದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಜನತೆ ಹೋಳಿ ಹಬ್ಬ ಆಚರಿಸಲು ಭಯಭೀತರಾಗಿರುವುದಾಗಿ ವರದಿಯಾಗಿದೆ. ಮಾರ್ಚ್ ಒಂಭತ್ತನೆ ತಾರೀಖಿನಂದು ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ಭೀತಿಯಿಂದ ಇನ್ನೂ ಹೊರಬರದ ಅಲ್ಪಸಂಖ್ಯಾತರು ಭಯಭೀತಿಯಿಂದ ಹೋಳಿ ಆಚರಿಸುತ್ತಿರುವುದಾಗಿ ತಿಳಿದುಬಂದಿದೆ.

ಇದೀಗ ಭಯಭೀತಿಯಿಂದ ಹೋಳಿ ಆಚರಿಸುತ್ತಿರುವ ಹಿಂದೂ ಸಮುದಾಯದ ಸ್ಥಿತಿಗತಿಯ ಕುರಿತು ಸ್ಪಷ್ಟನೆ ನೀಡಿರುವ ಸ್ಥಳೀಯ ನಾಯಕ ಚಂದರ್ ಕುಮಾರ್, ಯಾವುದೇ ಧರ್ಮಕ್ಕೆ ಅವಹೇಳನಕಾರಿಯಾಗುವ ರೀತಿಯಲ್ಲಿ ಭಾಷಣ ಮಾಡುವುದನ್ನು ಸಮ್ಮತಿಸಿಕೊಳ್ಳಲಾಗುವುದಿಲ್ಲ. ಆದರೆ ಇತ್ತಿಚೆಗೆ ಕ್ರೈಸ್ತ ಸಮುದಾಯದ ಮೇಲೆ ಬಹುಸಂಖ್ಯಾತರಿಂದ ನಡೆದ ಪ್ರತಿಕಾರದ ದಾಳಿ ನಮ್ಮನ್ನು ಭಯಭೀತಿಯಿಂದ ಹಬ್ಬ ಆಚರಿಸುವಂತೆ ಮಾಡಿದೆ ಎಂದಿದ್ದಾರೆ.

ಫ್ಲಾಶ್ ಬ್ಯಾಕ್....

ಕ್ರೈಸ್ತ ಸಮುದಾಯದ ಧಾರ್ಮಿಕ ನಾಯಕರೊಬ್ಬರು ಇಸ್ಲಾಂ ಧರ್ಮ ಪಾಲಕರ ಮನಸ್ಸಿಗೆ ಘಾಸಿ ಉಂಟಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಕುಪಿತರಾದ ಬಹುಸಂಖ್ಯಾತ ಮುಸಲ್ಮಾನರು ಕ್ರೈಸ್ತ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಮಾರ್ಚ್ 9 ರಂದು ದಾಳಿ ನಡೆಸಿದ್ದರು.

 

 

 

Add comment
 

More items in this section

ARCHIVED ARTICLES