FacebookTwitter

ಲಂಕಾಕ್ಕೆ ನೀಡಿದ್ದ ನಮ್ಮ ಭೂಮಿಯನ್ನ ವಾಪಾಸು ಕೇಳಿ; ಕೇಂದ್ರಕ್ಕೆ ಜಯಾ ಒತ್ತಡ

    User Rating:  / 1
ನಮ್ಮ ಭೂಪ್ರದೇಶ ವಾಪಾಸು ನೀಡಿ

ಚೆನ್ನೈ: ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳ ನಡೆಸುತ್ತಿರುವ ಮಾರಕ ದಾಳಿಯ ಕುರಿತು ಸಂಬಂಧವೇ ಇಲ್ಲದಂತೆ ಕುಳಿತಿರುವ ಕೇಂದ್ರ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಭಾರತೀಯ ಮೀನುಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗದಿದ್ದರೆ 1974 ರಲ್ಲಿ ಶ್ರೀಲಂಕಾಕ್ಕೆ ನೀಡಲಾದ ನಮ್ಮದೇ ಭೂಮಿಯಾದ ಕಚ್ಚೈತೀವು ದ್ವೀಪವನ್ನು ವಾಪಾಸು ಪಡೆದುಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾದೀತು ಎಂದು ಗುಡುಗಿದ್ದಾರೆ.

ಭಾರತೀಯ ಮೀನುಗಾರರಿಗೆ ಕಿರುಕುಳ ನೀಡುವುದನ್ನು ಮುಂದುವರೆಸುತ್ತಾ ಬರುತ್ತಿರುವ ಶ್ರೀಲಂಕಾ ಸರ್ಕಾರದ ನಿಲುವಿನಿಂದ ಬೇಸತ್ತ ಜಯಾ, ಇದೇ ರೀತಿಯ ದೌರ್ಜನ್ಯವನ್ನು ಮುಂದುವರೆಸಿದರೆ ಒಪ್ಪಂದದ ಮೂಲಕ 1974 ರಲ್ಲಿ ನಾವು ಬಳುವಳಿಯಾಗಿ ನೀಡಲಾದ ನಮ್ಮದೇ ಭೂಮಿಯನ್ನು ನ್ಯಾಯಾಂಗ ತೀರ್ಪಿನ ಮೂಲಕವೇ ವಾಪಾಸು ಪಡೆಯಬೇಕಾದೀತು ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ವಾದಕ್ಕೆ ನ್ಯಾಯಾಂಗದಲ್ಲಿ ಜಯ ಸಿಗುವ ಆತ್ಮ ವಿಶ್ವಾಸದಲ್ಲಿ ಇದೇ ರೀತಿಯ ನಿದರ್ಶನವೊಂದನ್ನು ಉಲ್ಲೇಖಿಸಿರುವ ಜಯಾ, ಅಂದಿನ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ದ ವಶದಲ್ಲಿದ್ದ ನಮ್ಮದೇ ಆದ 75 ಚದರ ಕಿ.ಮೀ ಭೂಪ್ರದೇಶ ಬೆರುಬಾರಿಯನ್ನು ವಾಪಾಸು ಪಡೆದುಕೊಳ್ಳುವ ಸಂಬಂಧ ಪಶ್ಚಿಮ ಬಂಗಾಳ ರಾಜ್ಯ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್, 1960 ರಲ್ಲಿ ಮಹತ್ವದ ತೀರ್ಪು ನೀಡುವ ಮೂಲಕ ಪಶ್ಚಿಮ ಬಂಗಾಳ ರಾಜ್ಯದ ವಾದಕ್ಕೆ ಸಮ್ಮತಿಸಿ ಆ ಭೂಪ್ರದೇಶವನ್ನು (ಬೆರುಬಾರಿ) ರಾಜ್ಯದ ಅದೀನಕ್ಕೆ ಒಪ್ಪಿಸಿತ್ತು.

ಪ್ರಾದೇಶಿಕ ಹಕ್ಕುಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲಿಸಲು ಶ್ರೀಲಂಕಾ ಸರ್ಕಾರ ಪದೇ ಪದೇ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಮೀನುಗಾರರ ರಕ್ಷಣೆಯ ಹಿತದೃಷ್ಟಿಯಿಂದ ತಮ್ಮದೇ ಭೂಮಿಯನ್ನು ವಾಪಾಸು ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಪ್ರತಿಪಾಧಿಸಿದ್ದಾರೆ.

 

 

 

Add comment




 

More items in this section

ARCHIVED ARTICLES