FacebookTwitter

`ಲಾಡ್'ಗೆ ಟಿಕೆಟ್ ನೀಡದಿದ್ರೆ ಮಂಗಳಮುಖಿ ಸಾವು?

    User Rating:  / 0

ಬಳ್ಳಾರಿ(ಮಾ.28): ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಅನ್ನು ಅನಿಲ್ ಲಾಡ್ ಅವರಿಗೆ ಕೊಡಬೇಕೆಂದು ಮಂಗಳಮುಖಿ ಕಾರ್ಪೊರೇಟರ್ ಆಗ್ರಹಿಸಿದ್ದಾರೆ. ಅನಿಲ್ ಲಾಡ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಸದಸ್ಯೆ ಪರ್ವಿನ್ ಬಾನು ಬೆದರಿಕೆ ಹಾಕಿದ್ದಾರೆ.

ಕಳೆದ ಚುನಾವಣೆಯಲ್ಲಿ ಅನಿಲ್ ಲಾಡ್ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಅನಿಲ್ ಲಾಡ್ ಗೆಲ್ಲುವ ಸಾಧ್ಯತೆ ಹೆಚ್ಚು.. ಹೀಗಾಗಿ ಅವರಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಮಂಗಳಮುಖಿ ಪರ್ವಿನ್ ಅವರು ಕೆಪಿಸಿಸಿಗೆ ಬೆದರಿಕೆ ಹಾಕಿದ್ದಾರೆ...

ಇತ್ತೀಚೆಗೆ ನಡೆದ ಬಳ್ಳಾರಿ ನಗರಸಭೆ ಚುನಾವಣೆಯಲ್ಲಿ ಪರ್ವಿನ್ ಬಾನು ಅವರು ವಾರ್ಡ್ 4ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಿಸಿದ್ದರು... ಪರ್ವೀನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲು ಅನಿಲ್ ಲಾಡ್ ಅವರೇ ಕಾರಣ. ಅಲ್ಲದೇ, ಲಾಡ್ ಅವರ ಕೃಪಾಶೀರ್ವಾದವೇ ಪರ್ವೀನ್ ಬಾನು ಗೆಲುವಿಗೆ ಕಾರಣವಾಗಿತ್ತೆಂಬುದನ್ನು ಇಲ್ಲಿ ಗಮನಿಸಬಹುದು....

 

 

 

Add comment
 

More items in this section

ARCHIVED ARTICLES