FacebookTwitter

ಶ್ರೀಲಂಕಾ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆಗೆ ಒತ್ತಡ ಹೇರಲು ಕೇಂದ್ರಕ್ಕೆ ತಮಿಳುನಾಡು ಒತ್ತಾಯ

    User Rating:  / 0
ಶ್ರೀಲಂಕಾ ಯುದ್ಧಾಪರಾಧ

ಚೆನ್ನೈ: ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ಸ್ಥಾಪನೆ ಸೇರಿದಂತೆ ವಿವಿಧ ಪರಿಹಾರ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮತದಾನದ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ತಮಿಳುನಾಡು ಸದನ ಬುಧವಾರ ಒತ್ತಾಯಿಸಿದೆ.

ಈ ಸಂಬಂಧ ತಮಿಳುನಾಡಿನ ಸದನದಲ್ಲಿ ಮಂಡಿಸಲಾದ ಗೊತ್ತುವಳಿಗೆ ಯಾವುದೇ ಪಕ್ಷಬೇಧವಿಲ್ಲದೆ ಸರ್ವಸಮ್ಮತ ವ್ಯಕ್ತವಾಗಿತ್ತು.

ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳು ಜನಾಂಗೀಯರ ಸುಭದ್ರ ಭವಿಷ್ಯಕ್ಕಾಗಿ ಈ ಜನಾಭಿಪ್ರಾಯದ ನಿರ್ಣಯ ಅಗತ್ಯವಿರುವುದಾಗಿ ಗೊತ್ತುವಳಿಯಲ್ಲಿ ಪ್ರತಿಪಾಧಿಸಲಾಗಿದ್ದು, ಈ ಮತದಾನ ಪ್ರಕ್ರಿಯೆಯಲ್ಲಿ ಪ್ರಸ್ತುತ ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳರು ಹಾಗೂ ಇತರ ದೇಶದಲ್ಲಿ ನೆಲೆಸಿರುವ ಶ್ರೀಲಂಕಾ ತಮಿಳರು ಭಾಗವಹಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೆ, 2009ರಲ್ಲಿ ನಡೆದ ಈಳಂ ಯುದ್ದದಲ್ಲಿ ಎಸಗಲಾದ ಯುದ್ಧಾಪರಾಧ ಕುರಿತು ಅಂತಾರಾಷ್ಟ್ರೀಯಮಟ್ಟದ ಪ್ರತ್ಯೇಕ ತನಿಖೆ ನಡೆಸಿ, ನರಮೇಧಕ್ಕೆ ಕಾರಣೀಕರ್ತರನ್ನು ಅಂತಾರಾಷ್ಟ್ರೀಯ ನ್ಯಾಯಾಂಗದ ಮುಂದಿಟ್ಟು ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಶ್ರೀಲಂಕಾವನ್ನು ಸ್ನೇಹಿ ರಾಷ್ಟ್ರ ಎಂದು ಪರಿಗಣಿಸುವುದನ್ನು ಭಾರತ ಬಿಡಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ ಶ್ರೀಲಂಕಾದಲ್ಲಿ ತಮಿಳರ ಮೇಲಿನ ಕಿರುಕುಳ ದಬ್ಬಾಳಿಕೆ ನಿಲ್ಲುವವರೆಗೂ ಆ ರಾಷ್ಟ್ರದೊಂದಿಗಿನ ವ್ಯಾಪಾರ ವ್ಯವಹಾರಕ್ಕೆ ತಡೆಹೇರುವ ಮೂಲಕ ಆರ್ಥಿಕ ದಿಗ್ಬಂಧನ ಹೇರಬೇಕಾಗಿದೆ ಎಂದು ಒತ್ತಾಯಿಸಲಾಗಿದೆ.

 

 

 

Add comment




 

More items in this section

ARCHIVED ARTICLES