FacebookTwitter

ಮಂಡ್ಯದಲ್ಲಿ ಅಂಬಿ ವಿರುದ್ಧವೇ ರೆಬೆಲ್?

    User Rating:  / 1

ಮಂಡ್ಯ: ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರೆಬೆಲ್ ಸ್ಟಾರ್ ಅಂಬರೀಷ್ ಸ್ಪರ್ಧಿಸುವ ವದಂತಿ ಇದೆ. ಇಲ್ಲಿಯ ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ನಾಯಕ ಆತ್ಮಾನಂದ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆನ್ನಲಾಗಿದೆ...

ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಅವರ ಬೆಂಬಲಿಗರು ಅಂಬರೀಷ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲಿನಲ್ಲಿ ತಂಗಿದ್ದ ಅಂಬಿ ಜೊತೆ ಆತ್ಮಾನಂದರ ಬೆಂಬಲಿಗರು ಮಾತುಕತೆ ನಡೆಸಿದ್ದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರದಿಂದ ನೀವು ಸ್ಪರ್ಧಿಸಬಾರದು, ಆತ್ಮಾನಂದರಿಗೆ ಟಿಕೆಟ್ ಸಿಗಲು ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿಕೊಂಡರೆನ್ನಲಾಗಿದೆ.

ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿರುವುದರಿಂದ ಅಂಬಿ ಕಕ್ಕಾಬಿಕ್ಕಿಯಾದ್ದಂತಿತ್ತು... ಆದರೂ ಅದನ್ನು ಎಲ್ಲಿಯೂ ತೋರಿಸಿಕೊಳ್ಳದ ಅವರು, ತಾವು ಎಲ್ಲಿ ಬೇಕಾದ್ರೂ ಸ್ಪರ್ಧಿಸಬಹುದು, ನನ್ನ ಸ್ಪರ್ಧೆಗೆ ಯಾರೂ ವಿರೋಧ ಮಾಡಲ್ಲ ಅಂತ ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ....

 

 

 

Add comment
 

More items in this section

ARCHIVED ARTICLES