FacebookTwitter

ಕಿಡ್ನಿ ಕದ್ದ ಕಳ್ಳ ಡಾಕ್ಟ್ರು ಜೈಲಿನಿಂದಲೇ ಧಮ್ಕಿ ಹಾಕಿ ಸಾಕ್ಷಿ ನಾಶಕ್ಕೆ ಯತ್ನ

    User Rating:  / 0
ಕಿಡ್ನಿ ಅಪಹರಣ

ಚಂಡೀಗಢ: ದೇಶದ ಜನತೆಯನ್ನೇ ಬೆಚ್ಚಿಬೀಳಿಸಿದ್ದ 2008 ರ ಗುರುಗಾಂವ್ ಕಿಡ್ನಿ ಸ್ಕ್ಯಾಮ್ ನ ಪ್ರಮುಖ ತಪ್ಪಿತಸ್ಥ ಡಾ.ಅಮಿತ್ ಕುಮಾರ್, ಇದೀಗ ಬೇರೆಯದೇ ಕಸರತ್ತು ನಡೆಸಲು ಮುಂದಾಗಿದ್ದು, ತನ್ನ ವಿರುದ್ಧ ದಾಖಲಾಗಿರುವ ಅಪರಾಧಗಳ ಪ್ರಮುಖ ಸಾಕ್ಷಿದಾರರಿಗೆ ಜೈಲಿನಿಂದಲೇ ಫೋನಾಯಿಸಿ ಧಮಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾನು ಎಸಗಿದ ತಪ್ಪಿಗೆ ಸಿಬಿಐ ನ್ಯಾಯಾಲಯದಿಂದ ಏಳು ವರ್ಷಗಳ ಸೆರೆವಾಸ ಶಿಕ್ಷೆಗೆ ಗುರಿಯಾಗಿರುವ ಡಾ.ಅಮಿತ್ ಕುಮಾರ್, ತಾನು ಕಂಬಿ ಎಣಿಸುತ್ತಿರುವ ಅಂಬಾಲ ಕೇಂದ್ರ ಕಾರಾಗೃಹದಿಂದಲೇ ತನ್ನ ತಮ್ಮ ಜೀವನ್ ಮತ್ತು ಗೆಳೆಯ ಬುಲ್ ಬುಲ್ ಅಲಿಯಾಸ್ ಶಲ್ಲುವಿಗೆ ಕರೆಮಾಡಿ ಅವರ ಮುಖಾಂತರ ತನ್ನ ವಿರುದ್ಧದ ಸಾಕ್ಷಿದಾರರಿಗೆ ಜೀವ ಬೆದರಿಕೆ ಹಾಕುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಸಿಬಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪರಾಧಿ ಡಾ.ಅಮಿತ್ ಕುಮಾರ್, ಆತನ ಗೆಳೆಯ ಶಲ್ಲು, ಸಹೋದರ ಜೀವನ್, ಹಾಗೂ ನೌಕರರಾದ ಲಕ್ಷ್ಮಣ್, ಜಗದೀಶ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇವರ ವಿರುದ್ಧ ದಾಖಲಾಗಿರುವ ಕಿಡ್ನಿ ಅಪಹರಣ ಪ್ರಕರಣದ ಪ್ರಮುಖ ಸಾಕ್ಷಿದಾರರ ಸಂಖ್ಯೆ 126 ರಷ್ಟಿತ್ತು. ಆನಂತರ ಇವರ ಬೆದರಿಕೆ ಮತ್ತು ವಿವಿಧ ಆಮಿಶಗಳಿಂದ ಸ್ವಯಂಪ್ರೇರಿತರಂತೆ ಮುಂದೆ ಬಂದ ಪ್ರಕರಣದ ಸಾಕ್ಷಿದಾರರು ಹಾಗೂ ಕಿಡ್ನಿ ಕಳಕೊಂಡ ಕೆಲವರು ಆರೋಪ ಹಿಂಪಡೆದಿದ್ದಾರೆ. ಇದೀಗ ಸಾಕ್ಷಿದಾರರ ಸಂಖ್ಯೆ 122 ಕ್ಕೆ ಇಳಿದಿದೆ.

ಫ್ಲ್ಯಾಶ್ ಬ್ಯಾಕ್.....

ದೆಹಲಿಯ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ ಗುರ್ಗಾಂವ್ ನಲ್ಲಿ ತನ್ನದೇ ಆಸ್ಪತ್ರೆಯೊಂದನ್ನು ಸ್ಥಾಪಿಸಿಕೊಂಡಿದ್ದ ಡಾ.ಅಮಿತ್ ಕುಮಾರ್, ಬಹುತೇಕ ಬಡಪಾಯಿಗಳನ್ನೇ ಗುರಿಮಾಡಿಕೊಂಡು ಚಿಕಿತ್ಸೆ ಕೊಡುವ ಆಮಿಷ ನೀಡಿ ಅವರ ಕಿಡ್ನಿಗಳನ್ನು ಅಕ್ರಮವಾಗಿ ದೋಚಿ ಅಮೆರಿಕ, ಬ್ರಿಟನ್, ಕೆನಡಾ, ಸೌದಿ ಅರೆಬಿಯಾ ಮತ್ತು ಗ್ರೀಸ್ ನ ಹಲವಾರು ಪ್ರಾಂತ್ಯಗಳಿಗೆ ದುಬಾರಿ ಬೆಳೆಗೆ ಮಾರಾಟ ಮಾಡುತ್ತಿದ್ದ. ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ನೇಪಾಳಕ್ಕೆ ಹೋಗಿ ಎಸ್ಕೇಪ್ ಆಗಲು ಯತ್ನಿಸಿದ ಡಾ.ಅಮಿತ್ ಕುಮಾರನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧನಕ್ಕೊಳಪಡಿಸಿದ್ದರು. ಕಿಡ್ನಿ ಕಳಕೊಂಡವರಲ್ಲಿ ಹಲವರು ಉತ್ತರ ಪ್ರದೇಶದ ಪಶ್ಚಿಮ ವಲಯ ಪ್ರದೇಶಕ್ಕೆ ಸೇರಿದ ಬಡಪಾಯಿ ಕಾರ್ಮಿಕರಾಗಿದ್ದರು.

 

 

 

Add comment
 

More items in this section

ARCHIVED ARTICLES